Bhajarangi 2: ಶಿವಣ್ಣನ ‘ಭಜರಂಗಿ 2’ ಚಿತ್ರಕ್ಕೆ ಗ್ರ್ಯಾಂಡ್ ಓಪನಿಂಗ್; ಇಲ್ಲಿದೆ ಫೋಟೋ ಗ್ಯಾಲರಿ
TV9 Web | Updated By: ಮದನ್ ಕುಮಾರ್
Updated on:
Oct 29, 2021 | 8:29 AM
Shivarajkumar: ನಟ ಶಿವರಾಜ್ಕುಮಾರ್ ಮತ್ತು ನಿರ್ದೇಶಕ ಎ. ಹರ್ಷ ಕಾಂಬಿನೇಷನ್ನ ‘ಭಜರಂಗಿ 2’ ಚಿತ್ರವನ್ನು ಸಿನಿಪ್ರಿಯರು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ಹಲವು ಚಿತ್ರಮಂದಿರಗಳಲ್ಲಿ ಮುಂಜಾನೆ 5 ಗಂಟೆಗೆ ಶೋ ಆರಂಭ ಆಗಿದೆ.
1 / 7
‘ಭಜರಂಗಿ 2’ ಸಿನಿಮಾವನ್ನು ಬರಮಾಡಿಕೊಳ್ಳಲು ನಿನ್ನೆ ರಾತ್ರಿಯಿಂದಲೇ ಅಭಿಮಾನಿಗಳು ತಯಾರಿ ಮಾಡಿಕೊಂಡಿದ್ದರು. ಥಿಯೇಟರ್ ಮುಂಭಾಗದಲ್ಲಿ ಪಟಾಕಿ ಸಿಡಿಸಿ, ಕುಂಬಳಕಾಯಿ ಒಡೆದು ಸಂಭ್ರಮಿಸಿದರು. ಕಟೌಟ್ಗೆ ಹಾಲಿನ ಅಭಿಷೇಕ ಮಾಡಲಾಯಿತು.
2 / 7
ಮುಂಜಾನೆಯೇ ಶುರುವಾದ ಫ್ಯಾನ್ಸ್ ಶೋನಲ್ಲಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಚಿತ್ರ ಪ್ರದರ್ಶನ ಆರಂಭ ಆಗುತ್ತಿದ್ದಂತೆಯೇ ಥಿಯೇಟರ್ನಲ್ಲಿ ಅಭಿಮಾನಿಗಳ ಸಂಭ್ರಮ ಜೋರಾಯಿತು. ಒಟ್ಟಿನಲ್ಲಿ ಮೊದಲ ದಿನವೇ ‘ಭಜರಂಗಿ 2’ ಧೂಳೆಬ್ಬಿಸಿದೆ.
3 / 7
ಅಭಿಮಾನಿಗಳ ಜೊತೆ ಸಿನಿಮಾ ನೋಡಲು ಶಿವರಾಜ್ಕುಮಾರ್ ಕೂಡ ಚಿತ್ರಮಂದಿರಕ್ಕೆ ಮುಂಜಾನೆಯೇ ಆಗಮಿಸಿದರು. ಅಭಿಮಾನಿಗಳ ಉತ್ಸಾಹ ಕಂಡು ಅವರು ಖುಷಿಪಟ್ಟರು. ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿರುವುದು ಇಡೀ ತಂಡದ ಸಂತಸಕ್ಕೆ ಕಾರಣ ಆಗಿದೆ.
4 / 7
ಚಿತ್ರಮಂದಿರಕ್ಕೆ ಬಂದ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ನೆಚ್ಚಿನ ಸ್ಟಾರ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹರಸಾಹಸ ಪಟ್ಟರು. ಶಿವಣ್ಣನಿಗೆ ಜೈಕಾರ ಕೂಗಿ ಸಂಭ್ರಮಿಸಿದರು.
5 / 7
ಜಾನಪದ ತಂಡಗಳನ್ನು ಕರೆಸಿ ನೃತ್ಯ ಮಾಡಿಸಲಾಗಿದೆ. ಈ ಎಲ್ಲ ದೃಶ್ಯಗಳನ್ನು ನೋಡುತ್ತಿದ್ದರೆ ಇದು ಯಾವುದೇ ಹಬ್ಬಕ್ಕೂ ಕಡಿಮೆ ಇಲ್ಲ ಎಂಬುದು ಖಚಿತ. ಹಾಗಾಗಿ ಶಿವಣ್ಣನ ಫ್ಯಾನ್ಸ್ ಪಾಲಿಗೆ ಇಂದೇ ದೀಪಾವಳಿ ಬಂದಿದೆ.
6 / 7
ಬೆಂಗಳೂರಿನ ಜೆಪಿ ನಗರದ ಸಿದ್ದೇಶ್ವರ ಚಿತ್ರಮಂದಿರ, ಚಿತ್ರದುರ್ಗದ ಪ್ರಸನ್ನ ಥಿಯೇಟರ್, ದಾವಣಗೆರೆಯ ವಸಂತಾ ಟಾಕೀಸ್ ಸೇರಿದಂತೆ ಅನೇಕ ಕಡೆಗಳಲ್ಲಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಎಲ್ಲೆಲ್ಲೂ ಹಬ್ಬದ ವಾತಾವರಣ ನಿರ್ಮಾಣ ಆಗಿದೆ.
7 / 7
ಸೂರ್ಯೋದಯಕ್ಕೂ ಮುನ್ನವೇ ಕೆಲವು ಕಡೆಗಳಲ್ಲಿ ಸಿನಿಮಾ ಪ್ರದರ್ಶನ ಆರಂಭ ಆಗಿದೆ. ಮುಂಜಾನೆ 5 ಗಂಟೆಗೆ ಫಸ್ಟ್ ಡೇ ಫಸ್ಟ್ ಶೋ ಕಣ್ತುಂಬಿಕೊಂಡ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಚಿತ್ರಕ್ಕೆ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಧರ್ಮಣ್ಣ, ವಸಿಷ್ಠ ಸಿಂಹ ಮುಂತಾದ ಸೆಲೆಬ್ರಿಟಿಗಳು ಬಂದ ಸಿನಿಮಾ ವೀಕ್ಷಿಸಿದ್ದಾರೆ.