ಬೆಳ್ಳಂಬೆಳಗ್ಗೆಯೇ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುತ್ತೀರಾ? ಇನ್ನಾದರೂ ಈ ಅಭ್ಯಾಸ ಬಿಟ್ಟುಬಿಡಿ, ನಿಮಗಾಗಿ ಇಲ್ಲಿದೆ ಆರೋಗ್ಯಕರ ಸಲಹೆ!

|

Updated on: Apr 18, 2023 | 6:06 AM

Bed Tea Side Effects: ಬೆಳ್ಳಂಬೆಳಗ್ಗೆಯೇ ಹಾಸಿಗೆಯಲ್ಲಿದ್ದಾಗಲೇ ಚಹಾ ಕುಡಿಯುತ್ತಿದ್ದೀರಾ? ಇನ್ನಾದರೂ ಈ ಅಭ್ಯಾಸ ಬಿಟ್ಟುಬಿಡಿ, ಇಲ್ಲವಾದರೆ ನಿಮ್ಮ ಆರೋಗ್ಯಕ್ಕೆ ಬರಲಿದೆ ಸಂಚಕಾರ!

1 / 7
ಬಹಳಷ್ಟು ಮಂದಿ ಬೆಳಿಗ್ಗೆ ಎದ್ದ ತಕ್ಷಣ ರಿಫ್ರೆಶ್‌ ಆಗಲು ಟೀ ಕುಡಿಯುತ್ತಾರೆ. ಇದನ್ನು ಸಾಮಾನ್ಯವಾಗಿ ಎಲ್ಲರೂ ಬೆಡ್ ಟೀ ಎಂದು ಹೇಳುತ್ತಾರೆ. ಚಹಾದೊಂದಿಗೆ ದಿನವನ್ನು ಪ್ರಾರಂಭಿಸುವ ವಾಡಿಕೆ ನಮ್ಮ ದೇಶದಲ್ಲಿ ಬಹಳ ಪುರಾತನವಾದದ್ದು. ಇದು ತುಂಬಾ ಜನರಿಗೆ ಅಭ್ಯಾಸವಾಗಿ ಮಾರ್ಪಟ್ಟಿದೆ. ಹಾಗಾದರೆ ಖಾಲಿ ಹೊಟ್ಟೆಯೊಂದಿಗೆ ಟೀ ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾ ಹಾನಿಯಾಗುತ್ತಿದೆ ಎಂದು ತಜ್ಞರು ಹೇಳುತ್ತಾರೆ.

2 / 7
ಬೆಳ್ಳಂಬೆಳಗ್ಗೆಯೇ ಹಾಸಿಗೆಯಲ್ಲಿದ್ದಾಗಲೇ ಚಹಾ ಕುಡಿಯುತ್ತಿದ್ದೀರಾ? ಇನ್ನಾದರೂ ಈ ಅಭ್ಯಾಸ ಬಿಟ್ಟುಬಿಡಿ, ಇಲ್ಲವಾದರೆ ನಿಮ್ಮ ಆರೋಗ್ಯಕ್ಕೆ ಬರಲಿದೆ ಸಂಚಕಾರ!

3 / 7
ಅಲ್ಸರ್: ಖಾಲಿ ಹೊಟ್ಟೆಯಲ್ಲಿ ಟೀ ಸೇವಿಸಿದರೆ.. ಹೊಟ್ಟೆಯ ಒಳಭಾಗದಲ್ಲಿ ಅಲ್ಸರ್ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದಲೇ.. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವ ಅಭ್ಯಾಸವಿದ್ದರೆ ಬಿಟ್ಟುಬಿಡಿ. ಅದನ್ನು ಇಂದೇ ಬಿಟ್ಟುಬಿಡಬೇಕು ಎಂದು ತಜ್ಞರು ಆರೋಗ್ಯಕರ ಸಲಹೆ ನೀಡಿದ್ದಾರೆ.

4 / 7
ಬ್ಲಡ್ ಶುಗರ್: ಬೆಳಿಗ್ಗೆ ಖಾಲಿ ಹೊಟ್ಟೆಯೊಂದಿಗೆ ಸಕ್ಕರೆಯಿಂದ ಮಾಡಿದ ಟೀ ಕುಡಿಯುವುದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಜರ್ರನೆ ಏರುತ್ತದೆ. ಇದರೊಂದಿಗೆ ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶಗಳು ತಲುಪುವುದೇ ಇಲ್ಲ. ಮಧುಮೇಹ ಬರುವ ಅಪಾಯ ಕೂಡ ಹೆಚ್ಚಾಗುತ್ತದೆ.

5 / 7
ಒತ್ತಡ: ಆಗಾಗ್ಗೆ ನಾವು ಟೆನ್ಷನ್, ಒತ್ತಡವನ್ನು ಕಡಿಮೆ ಮಾಡಲು ಬೆಳ್ಳಂಬೆಳಗ್ಗೆಯೇ ಟೀ ಕುಡಿಯುತ್ತೇವೆ. ಆದರೆ ಹೀಗೆ ಕುಡಿಯುವುದರಿಂದ ಟೆನ್ಷನ್ ಹೆಚ್ಚಾಗುತ್ತದೆ ಅಷ್ಟೆ. ವಾಸ್ತವವಾಗಿ ಟೀಯಲ್ಲಿ ಕೆಫಿನ್ ಪ್ರಮಾಣ ಹೆಚ್ಚಾಗಿ ಇರುತ್ತದೆ. ಇದು ನಿದ್ರೆಯನ್ನು ಕ್ಷಣಗಳಲ್ಲಿ ದೂರ ಮಾಡುತ್ತದೆ. ಅದರರ್ಥ ಒತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

6 / 7
ಅಧಿಕ ರಕ್ತದೊತ್ತಡ: ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಬೆಡ್ ಟೀ ಕುಡಿಯಲೇಬಾರದು. ಏಕೆಂದರೆ ಇದರಲ್ಲಿ ಇರುವ ಕೆಫಿನ್ ಅಂಶ ದೇಹದಲ್ಲಿ ಕರಗುತ್ತಿದ್ದಂತೆ ಅದು ತಕ್ಷಣವೇ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇದರಿಂದ ಭವಿಷ್ಯದಲ್ಲಿ ಹೃದಯ ತೊಂದರೆಗಳು ಬರುವ ಅಪಾಯವಿದೆ.

7 / 7
ಹಾಗಾದರೆ ಖಾಲಿ ಹೊಟ್ಟೆಯೊಂದಿಗೆ ಟೀ ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾ ಹಾನಿಯಾಗುತ್ತಿದೆ ಎಂದು ತಜ್ಞರು ಕಂಡುಕೊಂಡಿದ್ದಾರೆ. ಖಾಲಿ ಹೊಟ್ಟೆಯಲ್ಲಿ ಅಸಲಿಗೆ ಚಹಾ ಕುಡಿಯಲೇಬೇಡಿ ಎಂದು ಆರೋಗ್ಯ ತಜ್ಙರು ಸೂಚಿಸುತ್ತಿದ್ದಾರೆ. ಖಾಲಿ ಹೊಟ್ಟೆಯಲ್ಲಿ ಟೀ ಕುಡಿದರೆ.. ಹಲವು ಅನಾರೋಗ್ಯ ಸಮಸ್ಯೆಗಳು ಬರುತ್ತವೆ.