Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಮನೆಯನ್ನು ಸುಂದರವಾಗಿಸಲು ಇಲ್ಲಿದೆ ಸರಳ ಉಪಾಯ!

Simple Tips For Home Decoration: ನಿಮ್ಮ ಮನೆಗೆ ಸೌಂದರ್ವನ್ನು ಹೆಚ್ಚಿಸಲು ಸರಳವಾದ ಮತ್ತು ಸುಭವಾದ ವಿಧಾನವೆಂದರೆ ಚಿಕ್ಕ ಸಸ್ಯಗಳನ್ನು ಇರಿಸುವುದು. ಸುಂದರವಾದ ಚಿಕ್ಕ ಪಾಟ್​ನಲ್ಲಿ ಗಿಡಗಳನ್ನು ಇರಿಸಿ ಗೋಡೆಯ ಕಾರ್ನರ್​ನಲ್ಲಿ ಇರಿಸಿ. ಗೋಡೆಗಳನ್ನೂ ಕೂಡಾ ಹಸಿರು ಬಳ್ಳಿಗಳಿಂದ ಅಲಂಕರಿಸಬಹುದು.

shruti hegde
| Updated By: Digi Tech Desk

Updated on:May 22, 2021 | 9:47 AM

ಮನೆಯನ್ನು ಅಂದವಾಗಿರಿಸಿಕೊಳ್ಳುವ ನಾವು ಸಾಕಷ್ಟು ಪ್ರಯತ್ನ ಪಡುತ್ತೇವೆ. ವಿವಿಧ ತೆರೆನಾದ ಅಲಂಕಾರಿಕಾ ವಸ್ತುಗಳನ್ನು ತಂದು ಮನೆಯನ್ನು ಅಲಂಕರಿಸುತ್ತೇವೆ. ಅತಿಥಿಗಳ ಮನೆಗೆ ಹೋದಾಗ ಮೊದಲು ಕಣ್ಣಿಗೆ ಬೀಳುವುದೇ ಅವರ ಮನೆಯಲ್ಲಿರುವ ಅಲಂಕಾರಿಕಾ ವಸ್ತುಗಳು. ನೋಡಲು ಸುಂದರವಾಗಿರಬೇಕು ಜತೆಗೆ ಸರಳವಾಗಿರಬೇಕು. ಹಾಗಿದ್ದಾಗ ನಮ್ಮ ಮನೆಯನ್ನು ನಾವು ಹೇಗೆ ಸಿದ್ಧವಿಟ್ಟುಕೊಳ್ಳಬೇಕು? ಎಂಬುದನ್ನು ನೋಡೋಣ.

Simple tips for home decoration

1 / 6
ನಿಮ್ಮ ಮನೆಯ ಎದುರಿಗಿನ ಜಗುಲಿಯ ಗೋಡೆಯನ್ನು ಈ ರೀತಿಯಾಗಿ ಸಿದ್ಧಗೊಳಿಸಿ. ಸುಂದರವಾದ ಚಿತ್ರಪಟಗಳು ಜತೆಗೆ ಚಿಕ್ಕದಾಗ ಹಸಿರು ಬಣ್ಣದ ಗಿಡಗಳು. ಕುಳಿತುಕೊಳ್ಳಲು ಒಳ್ಳೆಯ ಖುರ್ಚಿಗಳಿರಲಿ. ಜೊತೆಗೆ ಗೋಡೆಯ ಬಣ್ಣದ್ದೇ ಆಗಿದ್ದರೆ ಇನ್ನೂ ಸುಂದರ. ಬಿಳಿ ಬಣ್ಣದ ಗೋಡೆಗೆ ಅದರ ವಿರುದ್ಧದ ಬಣ್ಣ ಕಪ್ಪು ಬಣ್ಣದ ಫ್ರೇಮ್​ ಹೊಂದಿರುವ ಚಿತ್ರ ಪಟವನ್ನು ತೂಗು ಹಾಕಿ. ನೋಡಲು ಸುಂದರವಾಗಿರುತ್ತದೆ.

