Sobhita Dhulipala: ನಾಗ ಚೈತನ್ಯ ಜತೆಗಿನ ಡೇಟಿಂಗ್ ವದಂತಿಗೆ ಫುಲ್​ಸ್ಟಾಪ್​ ಇಟ್ಟ ನಟಿ

Updated on: Jan 30, 2023 | 9:59 AM

Sobhita Dhulipala: ಈಗ ಶೋಬಿತಾ ಅವರು ಈ ವಿಚಾರದಲ್ಲಿ ಖಡಕ್ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ತಾವು ಡೇಟಿಂಗ್ ಮಾಡುತ್ತಿಲ್ಲ ಎಂಬುದನ್ನು ಒತ್ತಿ ಹೇಳಿದ್ದಾರೆ.

1 / 5
ನಾಗ ಚೈತನ್ಯ ಜತೆ ನಟಿ ಶೋಬಿತಾ ಧುಲಿಪಾಲ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಚಾರ ಮೊದಲಿನಿಂದಲೂ ಚರ್ಚೆಯಲ್ಲಿದೆ. ಈ ವಿಚಾರದಲ್ಲಿ ನಟಿ ಅನೇಕ ಬಾರಿ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ.

ನಾಗ ಚೈತನ್ಯ ಜತೆ ನಟಿ ಶೋಬಿತಾ ಧುಲಿಪಾಲ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಚಾರ ಮೊದಲಿನಿಂದಲೂ ಚರ್ಚೆಯಲ್ಲಿದೆ. ಈ ವಿಚಾರದಲ್ಲಿ ನಟಿ ಅನೇಕ ಬಾರಿ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ.

2 / 5

ಈಗ ಶೋಬಿತಾ ಅವರು ಈ ವಿಚಾರದಲ್ಲಿ ಖಡಕ್ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ತಾವು ಡೇಟಿಂಗ್ ಮಾಡುತ್ತಿಲ್ಲ ಎಂಬುದನ್ನು ಒತ್ತಿ ಹೇಳಿದ್ದಾರೆ.

3 / 5

‘ನಾನು ಆ ವಂದತಿಗಳ ಬಗ್ಗೆ ಕೇಳಿದ್ದೇನೆ. ನಾಗಚೈತನ್ಯ ಅವರು ನನ್ನ ಸೀನಿಯರ್​. ಅವರಿಗೆ ನಾನು ಯಾವಾಗಲೂ ಗೌರವ ಕೊಡುತ್ತೇನೆ. ಮಜಿಲಿ ಸಿನಿಮಾ ಬಳಿಕ ಅವರ ಜತೆ ಟಚ್​​ನಲ್ಲಿ ಇಲ್ಲ’ ಎಂದಿದ್ದಾರೆ ಅವರು.  

4 / 5

ಅನೇಕರು ಶೋಬಿತಾ ಮಾತನ್ನು ಒಪ್ಪಿಕೊಂಡಿದ್ದಾರೆ. ಇನ್ನೂ ಕೆಲವರು ನಟಿಯ ಮಾತನ್ನು ನಂಬಲು ರೆಡಿ ಇಲ್ಲ.

5 / 5

‘ಮಜಿಲಿ’ ಚಿತ್ರದಲ್ಲಿ ನಾಗ ಚೈತನ್ಯ ಅವರು ಶೋಬಿತಾಗೆ ಲಿಪ್​ ಲಾಕ್ ಮಾಡುವ ದೃಶ್ಯಗಳಿದ್ದವು. ಸಮಂತಾ ಜತೆ ನಾಗ ಚೈತನ್ಯ ವಿಚ್ಛೇದನ ಪಡೆದ ನಂತರ ಅನೇಕರು ಈ ವದಂತಿ ಹುಟ್ಟು ಹಾಕಿದ್ದರು ಎನ್ನಲಾಗಿದೆ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us