‘ಕೆಜಿಎಫ್’ ಚೆಲುವೆ ಶ್ರೀನಿಧಿ ಶೆಟ್ಟಿಯ ಹೊಸ ಸಿನಿಮಾ: ನಾಯಕ ಯಾರು?
Srinidhi Shetty: 'ಕೆಜಿಎಫ್' ಸಿನಿಮಾದ ನಾಯಕಿ ಶ್ರೀನಿಧಿ ಶೆಟ್ಟಿಗೆ ಆ ಸಿನಿಮಾದ ಬಳಿಕ ನಿರೀಕ್ಷಿತ ಮಟ್ಟದಲ್ಲಿ ಅವಕಾಶಗಳು ಲಭಿಸಲಿಲ್ಲ. ಇದೀಗ ಹೊಸ ಸಿನಿಮಾವೊಂದನ್ನು ಶ್ರೀನಿಧಿ ಒಪ್ಪಿಕೊಂಡಿದ್ದು, ಮುಹೂರ್ತ ನಡೆದಿದೆ. ಸಿನಿಮಾದ ನಾಯಕ ಯಾರು?
1 / 8
'ಕೆಜಿಎಫ್', ಕನ್ನಡ ಚಿತ್ರರಂಗದ ಪಾಲಿಗೆ ಹೊರ ರಾಜ್ಯಗಳಲ್ಲಿ ಅವಕಾಶಗಳ ದೊಡ್ಡ ಹೆಬ್ಬಾಗಿಲೊಂದನ್ನು ತೆರೆದ ಸಿನಿಮಾ.
2 / 8
'ಕೆಜಿಎಫ್' ಸಿನಿಮಾದಲ್ಲಿ ಕೆಲಸ ಮಾಡಿದ ತಂತ್ರಜ್ಞರು ನಟರಿಗೆ ಹಲವು ಅವಕಾಶಗಳು ಲಭಿಸಿವೆ. ಆದರೆ ನಾಯಕಿ ಶ್ರೀನಿಧಿ ಶೆಟ್ಟಿಗೆ ನಿರೀಕ್ಷಿತ ಮಟ್ಟದಲ್ಲಿ ಅವಕಾಶಗಳು ಲಭಿಸಲಿಲ್ಲ ಎಂದೇ ಹೇಳಬೇಕು.
3 / 8
ಇದೀಗ ಶ್ರೀನಿಧಿ ಶೆಟ್ಟಿ ಹೊಸದೊಂದು ಸಿನಿಮಾಕ್ಕೆ ಸಹಿ ಹಾಕಿದ್ದು, ಸಿನಿಮಾದ ಮುಹೂರ್ತ ಅದ್ಧೂರಿಯಾಗಿ ನೆರವೇರಿದೆ.
4 / 8
'ತೆಲುಸು ಕದಾ' ಹೆಸರಿನ ತೆಲುಗು ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ರಾಶಿ ಖನ್ನಾ ಸಹ ಇದ್ದಾರೆ.
5 / 8
ಶ್ರೀನಿಧಿ ಶೆಟ್ಟಿಗೆ ಇದು ನಾಲ್ಕನೇ ಸಿನಿಮಾ. 'ಕೆಜಿಎಫ್ 1, 2' ಹಾಗೂ ತಮಿಳಿನ 'ಕೋಬ್ರಾ' ಹೆಸರಿನ ಸಿನಿಮಾದಲ್ಲಿ ಶ್ರೀನಿಧಿ ನಟಿಸಿದ್ದರು. ಈಗ 'ತೆಲುಸು ಕದಾ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
6 / 8
ಸಿನಿಮಾದ ಮುಹೂರ್ತ ಇತ್ತೀಚೆಗಷ್ಟೆ ನಡೆದಿದ್ದು, ತೆಲುಗು ನಟರಾದ ನಾನಿ, ನಿತಿನ್ ಅವರುಗಳು ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಿದ್ದರು.
7 / 8
ಈ ಸಿನಿಮಾದ ಬಳಿಕ ಶ್ರೀನಿಧಿ ಶೆಟ್ಟಿಗೆ ಇನ್ನೂ ಹೆಚ್ಚಿನ ಅವಕಾಗಳು ಬರುವ ನಿರೀಕ್ಷೆ ಇದೆ.
8 / 8
'ತೆಲುಸು ಕದಾ' ಸಿನಿಮಾಕ್ಕೆ ಸಿದ್ದು ಜೊನ್ನಲಗಡ್ಡ ನಾಯಕ. ಈ ಹಿಂದೆ 'ಡಿಜೆ ಟಿಲ್ಲು' ಸಿನಿಮಾದಲ್ಲಿ ಸಿದ್ದು ನಟಿಸಿದ್ದರು.