ತರುಣ್-ಸೋನಲ್ ಹೊಸ ಮನೆ ಪ್ರವೇಶ; ವಿಶೇಷ ವ್ಯಕ್ತಿಯ ಫೋಟೋ ಇಟ್ಟು ಪೂಜೆ

Edited By:

Updated on: Jan 02, 2026 | 12:21 PM

Sonal Monteiro and Tharun Sudhir House Warming Photos: ನಟ ತರುಣ್ ಸುಧೀರ್ ಹಾಗೂ ಸೋನಲ್ ಮೊಂತೆರೋ ಅವರು ಕಳೆದ ವರ್ಷಾಂತ್ಯಕ್ಕೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು. ಈಗ ಹೊಸ ವರ್ಷಕ್ಕೆ ಅವರು ಹೊಸ ಮನೆಗೆ ಪ್ರವೇಶ ಮಾಡಿದ್ದಾರೆ. ಪೂಜೆ ಮಾಡಿ, ಹಾಲುಕ್ಕಿಸಿ ತರುಣ್ ಹಾಗೂ ಸೋನಲ್ ಹೊಸ ಮನೆ ಪ್ರವೇಶ ಮಾಡಿದ್ದಾರೆ. ಆ ಸಂದರ್ಭದ ಫೋಟೋಗಳು ಇಲ್ಲಿವೆ.

1 / 7
ಸೋನಲ್ ಮೊಂತೆರೋ ಹಾಗೂ ತರುಣ್ ಸುಧೀರ್ ಅವರು ಹೊಸ ಮನೆಗೆ ಪ್ರವೇಶಿಸಿದ್ದಾರೆ. ಈ ಸಂದರ್ಭದ ಫೋಟೋಗಳು ವೈರಲ್ ಆಗಿವೆ. ಇಡೀ ಮನೆ ತುಂಬಾನೇ ಸುಂದರವಾಗಿದೆ. ಪ್ರವೇಶದ ಫೋಟೋಗಳು ಗಮನ ಸೆಳೆದಿವೆ.

2 / 7
ಅಪಾರ್ಟ್​​ಮೆಂಟ್ ಒಂದರಲ್ಲಿ ಮನೆಯನ್ನು ಖರೀದಿಸಿದೆ ಈ ಜೋಡಿ. ಪೂಜೆ ಮಾಡುವ ಮೂಲಕ ಮನೆಯನ್ನು ಪ್ರವೇಶ ಮಾಡಿದರು. ಹೊಸ ಮನೆ ಖರೀದಿಸಿದ ದಂಪತಿಗೆ ಎಲ್ಲರೂ ಶುಭ ಕೋರುತ್ತಾ ಇದ್ದಾರೆ.

3 / 7
ಇಡೀ ಮನೆಯಲ್ಲಿ ಒಬ್ಬರ ಫೋಟೋ ಹೈಲೈಟ್ ಆಗಿದೆ. ಅದುವೇ ತರುಣ್ ತಂದೆ ಸುಧೀರ್. ಅವರ ಫೋಟೋವನ್ನು ಮನೆಯ ಹಾಲ್​​ನಲ್ಲಿ ದೊಡ್ಡದಾಗಿ ಹಾಕಲಾಗಿದೆ. ಈ ಫೋಟೋಗೆ ದಂಪತಿ ಪೂಜೆ ಮಾಡಿದ್ದಾರೆ.

4 / 7
ತರುಣ್ ಅವರಿಗೆ ತಂದೆಯ ಮೇಲೆ ಅಪಾರ ಪ್ರೀತಿ. ಸುಧೀರ್ ಅವರು ಸಿನಿಮಾಗಳಲ್ಲಿ ಹಲವು ವರ್ಷಗಳ ಕಾಲ ವಿಲನ್ ಆಗಿ ಮಿಂಚಿದ್ದರು. ಈ ಕಾರಣದಿಂದ ಸುಧೀರ್ ಫೋಟೋವನ್ನು ಮನೆಯಲ್ಲಿ ದೊಡ್ಡದಾಗಿ ಹಾಕಲಾಗಿದೆ.

5 / 7
ಪೂಜಾ ವಿಧಿ ವಿಧಾನಗಳನ್ನು ಸೋನಲ್ ಹಾಗೂ ತರುಣ್ ಅವರು ಮಾಡಿದ್ದಾರೆ. ಈ ಸಂದರ್ಭದ ವಿಡಿಯೋನ ಸೋನಲ್ ಹಂಚಿಕೊಂಡಿದ್ದಾರೆ. ಸೆಲೆಬ್ರಿಟಿಗಳು ಕೂಡ ಆಗಮಿಸಿ ದಂಪತಿಗೆ ಶುಭಕೋರಿದ್ದಾರೆ.

6 / 7
ಹೊಸ ಮನೆ ಪ್ರವೇಶಿಸುವಾಗ ಹಾಲುಕ್ಕಿಸೋ ಸಂಪ್ರದಾಯ ಇದೆ. ಸೋನಲ್ ಕೂಡ ಇದನ್ನು ಪಾಲಿಸಿದ್ದಾರೆ. ಅವರು ಮದುವೆ ಬಳಿಕ ಹಿಂದೂ ಧರ್ಮವನ್ನು ಪಾಲಿಸುತ್ತಾ ಇದ್ದಾರೆ. ಹಿಂದೂ ಸಂಪ್ರದಾಯಗಳನ್ನು ಇಷ್ಟಪಟ್ಟು ಅನುಸರಿಸುತ್ತಿದ್ದಾರೆ.

7 / 7
ತರುಣ್ ಕುಟುಂಬಕ್ಕೆ ಶರಣ್ ಎಂದರೆ ಅಚ್ಚುಮೆಚ್ಚು. ಇಬ್ಬರೂ ಒಳ್ಳೆಯ ಗೆಳೆಯರು. ಹೀಗಾಗಿ, ಗೆಳೆಯನ ಹೊಸ ಮನೆಯ ಪ್ರವೇಶಕ್ಕೆ ಶರಣ್ ಆಗಮಿಸಿ ವಿಶ್ ಮಾಡಿದ್ದಾರೆ. ಶ್ರುತಿ ಹಾಗೂ ಅವರ ಕುಟುಂಬ ಕೂಡ ಹಾಜರಿತ್ತು.

Published On - 8:50 am, Fri, 2 January 26