Delhi Police Recruitment 2022: ದೆಹಲಿ ಪೊಲೀಸ್ ನೇಮಕಾತಿ: ತಿಂಗಳ ವೇತನ 81 ಸಾವಿರ ರೂ.
TV9 Web | Updated By: ಝಾಹಿರ್ ಯೂಸುಫ್
Updated on:
May 14, 2022 | 10:21 PM
SSC Delhi Police Head Constable Recruitment 2022: ಆಸಕ್ತ ಅಭ್ಯರ್ಥಿಗಳಿಗೆ ಜೂನ್ 16, 2022 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇರಲಿದೆ. ಸಿಬ್ಬಂದಿ ಆಯ್ಕೆ ಆಯೋಗದ ಅಧಿಕೃತ ವೆಬ್‌ಸೈಟ್ ssc.nic.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
1 / 5
ಕೇಂದ್ರ ಸರ್ಕಾರದ ಸಿಬ್ಬಂದಿ ಆಯ್ಕೆ ಆಯೋಗವು (SSC) ದೆಹಲಿ ಪೊಲೀಸ್‌ನಲ್ಲಿ ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ ನಡೆಸುವುದಾಗಿ ತಿಳಿಸಿದೆ. ಈ ನೇಮಕಾತಿಯ ಅಧಿಸೂಚನೆಯು ಮೇ 17, 2022 ರಂದು ಪ್ರಕಟಗೊಳ್ಳಲಿದೆ. ಇದರೊಂದಿಗೆ ಈ ಹುದ್ದೆಗಳಿಗೆ ಅರ್ಜಿ ಪ್ರಕ್ರಿಯೆಯು ಸಹ ಪ್ರಾರಂಭವಾಗುತ್ತದೆ.
2 / 5
ಆಸಕ್ತ ಅಭ್ಯರ್ಥಿಗಳಿಗೆ ಜೂನ್ 16, 2022 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇರಲಿದೆ. ಸಿಬ್ಬಂದಿ ಆಯ್ಕೆ ಆಯೋಗದ ಅಧಿಕೃತ ವೆಬ್‌ಸೈಟ್ ssc.nic.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ 12 ನೇ ತರಗತಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಹಾಗೆಯೇ ಅರ್ಜಿದಾರರ ಗರಿಷ್ಠ ವಯೋಮಿತಿಯನ್ನು 25 ವರ್ಷಗಳಿಗೆ ನಿಗದಿಪಡಿಸಲಾಗಿದೆ.
3 / 5
ವೇತನ: ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 25000 ರಿಂದ 81000 ರೂ.ವರೆಗೆ ವೇತನವನ್ನು ನೀಡಲಾಗುತ್ತದೆ. ಇನ್ನು ಈ ನೇಮಕಾತಿ ಅಡಿಯಲ್ಲಿ ಎಷ್ಟು ಹುದ್ದೆಗಳಿವೆ ಎಂಬುದು ಅಧಿಸೂಚನೆ ಪ್ರಕಟಣೆಯಾದ ಬಳಿಕವಷ್ಟೇ ಸ್ಪಷ್ಟವಾಗಲಿದೆ.
4 / 5
ಆಯ್ಕೆ ಪ್ರಕ್ರಿಯೆ: ಈ ನೇಮಕಾತಿಯಲ್ಲಿ ಮೊದಲು ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಇದು ಕಂಪ್ಯೂಟರ್ ಆಧಾರಿತ ಪರೀಕ್ಷೆ ಆಗಿರಲಿದೆ. ಇದರಲ್ಲಿ ಪಾಸಾದ ಅಭ್ಯರ್ಥಿಗಳನ್ನು ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಕರೆಯಲಾಗುವುದು. ಈ ಮೂಲಕ ಆಯ್ಕೆ ನಡೆಯಲಿದೆ.
5 / 5
ಅರ್ಜಿ ಶುಲ್ಕ: ದೆಹಲಿ ಪೊಲೀಸ್‌ನಲ್ಲಿ ಹೆಡ್ ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ₹100 ಅರ್ಜಿ ಶುಲ್ಕವನ್ನು ಪಾವತಿಸಬೇಕು. ಆದಾಗ್ಯೂ, SC, ST ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.