
ಲಾಲ್ ಬಾಗ್ನಲ್ಲಿ ನಾಲ್ಕು ದಿನದಿಂದ ಫ್ಲವರ್ ಶೋ ನಡೆಯುತ್ತಿದ್ದು, ಇಂದು ವಿಕೆಂಡ್ ಹಿನ್ನೆಲೆ ಸಸ್ಯಕಾಶಿನಲ್ಲಿ ಎಲ್ಲಿ ನೋಡಿದ್ದರು ಜನರೆ ಕಾಣಿದುತ್ತಿದ್ದರು. ಆ ಕುರಿತ ಒಂದು ಝಲಕ್ ಇಲ್ಲಿದೆ.

ಸಸ್ಯಕಾಶಿ ಲಾಲ್ ಬಾಗ್ ಬಾಗ್ನಲ್ಲಿ ಫ್ಲವರ್ ಶೋ ನಡೆಯುತ್ತಿದ್ದು, ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಅದರಲ್ಲೂ ಇಂದು ವಿಕೆಂಡ್ ಇರುವ ಹಿನ್ನೆಲೆ ಅಂಬೆಡ್ಕರ್ ಫ್ಲವರ್ ಶೋ ವೀಕ್ಷಿಸಲು ಸಾಕಷ್ಟು ಸಂಖ್ಯೆಯಲ್ಲಿ ಜನರು ಆಗಮಿಸಿದ್ದು ಎಲ್ಲಿ ನೋಡಿದರಲ್ಲಿ ಜನರೇ ಕಾಣಿಸುತ್ತಿದ್ದರು. ಹೀಗಾಗಿ ಫ್ಲವರ್ ಶೋ ವೀಕ್ಷಿಸಲು ಜನರು ಇಂದು ಹೈರಾಣಾಗಿ ಹೋಗಿದ್ದಾರೆ.

ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತವಾಗಿ ಡಾ. ಬಿಆರ್ ಅಂಬೇಡ್ಕರ್ ಅವರ ಥೀಮ್ನಲ್ಲಿ ಫ್ಲವರ್ ಶೋ ಆಯೋಜನೆ ಮಾಡಲಾಗಿದೆ. ಈ ಫ್ಲವರ್ ಶೋ ಆಗಸ್ಟ್ 15 ರವರೆಗೂ ಇರಲಿದ್ದು, ಇಂದು ಭಾನುವಾರವಾಗಿರುವ ಕಾರಣ ಬೆಳ್ಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಫ್ಲವರ್ ಶೋ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಹೀಗಾಗಿ ಬೆಂಗಳೂರು ಅಷ್ಟೇ ಅಲ್ಲದೇ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಪ್ರವಾಸಿಗರು ಫ್ಲವರ್ ಶೋಗೆ ಬಂದಿದ್ರು.

ಈ ವರ್ಷದ ಫ್ಲವರ್ ಶೋ ನಲ್ಲಿ ಅಂಬೇಡ್ಕರ್ ಅವರ ಪ್ರತಿಮೆ, ಹಳೆಯ ಸಂಸತ್ ಭವನ, ಅಂಬೆಡ್ಕರ್ ಅವರ ಜನ್ಮ ಭೂಮಿ, ಅಂಬೆಡ್ಕರ್ ಅವರ ಪುಣ್ಯಭೂಮಿ, ರಾಜಗೃಹ, ಬೌದ್ದ ಧರ್ಮದ ಸ್ವೀಕಾರ ಸಂದರ್ಭ ಸೇರಿದಂತೆ ಅಂಬೇಡ್ಕರ್ ಅವರು ಹುಟ್ಡಿ, ಬೆಳೆದು ಹಾದಿಯನ್ನ ಫ್ಲವರ್ ಶೋನಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದ್ದು, ಜನರು ಫುಲ್ ಫಿದಾ ಆಗಿದ್ದಾರೆ.

ನಾಲ್ಕು ದಿನದಿಂದ ಫ್ಲವರ್ ಶೋಗೆ ಒಂದು ಲಕ್ಷದ 21 ಸಾವಿರ ಜನರು ಭೇಟಿ ನೀಡಿದ್ದಾರೆ. ಒಟ್ಟು 21 ಲಕ್ಷ ರೂ. ಸಂಗ್ರಹವಾಗಿದೆ. ಇಂದು ಒಂದೇ ದಿನ 1 ಲಕ್ಷಕ್ಕೂ ಹೆಚ್ಚು ಜನರು ಫ್ಲವರ್ ಶೋ ವೀಕ್ಷಣೆ ಮಾಡಿದ್ದು, ಇಂದು ಒಂದೇ ದಿನ 50 ಲಕ್ಷ ರೂ. ಹಣ ಸಂಗ್ರವಾಗಿದೆ.

ಲಾಲ್ ಬಾಗ್ನಲ್ಲಿ ಫ್ಲವರ್ ಶೋ ಅಷ್ಟೆ ಅಲ್ಲದೇ ಅಂಡರ್ ಫಿಶ್ ಆಕ್ವೇರಿಯಮ್ ಸಹ ಮಾಡಲಾಗಿದ್ದು, ಮಕ್ಕಳಿಂದ ದೊಡ್ಡವರವರೆಗೂ ಆಕರ್ಷಿಸುತ್ತಿದೆ. ಹೀಗಾಗಿ ಫ್ಲವರ್ ಶೋ ನೋಡಿ ಜನರು ಬಗೆಗೆ ಫೀಶ್ಗಳನ್ನ ನೋಡಿ ಎಂಜಾಯ್ ಮಾಡ್ತಿದ್ದಾರೆ.

ಇಂದು ಭಾನುವಾರವಾಗಿರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರಿಂದ ಲಾಲ್ ಬಾಗ್ ಸುತ್ತ - ಮುತ್ತ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಲಾಲ್ ಬಾಗ್ ಸಂಪರ್ಕ ಕಲ್ಪಿಸುವ ಹೊಸೂರು ರಸ್ತೆ, ಶಾಂತಿನಗರ ರಸ್ತೆ, ಮಿನರ್ವ ರಸ್ತೆಗಳಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಡಾಗಿತ್ತು. ಹೀಗಾಗಿ ವಾಹನ ಸಾವರರು ಗಂಟೆಗಟ್ಟಲೆ ಟ್ರಾಫಿಕ್ ನಲ್ಲಿ ನಿಂತು ಹರಸಾಹಸ ಪಟ್ರು. ಇನ್ನು, ವಾಹನ ಸವಾರರು ಹಾಗೂ ಜನರು ನಿಭಾಯಿಸಲು ಪೋಲಿಸರು ಹರಸಾಹಸ ಪಟ್ಟಿದ್ದಾರೆ.