
ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ನಮ್ಮನ್ನು ಅಗಲಿಗೆ ಇಂದಿಗೆ (ಆಗಸ್ಟ್ 6) ಒಂದು ವರ್ಷ. ಅವರು ಇಲ್ಲ ಎಂಬುದನ್ನು ಮರೆಯಲು ವಿಜಯ್ ರಾಘವೇಂದ್ರ ಬಳಿ ಈಗಲೂ ಸಾಧ್ಯವಾಗುತ್ತಿಲ್ಲ.

ವಿಜಯ್ ರಾಘವೇಂದ್ರ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಆಗಾಗ ಪತ್ನಿಯ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಈ ಮೂಲಕ ಅವರು ಪತ್ನಿ ಬಗ್ಗೆ ಇರುವ ಭಾವನೆಯನ್ನು ವ್ಯಕ್ತಪಡಿಸುತ್ತಾರೆ.

ಇಂದು ಸ್ಪಂದನಾ ಪುಣ್ಯತಿಥಿ. ಹೀಗಾಗಿ ಸ್ಪಂದನಾ ಅವರ ಫೋಟೋನ ವಿಜಯ್ ಹಂಚಿಕೊಂಡಿದ್ದಾರೆ. ಈ ಫೋಟೋಗೆ, ‘ಚಿನ್ನ, ಮೌನದಲ್ಲಿ ಅರಳಿದ ನಗು ನಿನ್ನದು. ನೀ ನಡೆದ ಹಾದಿಯ ನೆನಪಿನ ಬೆಳಕು ನನ್ನದು’ ಎಂದು ಬರೆದುಕೊಂಡಿದ್ದಾರೆ.

ಸ್ಪಂದನಾ ಹಾಗೂ ವಿಜಯ್ ಅವರದ್ದು ಲವ್ ಮ್ಯಾರೇಜ್. ಅನೇಕ ವರ್ಷಗಳ ಕಾಲ ಪ್ರೀತಿಸಿ, ಆ ಬಳಿಕ ಮನೆಯವರ ಒಪ್ಪಿಗೆ ಪಡೆದು ಇವರು ಮದುವೆ ಆದರು.

ಸ್ಪಂದನಾ ಅವರು ಬ್ಯಾಂಕಾಕ್ಗೆ ತೆರಳಿದ್ದರು. ಅಲ್ಲಿಯೇ ಅವರು ನಿಧನ ಹೊಂದಿದರು. ಕಡಿಮೆ ರಕ್ತದೊತ್ತಡದಿಂದ ಅವರು ಸತ್ತಿದ್ದಾರೆ ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನುತ್ತಾರೆ.
Published On - 10:29 am, Tue, 6 August 24