ನಟಿ ಸೋನಮ್ ಕಪೂರ್ ಬಾಲಿವುಡ್ ಚಿತ್ರರಂದಲ್ಲಿ. ಹಲವು ವರ್ಷಗಳಿಂದ ನೆಲೆಯೂರಿದ್ದಾರೆ. ಬಾಲಿವುಡ್ನ ಹಲವು ಸ್ಟಾರ್ ನಟರೊಂದಿಗೆ ತೆರೆ ಕೂಡ ಹಂಚಿಕೊಂಡಿದ್ದಾರೆ.
ಸೋನಮ್ ಕಪೂರ್ ತಮ್ಮ ಬ್ಯುಸಿ ಕೆಲಸದ ಮಧ್ಯೆಯೂ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅಭಿಮಾನಿಗಳಿಗಾಗಿ ಒಂದಿಲ್ಲೊಂದು ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.
ಇತ್ತೀಚೆಗೆ ಕೆಲ ಫೋಟೋಗಳನ್ನು ಹಂಚಿಕೊಂಡಿರುವ ನಟಿ, ಹಳದಿ ಬಣ್ಣದ ಸಾಂಪ್ರದಾಯಿಕ ಉಡುಗೆ ತೊಟ್ಟು ಕಂಗೊಳಿಸಿದ್ದಾರೆ.
ಸೋನಮ್ ಕಪೂರ್ ಹಂಚಿಕೊಂಡ ಫೋಟೋಗಳಿಗೆ ತಂದೆ ಅನಿಲ್ ಕಪೂರ್ ಮತ್ತು ತಾಯಿ ಸುನೀತಾ ಕಪೂರ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಸೋನಮ್ ಕಪೂರ್ ಮತ್ತು ಆನಂದ್ ಅಹುಜಾ 2018ರಲ್ಲಿ ಮದುವೆ ಆದರು. ಇತ್ತೀಚೆಗೆ ದಂಪತಿಗೆ ಗಂಡು ಮಗು ಜನಿಸಿದೆ.
Published On - 1:04 pm, Sat, 3 December 22