
ಘಮಘಮಿಸುವ ಹೋಳಿಗೆ, ಸಾಲಾಗಿ ನಿಂತು ಊಟ ತೆಗೆದುಕೊಳ್ಳುತ್ತಿರುವ ವಿದ್ಯಾರ್ಥಿಗಳು, ಸಾರ್ವಜನಿಕರು. ಸುಚಿ-ರುಚಿಯಾಗಿ ಅಡುಗೆ ತಯಾರಿಸಿ, ಜನತೆಗೆ ಬಡಿಸೋಕೆ ಸಿದ್ದತೆ ನಡೆಸಿರುವ ಬಾಣಸಿಗರು. ಅಂದ ಹಾಗೆ ಈ ದೃಶ್ಯಗಳು ಕಂಡುಬಂದಿದ್ದು ಬಾಗಲಕೋಟೆ ನಗರದ ಇಂದಿರಾ ಕ್ಯಾಂಟೀನ್‌ನಲ್ಲಿ.

ಹೌದು, ನಿನ್ನೆ(ಮೇ.20) ರಾಜ್ಯದದಲ್ಲಿ ಸಿಎಂ ಆಗಿ ಸಿದ್ದರಾಮಯ್ಯ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಆ ಹಿನ್ನೆಲೆ ಇಂದಿರಾ ಕ್ಯಾಂಟೀನ್‌ನಲ್ಲಿ ಇವತ್ತು ನಿತ್ಯದ ಊಟದ ಸ್ಪೇಷಲ್ ಆಗಿ ಹೋಳಿಗೆ ಕೊಡಲಾಯಿತು.

ಬೆಳಿಗ್ಗೆ ಉಪಹಾರಕ್ಕೆ 5 ರೂ ಗೆ ಮೂರು ಇಡ್ಲಿ, ಮಧ್ಯಾಹ್ನ ಊಟಕ್ಕೆ ಅನ್ನ ಸಾಂಬಾರ್ ಜೊತೆಗೆ ಮೊಸರನ್ನ ಕೊಡಲಾಗುತ್ತೆ. ಆದರೆ ಇವತ್ತು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಅಲ್ಲದೇ ಸಿದ್ದರಾಮಯ್ಯ ಎರಡನೇ ಬಾರಿ ಸಿಎಂ ಆಗಿ ರಾಜ್ಯದ ಚುಕ್ಕಾಣಿ ಹಿಡಿದಿದ್ದಾರೆ. ಹಾಗಾಗಿ, ಇಂದಿರಾ ಕ್ಯಾಂಟೀನ್‌ನಲ್ಲಿ ಹೋಳಿಗೆ ನೀಡಿ ಬರುವ ಜನತೆಗೆ ಸಿಹಿ ಊಟ ಕೊಡಲಾಯ್ತು.

2013 ರಲ್ಲಿ ಸಿದ್ದರಾಮಯ್ಯ ಮೊದಲ ಬಾರಿಗೆ ಸಿಎಂ ಆದಾಗ ಕೊಟ್ಟ 168 ಭರವಸೆಗಳಲ್ಲಿ ಅತೀ ಹೆಚ್ಚು ಮಹತ್ವ ಪಡೆದುಕೊಂಡಿದ್ದು, ಬಡವರು, ನಿರ್ಗತಿಕರು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಆರಂಭವಾದ ಇಂದಿರಾ ಕ್ಯಾಂಟೀನ್ ನಿರೀಕ್ಷೆಯಂತೆ ಎಲ್ಲ ವರ್ಗದ ಜನರ ಹಸಿವು ನೀಗಿಸಿತ್ತು.

ಆ ನಂತರ ಸಮ್ಮಿಶ್ರ ಸರ್ಕಾರದಲ್ಲಿ ಈ ಯೋಜನೆ ಮುಂದುವರೆಸಲಾಗಿತ್ತಾದ್ರೂ, ಬಿಜೆಪಿ ಆಡಳಿತದಲ್ಲಿ ಕೆಲವು ಕಡೆಗಳಲ್ಲಿ ಬಂದ್ ಮಾಡಿಸಲಾಗಿತ್ತು. ಸದ್ಯ ಸಿದ್ದರಾಮಯ್ಯ ಘೋಷಿಸಿದ್ದ ಯೋಜನೆ ಮತ್ತೆ ಮುನ್ನೆಲೆಗೆ ಬಂದಿದೆ. 5ರೂಗೆ ಉಪಹಾರ, 10 ರೂ ಗೆ ಊಟ, ಎಂತಹ ಬಡವರಾದ್ರೂ ಸಹ ಇಷ್ಟು ಹಣದಲ್ಲಿ ಮೂರು ಹೊತ್ತು ಹೊಟ್ಟೆ ತುಂಬಿಸಿಕೊಳ್ಳಬಹುದಾಗಿದೆ.

ಇದು ಕಾಲೇಜು ಬಡ ವಿದ್ಯಾರ್ಥಿಗಳಿಗಂತೂ ಬಾರಿ ಆಸರೆಯಾಗಿತ್ತು. ಇದೀಗ ಸಿದ್ದರಾಮಯ್ಯ ಎರಡನೇ ಬಾರಿಗೆ ರಾಜ್ಯದ ದೊರೆಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಆ ಹಿನ್ನೆಲೆ ಇಂದಿರಾ ಕ್ಯಾಂಟೀನ್ ಗುತ್ತಿಗೆದಾರ ಧಾರವಾಡ ಮೂಲದ ಮಯೂರ ಮೋರೆ ಇವತ್ತು ಸಿದ್ದರಾಮಯ್ಯ ಮತ್ತೆ ಸಿಎಂ ಆಗಿದ್ದಕ್ಕೆ ಇಂದಿರಾ ಕ್ಯಾಂಟೀನ್ ನಲ್ಲಿ ಹೋಳಿಗೆ ಊಟ ಮಾಡಿಸಿದ್ದಾರೆ.

ಸಿದ್ದರಾಮಯ್ಯನವರ ಯೋಜನೆ ಬಡವರು, ಅದ್ರಲ್ಲೂ ಬಡ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಿದೆ. ಮತ್ತೆ ಸಿದ್ದು ಸಿಎಂ ಆಗಿದ್ದು ಖುಷಿಯಾಗಿದೆ. ಐದು ವರ್ಷ ಉತ್ತಮ ಆಡಳಿತ ಜೊತೆಗೆ ಬಡವರ ಪರ ಆಡಳಿತ ಕೊಡಲಿ ಎಂದು ಆಶಯ ವ್ಯಕ್ತಪಡಿಸಿದ್ರು.

ಒಟ್ಟಿನಲ್ಲಿ, ಸಿದ್ದರಾಮಯ್ಯ ಎರಡನೆ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇತ್ತ ಸಿದ್ದು ಘೋಷಿಸಿದ್ದ ಇಂದಿರಾ ಕ್ಯಾಂಟೀನ್‌ನಲ್ಲಿ ಹೋಳಿಗೆ ಕೊಡುವ ಮೂಲಕ ಸಿದ್ದು ಮತ್ತೆ ಸಿಎಂ ಆಗಿದ್ದಕ್ಕೆ ಸಾರ್ವಜನಿಕರಿಗೆ ಸಿಹಿ ಕೊಟ್ಟಿದ್ದು ವಿಶೇಷವಾಗಿತ್ತು.