
ನಾಗ ಚೈತನ್ಯ ಅವರಿಗೆ ರೇಸ್ ಅಂದ್ರೆ ಸಖತ್ ಇಷ್ಟ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಅವರು ಆಗಾಗ ಹಂಚಿಕೊಳ್ಳುತ್ತಾರೆ. ಅವರ ಬಳಿ ಹಲವು ಸೂಪರ್ ಕಾರ್ಗಳು ಕೂಡ ಇವೆ. ಈಗ ಅವರ ಪತ್ನಿಗೂ ರೇಸ್ ಎಂದರೆ ಸಖತ್ ಇಷ್ಟ ಎಂಬ ವಿಚಾರ ಗೊತ್ತಾಗಿದೆ.

ನಾಗ ಚೈತನ್ಯ ಅವರು ರೇಸ್ ಬಗ್ಗೆ ಸಾಕಷ್ಟು ಆಸಕ್ತಿ ತೋರಿಸುತ್ತಾರೆ. ಶೋಭಿತಾ ಅವರಿಗೂ ರೇಸ್ ಇಷ್ಟ. ಅವರು ರೇಸ್ ಮಾಡುತ್ತಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಗಮನ ಸೆಳೆದಿದ್ದಾರೆ. ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ.

ಶೋಭಿತಾ ಅವರು ಹೆಲ್ಮೆಟ್ ಧರಿಸಿ ಕಾರಿನಲ್ಲಿ ಕುಳಿತ ಫೋಟೋನ ಹಂಚಿಕೊಂಡಿದ್ದಾರೆ. ಈ ರೀತಿ ರೇಸ್ ಮಾಡುವಾಗ ಅಪಘಾತವಾದರೆ ತಲೆಗೆ ಪೆಟ್ಟು ಬೀಳೋ ಸಾಧ್ಯತೆ ಇರುತ್ತದೆ. ಈ ಕಾರಣಕ್ಕೆ ತಲೆಗೆ ಹೆಲ್ಮೆಟ್ ಧರಿಸುತ್ತಾರೆ.

ನಾಗ ಚೈತನ್ಯ ಅವರು ಕಾರಿನಲ್ಲಿ ಕುಳಿತಿದ್ದು, ಇದನ್ನು ಶೋಭಿತಾ ದೂರದಿಂದ ನೋಡುತ್ತಾ ಇದ್ದಾರೆ. ಈ ಫೋಟೋಗಳು ಗಮನ ಸೆಳೆದಿವೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ಗಳು ಸಿಕ್ಕಿವೆ. ಈ ಫೋಟೋ ಮೂಲಕ ತಮಗೂ ರೇಸ್ ಇಷ್ಟ ಎಂಬುದನ್ನು ಅವರು ಹೇಳಿದ್ದಾರೆ.

ಶೋಭಿತಾ ಹಾಗೂ ನಾಗ ಚೈತನ್ಯ ಇತ್ತೀಚೆಗೆ ಬೇರೆ ದೇಶಕ್ಕೆ ಹನಿಮೂನ್ಗೆ ತೆರಳಿದ್ದರು. ಈ ಫೋಟೋಗಳನ್ನು ಅವರು ಹಂಚಿಕೊಂಡಿದ್ದರು. ವಿವಾಹದ ಬಳಿಕ ಅವರು ಸುತ್ತಾಟ ನಡೆಸಿದ ಮೊದಲ ಜಾಗ ಇದಾಗಿದೆ.
Published On - 11:14 am, Sat, 15 March 25