Skin Care Tips: ಬೇಸಿಗೆಯಲ್ಲಿ ಚರ್ಮದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

| Updated By: shivaprasad.hs

Updated on: Apr 15, 2022 | 8:35 AM

Health Tips: ಬೇಸಿಗೆಯಲ್ಲಿ ಸುಡು ಬಿಸಿಲಿನಿಂದ ಚರ್ಮದ ಕಾಂತಿ ಮಂದವಾಗುವುದು, ಸನ್​ ಬರ್ನ್ ಸಮಸ್ಯೆ ಎದುರಿಸುವುದು ಸಾಮಾನ್ಯ. ಅವುಗಳನ್ನು ರೋಸ್ ವಾಟರ್, ಐಸ್ ಕ್ಯೂಬ್, ಸೌತೇಕಾಯಿ, ಮುಲ್ತಾನಿ ಮಿಟ್ಟಿ ಮೊದಲಾದವುಗಳ ಸಹಾಯದಿಂದ ನಿಯಂತ್ರಿಸಬಹುದು.

1 / 5
ಬೇಸಿಗೆಯಲ್ಲಿ, ಪ್ರಖರ ಸೂರ್ಯನ ಬೆಳಕಿನಿಂದಾಗಿ ಚರ್ಮದ ಕಾಂತಿ ಮಂದವಾಗುತ್ತದೆ. ಚರ್ಮ ಟ್ಯಾನ್ ಆಗುತ್ತದೆ. ಶಾಖ ಮತ್ತು ತೇವಾಂಶದಿಂದ ಚರ್ಮವನ್ನು ರಕ್ಷಿಸಲು ನೀವು ವಿವಿಧ ನೈಸರ್ಗಿಕ ಪದಾರ್ಥಗಳನ್ನು ಬಳಸಬಹುದು. ಇದು ನಿಮ್ಮ ಚರ್ಮವನ್ನು ತಂಪಾಗಿಸಲು ಹಾಗೂ ಕಾಂತಿಯುತವಾಗಿಸಲು ಸಹಾಯ ಮಾಡುತ್ತದೆ.

2 / 5
ರೋಸ್ ವಾಟರ್: ರೋಸ್ ವಾಟರ್ ನಿಮ್ಮ ಚರ್ಮವನ್ನು ತಂಪಾಗಿಸಲು ಕೆಲಸ ಮಾಡುತ್ತದೆ. ಇದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ನೀವು ಹತ್ತಿಯನ್ನು ಬಳಸಿ ಚರ್ಮದ ಮೇಲೆ ಇದನ್ನು ಹಚ್ಚಬಹುದು. ಚರ್ಮವನ್ನು ಟೋನ್ ಮಾಡಲು ಇದು ಸಹಾಯ ಮಾಡುತ್ತದೆ. ರಕ್ತ ಪರಿಚಲನೆ ಸುಧಾರಿಸಲು ಕೆಲಸ ಮಾಡುತ್ತದೆ. ನೀವು ಇದನ್ನು ಪ್ರತಿದಿನ ಬಳಸಬಹುದು.

3 / 5
ಮುಲ್ತಾನಿ ಮಿಟ್ಟಿ: ಬೇಸಿಗೆಯಲ್ಲಿ ಚರ್ಮವನ್ನು ರಕ್ಷಿಸಲು ಮುಲ್ತಾನಿ ಮಿಟ್ಟಿ ಬಳಸಬಹುದು. ಒಂದು ಚಮಚ ಮುಲ್ತಾನಿ ಮಿಟ್ಟಿಯಲ್ಲಿ ರೋಸ್ ವಾಟರ್ ಮಿಶ್ರಣ ಮಾಡಿ. ಇದನ್ನು ಚರ್ಮದ ಮೇಲೆ 15 ನಿಮಿಷಗಳ ಕಾಲ ಹಚ್ಚಿ. ನಂತರ ತೊಳೆಯಿರಿ. ಇದು ಚರ್ಮವನ್ನು ತಂಪಾಗಿಸಲು ಸಹಾಯ ಮಾಡುತ್ತದೆ. ಆಯ್ಲಿ ಸ್ಕಿನ್ ಹೊಂದಿರುವವರಿಗೆ ಇದು ಹೆಚ್ಚು ಪ್ರಯೋಜನಕಾರಿ.

4 / 5
ಐಸ್ ಕ್ಯೂಬ್ಸ್: ಬೇಸಿಗೆ ಕಾಲದಲ್ಲಿ ತ್ವಚೆಗೆ ಐಸ್ ಕ್ಯೂಬ್‌ಗಳು ತುಂಬಾ ಪ್ರಯೋಜನಕಾರಿ. ತ್ವಚೆಗೆ ಗ್ರೀನ್ ಟೀ ಅಥವಾ ಸೌತೆಕಾಯಿ ರಸದಿಂದ ತಯಾರಿಸಿದ ಐಸ್ ಕ್ಯೂಬ್ ಗಳನ್ನು ಬಳಸಿ. ಅವುಗಳು ಮುಖದಿಂದ ಹೆಚ್ಚುವರಿ ಎಣ್ಣೆಯ ಅಂಶವನ್ನು ತೆಗೆದುಹಾಕಲು ಸಹಾಯ ಮಾಡುತ್ತವೆ. ಇದು ಸನ್ ಬರ್ನ್ ಸಮಸ್ಯೆಯನ್ನೂ ದೂರ ಮಾಡುತ್ತದೆ.

5 / 5
ಸೌತೆಕಾಯಿ: ಬೇಸಿಗೆಯಲ್ಲಿ ಸೌತೆಕಾಯಿಯನ್ನು ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಮಾತ್ರವಲ್ಲದೆ ನಿಮ್ಮ ಚರ್ಮಕ್ಕೂ ಪ್ರಯೋಜನಕಾರಿ. ಇದು ಕಣ್ಣಿನ ಕೆಳಗಿರುವ ಬ್ಲಾಕ್ ಸರ್ಕಲ್​ಗಳ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಸೌತೆಕಾಯಿ ರಸವನ್ನು ಚರ್ಮದ ಮೇಲೆ 15 ನಿಮಿಷಗಳ ಕಾಲ ಹಚ್ಚಿ. ನಂತರ ಅದನ್ನು ತೊಳೆಯಿರಿ. ಇದು ಚರ್ಮವನ್ನು ತಂಪಾಗಿಡಲು ಸಹಾಯ ಮಾಡುತ್ತದೆ.