
ನಾಡಿನೆಲ್ಲೆಡೆ ಇಂದು ರಕ್ಷಾ ಬಂಧನ ಹಬ್ಬದ ಸಂಭ್ರಮ. ಆರ್‌ಎಸ್‌ಎಸ್ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಅವರು ನಾಗಪುರದಲ್ಲಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಿದರು.

ಪ್ರಾದೇಶಿಕ ಟಿಬೆಟಿಯನ್ ಮಹಿಳಾ ಸಂಘ ಮತ್ತು ಭಾರತ್ ಟಿಬೆಟ್ ಸಹಕಾರ ವೇದಿಕೆಯ ಸಹೋದರಿಯರು ಡಾ. ಮೋಹನ್ ಭಾಗವತ್ ಅವರಿಗೆ ರಾಖಿ ಕಟ್ಟಿದರು.

ಅದೇ ರೀತಿಯಾಗಿ ರಾಷ್ಟ್ರೀಯ ಸೇವಿಕಾ ಸಮಿತಿಯ ಸಹೋದರಿಯರು, ಮಹಲ್ ಆವರಣದ ನಿವಾಸಿಗಳು ಸಹ ರಾಖಿ ಕಟ್ಟಿ ಅವರಿಗೆ ಶುಭ ಹಾರೈಸಿದರು.

ಸಹೋದರತೆಯನ್ನು ಸಾರುವ ಹಬ್ಬವೇ ರಕ್ಷಾ ಬಂಧನ. ಪುರಾತನ ಐತಿಹ್ಯವನ್ನು ಹೊಂದಿರೋ ರಕ್ಷಾ ಬಂಧನ ಹಬ್ಬವನ್ನು ದೇಶದ ಉದ್ದಗಕ್ಕೂ ಆಚರಣೆ ಮಾಡಲಾಗುತ್ತದೆ.

ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುವ ಈ ರಕ್ಷಾ ಬಂಧನವು ಅಣ್ಣ ತಂಗಿಯರ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಪವಿತ್ರ ಹಬ್ಬವೆಂದೇ ಹೇಳಬಹುದು.