AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jasprit Bumrah: ಜಸ್​ಪ್ರೀತ್ ಬುಮ್ರಾಗೆ ಮತ್ತೆ ರೆಸ್ಟ್​..!

India vs Bangladesh: ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಟೆಸ್ಟ್ ಸರಣಿಯು ಸೆಪ್ಟೆಂಬರ್​ 19 ರಿಂದ ಶುರುವಾಗಲಿದೆ. ಈ ಸರಣಿಯ ಮೊದಲ ಪಂದ್ಯಕ್ಕೆ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂ ಆತಿಥ್ಯವಹಿಸಲಿದೆ. ಹಾಗೆಯೇ, ಸೆಪ್ಟೆಂಬರ್ 27 ರಂದು ಕಾನ್ಪುರದ ಗ್ರೀನ್ ಫೀಲ್ಡ್ ಮೈದಾನದಲ್ಲಿ 2ನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಆದರೆ ಈ ಪಂದ್ಯಗಳಲ್ಲಿ ಬುಮ್ರಾ ಕಾಣಿಸಿಕೊಳ್ಳುವುದು ಅನುಮಾನ.

ಝಾಹಿರ್ ಯೂಸುಫ್
|

Updated on: Aug 12, 2024 | 12:08 PM

Share
ಭಾರತದ ಮುಂಬರುವ ಸರಣಿಯಲ್ಲಿ ಜಸ್​ಪ್ರೀತ್ ಬುಮ್ರಾ (Jasprit Bumrah) ಕಾಣಿಸಿಕೊಳ್ಳುವುದು ಅನುಮಾನ. ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ಬಾಂಗ್ಲಾದೇಶ್ ವಿರುದ್ಧದ ಸರಣಿಯ ವೇಳೆ ಬುಮ್ರಾ ವಿಶ್ರಾಂತಿ ನೀಡಲು ಆಯ್ಕೆ ಸಮಿತಿ ಚಿಂತಿಸಿದೆ. ಹೀಗಾಗಿ ಬಾಂಗ್ಲಾ ವಿರುದ್ಧದ ಸರಣಿಯಿಂದಲೂ ಟೀಮ್ ಇಂಡಿಯಾ ವೇಗಿ ಹೊರಗುಳಿಯುವ ಸಾಧ್ಯತೆಯಿದೆ.

1 / 5
ಟಿ20 ವಿಶ್ವಕಪ್ ಮುಕ್ತಾಯದ ಬಳಿಕ ಜಸ್​ಪ್ರೀತ್ ಬುಮ್ರಾ ಯಾವುದೇ ಪಂದ್ಯವಾಡಿಲ್ಲ. ಝಿಂಬಾಬ್ವೆ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದ ಬುಮ್ರಾಗೆ ಶ್ರೀಲಂಕಾ ವಿರುದ್ಧದ ಸರಣಿ ವೇಳೆ ವಿಶ್ರಾಂತಿ ನೀಡಲಾಗಿತ್ತು. ಇದೀಗ ಮುಂಬರುವ ಪ್ರಮುಖ ಸರಣಿಗಳನ್ನು ಗಮನದಲ್ಲಿರಿಸಿ ಅವರಿಗೆ ಮತ್ತೆ ವಿಶ್ರಾಂತಿ ನೀಡಲು ಆಯ್ಕೆ ಸಮಿತಿ ಮುಂದಾಗಿದೆ.

2 / 5
ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಸರಣಿಯ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ನ್ಯೂಝಿಲೆಂಡ್ ವಿರುದ್ಧ 3 ಟೆಸ್ಟ್ ಪಂದ್ಯಗಳನ್ನಾಡಬೇಕಿದೆ. ಈ ಪಂದ್ಯಗಳು ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್​ನ ಭಾಗವಾಗಿದ್ದು, ಹೀಗಾಗಿ ನ್ಯೂಝಿಲೆಂಡ್ ಸರಣಿ ಟೀಮ್ ಇಂಡಿಯಾ ಪಾಲಿಗೆ ತುಂಬಾ ಮಹತ್ವದ್ದು.

3 / 5
ಹಾಗೆಯೇ ನ್ಯೂಝಿಲೆಂಡ್ ವಿರುದ್ಧದ ಸರಣಿ ಬಳಿಕ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಆಡಲಿದೆ. ಈ ಸರಣಿಯಲ್ಲಿ ಭಾರತ 5 ಪಂದ್ಯಗಳನ್ನಾಡಬೇಕಿದೆ. ಅಂದರೆ ಮುಂದಿನ 8 ಟೆಸ್ಟ್​ ಪಂದ್ಯಗಳಲ್ಲಿ ಜಸ್​ಪ್ರೀತ್ ಬುಮ್ರಾ ಕಣಕ್ಕಿಳಿಯಬೇಕಿದ್ದು, ಹೀಗಾಗಿ ಬಾಂಗ್ಲಾದೇಶ್ ವಿರುದ್ಧದ ಸರಣಿ ವೇಳೆ ವಿಶ್ರಾಂತಿ ನೀಡಲು ಆಯ್ಕೆ ಸಮಿತಿ ನಿರ್ಧರಿಸಿದೆ.

