- Kannada News Photo gallery Christmas 2022: Rashmika Mandanna Aishwarya Rai and other celebrities wish merry Christmas
Christmas 2022: ಸೆಲೆಬ್ರಿಟಿಗಳ ಕ್ರಿಸ್ಮಸ್ ಸಂಭ್ರಮ: ರಶ್ಮಿಕಾ, ಐಶ್ವರ್ಯಾ ರೈ, ಪ್ರೀತಿ ಜಿಂಟಾ ಮನೆಯಲ್ಲಿ ಸಡಗರ
ವಿಶ್ವಾದ್ಯಂತ ಇಂದು (ಡಿ.25) ಸಡಗರದಿಂದ ಕ್ರಿಸ್ಮಸ್ ಹಬ್ಬ ಆಚರಿಸಲಾಗುತ್ತಿದೆ. ಸೆಲೆಬ್ರಿಟಿಗಳ ಮನೆಯಲ್ಲೂ ಸಂಭ್ರಮ ಜೋರಾಗಿದೆ.
Updated on:Dec 25, 2022 | 4:35 PM

ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿರುವ ನಟಿ ರಶ್ಮಿಕಾ ಮಂದಣ್ಣ ಅವರು ಕ್ರಿಮ್ಮಸ್ ಹಬ್ಬಕ್ಕಾಗಿ ಬ್ರೇಕ್ ಪಡೆದಿದ್ದಾರೆ. ಕ್ರಿಸ್ಮಸ್ ಟ್ರೀ ಪಕ್ಕದಲ್ಲಿ ನಿಂತು ಪೋಸ್ ನೀಡಿರುವ ಅವರು ತಮ್ಮ ಅಭಿಮಾನಿಗಳಿಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ.

ನಟಿ ಪ್ರೀತಿ ಜಿಂಟಾ ಅವರ ಮನೆಯಲ್ಲಿ ಕ್ರಿಸ್ಮಸ್ ಆಚರಿಸಲಾಗಿದೆ. ಹಲವು ವಿಡಿಯೋ ಮತ್ತು ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಹಬ್ಬದ ಪ್ರಯುಕ್ತ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರೀತಿ ಜಿಂಟಾ ಶುಭ ಕೋರಿದ್ದಾರೆ.

ನಟಿ ಐಶ್ವರ್ಯಾ ರೈ ಬಚ್ಚನ್ ಅವರು ಮಗಳು ಆರಾಧ್ಯ ಜೊತೆ ಸೇರಿ ಕ್ರಿಸ್ಮಸ್ ಆಚರಿಸಿದ್ದಾರೆ. ಇಬ್ಬರೂ ಖುಷಿಯಿಂದ ಫೋಟೋಗೆ ಪೋಸ್ ನೀಡಿದ್ದಾರೆ. ಕಮೆಂಟ್ಸ್ ಮೂಲಕ ಅಭಿಮಾನಿಗಳು ವಿಶ್ ಮಾಡಿದ್ದಾರೆ.

ನಟಿ ಕರೀಷ್ಮಾ ಕಪೂರ್ ಅವರು ಸಂತಾ ಕ್ಲಾಸ್ ರೀತಿ ಡ್ರೆಸ್ ಮಾಡಿಕೊಂಡಿದ್ದಾರೆ. ಕ್ರಿಸ್ಮಸ್ ಟ್ರೀ ಎದುರು ಕುಳಿತು, ತಮ್ಮ ಮುದ್ದು ಶ್ವಾನದ ಜೊತೆ ಅವರು ಪೋಸ್ ನೀಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ.

ಫರ್ಹಾನ್ ಅಖ್ತರ್ ಮತ್ತು ಶಿಬಾನಿ ದಾಂಡೇಕರ್ ಅವರು ಮದುವೆ ಬಳಿಕ ತಮ್ಮ ಮೊದಲ ವರ್ಷದ ಕ್ರಿಸ್ಮಸ್ ಆಚರಿಸಿದ್ದಾರೆ. ಸಿನಿಮಾ ಕೆಲಸಗಳಿಂದ ಬಿಡುವು ಪಡೆದುಕೊಂಡು ಹಬ್ಬದ ಸಂಭ್ರಮದಲ್ಲಿ ಅವರು ಭಾಗಿ ಆಗಿದ್ದಾರೆ.
Published On - 4:35 pm, Sun, 25 December 22




