Bengaluru Rain: ಬೆಂಗಳೂರು ಮಳೆ ನಿಂತರೂ ಅವಾಂತರ ನಿಂತಿಲ್ಲ, ಕರೆಯಂತಾದ ರಸ್ತೆಗಳು, ಹಲವೆಡೆ ಟ್ರಾಫಿಕ್

ಬೆಂಗಳೂರಲ್ಲಿ ರಾತ್ರಿಯಿಡೀ ಸುರಿದ ಮಳೆ ಸರಣಿ ಅವಾಂತರಗಳನ್ನು ಸೃಷ್ಟಿಸಿದೆ. ಎಲ್ಲೆಲ್ಲೂ ನೀರು, ರಸ್ತೆಗಳು ಹೊಳೆಯಂತಾಗಿದ್ದು, ಅಂಡರ್‌ಪಾಸ್‌ಗಳು ಜಲಾವೃತಗೊಂಡಿವೆ. ವಾಹನ ಸವಾರರು ಪರದಾಡುವಂತಾಗಿದೆ. ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ಮುಭಾಗದ ರಸ್ತೆ ಮುಳುಗಡೆಯಾಗಿದೆ. ಸುಮಾರು 2 ಅಡಿಯಷ್ಟು ನೀರು ಆವರಿಸಿದೆ.

TV9 Web
| Updated By: Digi Tech Desk

Updated on:Aug 12, 2024 | 10:35 AM

ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ರಾತ್ರಿ 2 ಗಂಟೆಗೆ ಶುರುವಾದ ಮಳೆ ಮುಂಜಾನೆವರೆಗೂ ಅಬ್ಬರಿಸಿ ಬೊಬ್ಬಿರಿದಿದೆ. ಭಾರಿ ಮಳೆಯಿಂದ ಕೆ.ಆರ್.ಮಾರ್ಕೆಟ್ ಜಲಮಯವಾಗಿದೆ.

1 / 7
ಫ್ಲವರ್ ಮಾರ್ಕೆಟ್​ನಲ್ಲಂತೂ ಅಕ್ಷರಶಃ ನರಕ ದರ್ಶನ ತೋರಿದೆ. ಹೂವುಗಳು ಕೆರೆಯಂತೆ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ನಸುಕಿನ ವೇಳೆಯಿಂದಲೇ ಹೂವಿನ ವ್ಯಾಪಾರಕ್ಕೆ ಬಂದಿದ್ದ ವ್ಯಾಪಾರಿಗಳು ಕಂಗಾಲಾಗಿದ್ದಾರೆ.

2 / 7
ಒಕಳಿಪುರಂನ ಅಂಡರ್​ಪಾಸ್​ಗೆ ನೀರು ನುಗ್ಗಿ, ವಾಹನ ಸವಾರರು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿತ್ತು. ನೀರು ನಿಂತದ್ದ ರಸ್ತೆಯಲ್ಲಿಯೇ ಆ್ಯಂಬುಲೆನ್ಸ್ ಸಿಲುಕಿಕೊಂಡಿತ್ತು. ಪೇಷಂಟ್ ಇಲ್ಲದಿರೋದ್ರಿಂದ, ನೀರಿನ ಪ್ರಮಾಣ ಕಡಿಮೆ ಆದ್ಮೇಲೆ ಆ್ಯಂಬುಲೆನ್ಸ್ ತೆರಳಿತು.

3 / 7
ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ಮುಭಾಗದ ರಸ್ತೆ ಮುಳುಗಡೆಯಾಗಿದೆ. ಸುಮಾರು 2 ಅಡಿಯಷ್ಟು ನೀರು ಆವರಿಸಿತ್ತು. ಗುಂಡಿಗಳು ಯಾವುದೋ, ರಸ್ತೆಯಾವುದೇ ಒಂದು ಕಾಣದ ಪರಿಸ್ಥಿತಿ ನಿರ್ಮಾಣವಾಗಿತ್ತು. ವಾಹನ ಸವಾರರು ಭಯದಲ್ಲಿಯೇ ಸಂಚಾರ ಮಾಡುತ್ತಿದ್ದ ದೃಶ್ಯ ಕಂಡುಬಂತು.

4 / 7
ರಾತ್ರೋರಾತ್ರಿ ಬೆಂಗಳೂರಲ್ಲಿ ದಿಢೀರ್ ಮಳೆ ಸುರಿದಿದ್ದು, ಮನೆಯಿಂದ ಹೊರಬಂದವರು ನಲುಗಿ ಹೋಗಿದ್ದಾರೆ. ಮೆಜೆಸ್ಟಿಕ್, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಶಾಂತಿನಗರ, ವಿಧಾನಸೌಧ, ಶಿವಾಜಿನಗರ, ಕಾರ್ಪೊರೇಷನ್ ಸರ್ಕಲ್, ಟೌನ್​ಹಾಲ್, ಜಯನಗರ ಸೇರಿ ಹಲವೆಡೆ ಅವಾಂತರಗಳನ್ನು ಸೃಷ್ಟಿಸಿದೆ.

5 / 7
ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ರಸ್ತೆ ಮೇಲೆ ನೀರು ನಿಂತಿದ್ದು ಸುಮಾರು 1 ಕಿ.ಲೋ ಮೀಟರ್ ಟ್ರಾಫಿಕ್ ಜಾಮ್ ಆಗಿತ್ತು. ಹೊಸರು ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್‌ ಆಗಿದ್ದು ಸವಾರರು ಪರದಾಡುತ್ತಿದ್ದಾರೆ.

6 / 7
ದಾಸನಪುರ APMC ತರಕಾರಿ ಮಾರ್ಕೆಟ್​ಗೆ ಮಳೆ ನೀರು ನುಗ್ಗಿದೆ. ಎಂಪಿಎಂಸಿ ತರಕಾರಿ ಮಾರ್ಕೆಟ್ ಜಲಾವೃತಗೊಂಡಿದ್ದು ವ್ಯಾಪಾರ ವಹಿವಾಟು ನಡೆಸಲಾಗದೆ ರೈತರು ಕಂಗಾಲಾಗಿದ್ದಾರೆ. ಮಳೆಯ ನೀರಿನಿಂದ ಎಪಿಎಂಸಿ ತರಕಾರಿ ಮಾರ್ಕೆಟ್​​ನಲ್ಲಿ ಅವ್ಯವಸ್ಥೆ.

7 / 7

Published On - 9:59 am, Mon, 12 August 24

Follow us