4 / 5
ಅದರಂತೆ ಅಕ್ಟೋಬರ್ 16 ರಿಂದ ಶುರುವಾಗಲಿರುವ ನ್ಯೂಝಿಲೆಂಡ್ ವಿರುದ್ದದ ಸರಣಿಯ ಮೂಲಕ ಜಸ್​ಪ್ರೀತ್ ಬುಮ್ರಾ ಕಂಬ್ಯಾಕ್ ಮಾಡುವ ಸಾಧ್ಯತೆಯಿದೆ. ಇತ್ತ ಬುಮ್ರಾ ಅನುಪಸ್ಥಿತಿಯಲ್ಲಿ ಬಾಂಗ್ಲಾದೇಶ್ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ಬೌಲಿಂಗ್ ವಿಭಾಗವನ್ನು ಮೊಹಮ್ಮದ್ ಶಮಿ ಮುನ್ನಡೆಸಲಿದ್ದಾರೆ. ಏಕದಿನ ವಿಶ್ವಕಪ್ ವೇಳೆ ಗಾಯಗೊಂಡಿದ್ದ ಶಮಿ ಇದೀಗ ಸಂಪೂರ್ಣ ಫಿಟ್ ಆಗಿದ್ದು, ಈಗಾಗಲೇ ಅಭ್ಯಾಸವನ್ನು ಸಹ ಶುರು ಮಾಡಿದ್ದಾರೆ. ಹೀಗಾಗಿ ಬಾಂಗ್ಲಾದೇಶ್ ವಿರುದ್ಧದ ಸರಣಿಯ ಮೂಲಕ ಮೊಹಮ್ಮದ್ ಶಮಿ ಅವರ ಕಂಬ್ಯಾಕ್ ಅನ್ನು ಎದುರು ನೋಡಬಹುದು.

5 / 5
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us
ರಾಮನಗರ ವಿವಿಧೆಡೆ ಸುರಿದ ಧಾರಾಕಾರ ಮಳೆ; ರಾಗಿ ಬೆಳೆಗಾರರ ಮುಖದಲ್ಲಿ ಮಂದಹಾಸ!

ಗಗನ್ vs ಯಶಸ್: ಪತ್ರ ಪಡೆಯಲು ಟಫ್ ಟಾಸ್ಕ್ ಕೊಟ್ಟ ಬಿಗ್ ಬಾಸ್

ಇಂದು ಈ ರಾಶಿಯವರು ನಿರ್ಲಕ್ಷ್ಯತನವನ್ನು ತ್ಯಜಿಸಿದರೆ ಉತ್ತಮ

ಬೆಂಗಳೂರು: ಹೊಯ್ಸಳ ನಗರ ಪಬ್​ನಲ್ಲಿ ಅಗ್ನಿ ಅವಘಡ, ತಪ್ಪಿದ ಭಾರಿ ದುರಂತ

ನನ್ನ ಹೇಳಿಕೆ ತಿರುಚಲಾಗಿದೆ: ವಿವಾದಾತ್ಮಕ ಹೇಳಿಕೆ ಬಗ್ಗೆ ಛಲವಾದಿ ಸ್ಪಷ್ಟನೆ

ಹಿರಿಯೂರು ಉಪಚುನಾವಣೆ: ಕಾಂಗ್ರೆಸ್​​ ಅಭ್ಯರ್ಥಿಯ ಸುಳಿವು ನೀಡಿದ ಡಿಕೆಶಿ

ಉಕ್ರೇನ್ ಮೇಲೆ ರಷ್ಯಾದಿಂದ ಭೀಕರ ದಾಳಿ; ಶಾಲಾ ಕಟ್ಟಡ ಧ್ವಂಸವಾಗಿ 29 ಜನ ಸಾವು

ಛಲವಾದಿ ನಾರಾಯಣಸ್ವಾಮಿ ಮನೆಗೆ ಮುತ್ತಿಗೆ ಯತ್ನ; ಕೈ ಕಾರ್ಯಕರ್ತರು ವಶಕ್ಕೆ

ಮುತ್ತುಸ್ವಾಮಿ ದೀಕ್ಷಿತರ್ 250ನೇ ಜಯಂತಿ ಪ್ರಯುಕ್ತ 250 ರೂ. ನಾಣ್ಯ ಬಿಡುಗಡೆ

ಪರೀಕ್ಷಾ ಅಕ್ರಮ ತಡೆಗೆ ಕೆಇಎಯಿಂದ ಹೊಸ ಮಾರ್ಗಸೂಚಿ ಪ್ರಕಟ