Simple tips for home decoration

2 / 6
ಮನೆಯೊಳಗೆ ಬಂದಾಕ್ಷಣ ಅತಿಥಿಗಳಿಗೆ ಆಶ್ಚರ್ಯವೆನಿಸಬೇಕು. ಮಾತನಾಡಲು ಖುಷಿಯೆನಿಸಬೇಕು. ಮನೆಯ ಜಗುಲಿಯಲ್ಲಿರುವ ಸೋಫಾದ ಮೇಲೆ ವಿವಿಧ ಬಣ್ಣದ ಚಿಕ್ಕ ದಿಂಬುಗಳಿಂದ ಅಲಂಕರಿಸಿ. ಒಂದು ಪಕ್ಕದಲ್ಲಿ ಚಿಕ್ಕದಾದ ಹಸಿರು ಗಿಡವಿರಲಿ. ಗೋಡೆಯ ಮೇಲೆ ದೊಡ್ಡದಾಗ ಗಡಿಯಾರ ತೂಗು ಹಾಕಿರಲಿ. ನಿಮ್ಮ ಮನೆಯ ಗೋಡೆ ಬಣ್ಣಕ್ಕೆ ಹೊಂದುವ ಗಡಿಯಾರವನ್ನು ಆರಿಸಿ ಖರೀದಿಸಿ.

Simple tips for home decoration

3 / 6
ನಿಮ್ಮ ಮನೆಯ ಅಲಂಕಾರಕ್ಕಾಗಿ ನೀವು ಒಂದುಷ್ಟು ಕರಕುಶಲವನ್ನು ತಯಾರಿಸಿ. ಗಾಜಿನ ಬಾಟಲಿಯ ಸುತ್ತಲೂ ಬಣ್ಣ ಹಚ್ಚಿ ವಿವಿಧ ತೆರೆನಾದ ಡಿಸೈನ್​ ಬಿಡಿಸಿ ಮನೆಯ ಮೇಜಿನ ಮೇಲೆ ಇರಿಸಬಹುದು. ನೋಡಲು ಆಕರ್ಶಕವಾಗಿ ಕಾಣಿಸುತ್ತದೆ. ಜತೆಗೆ ಆ ಗಾಜಿನ ಬಾಟಲಿಯ ಒಳಗೆ ಅಂದವಾದ ಹೂವುಗಳನ್ನು ಹಾಕಿಡಬಹುದು.

Simple tips for home decoration

4 / 6
ಮನೆಯ ಹಾಲ್​ ಸಣ್ಣದಾಗಿ ಅನಿಸುತ್ತಿದೆ ಅಂತಾದರೆ ಆ ಹಾಲ್​ನ ಗೋಡೆಗೆ ದೊಡ್ಡ ಕನ್ನಡಿಯನ್ನು ಅಳವಡಿಸಿ. ಜತೆಗೆ ಅದಕ್ಕೆ ಪ್ರತಿಬಿಂಬವಾಗುವಂತೆ ಹಸಿರು ಗಿಡವನ್ನು ಹಾಲ್​ನ ಮೂಲೆಯಲ್ಲಿಡಿ. ನೋಡಲು ಆಕರ್ಶಕವಾಗಿ ಕಾಣಿಸುತ್ತದೆ.

Simple tips for home decoration

5 / 6
ನಿಮ್ಮ ಮನೆಯ ಕಿಟಕಿ ಗ್ಲಾಸ್​ ಆಗಿದ್ದರೆ ಅದರ ಕೆಳಗೆ ಬಣ್ಣದ ಲೈಟ್​ಗಳಿಂದ ಅಲಂಕರಿಸಿ. ಗ್ಲಾಸ್​ನಿಂದ ಆ ಲೈಟ್​ಗಳು ಪ್ರತಿಬಿಂಬಿಸುತ್ತದೆ. ಮನೆಗೆ ಬೆಳಕಾಗಿಯೂ, ಜತೆಗೆ ಮನೆ ಸುಂದರವಾಗಿ ಕಾಣಿಸಲು ಇದು ಉತ್ತಮ ವಿಧಾನ.

Simple tips for home decoration

6 / 6

Published On - 7:35 am, Sat, 22 May 21

Follow us
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