Star Fruits: ಸ್ಟಾರ್ ಫ್ರೂಟ್ ತಿನ್ನುವ ಮೊದಲು ಅದರ ಅಪಾಯದ ಬಗ್ಗೆಯೂ ತಿಳಿದಿರಲಿ
ಸ್ಟಾರ್ ಫ್ರೂಟ್ ವಿವಿಧ ಆರೋಗ್ಯ ಪ್ರಯೋಜನಗಳನ್ನು ನೀಡಬಹುದಾದರೂ, ಅದರ ಸೇವನೆಗೆ ಸಂಬಂಧಿಸಿದ ಕೆಲವು ಮುನ್ನೆಚ್ಚರಿಕೆಗಳನ್ನು ಪರಿಗಣಿಸುವುದು ಮುಖ್ಯವಾಗಿದೆ. ಈ ಹಣ್ಣಿನಿಂದ ಕೆಲವರಿಗೆ ಅಡ್ಡ ಪರಿಣಾಮಗಳು ಕೂಡ ಆಗಬಹುದು.
1 / 10
ಸ್ಟಾರ್ ಫ್ರೂಟ್ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಈ ಹಣ್ಣಿನಲ್ಲಿ ಕಡಿಮೆ ಕ್ಯಾಲೋರಿ ಇದ್ದು, ಹಾಗೆಯೇ ಹೆಚ್ಚಿನ ಫೈಬರ್ ಅಂಶ ಕಂಡು ಬರುತ್ತವೆ.
2 / 10
ಹಾಗೇ, ಪ್ರೋಟೀನ್, ವಿಟಮಿನ್ ಸಿ, ವಿಟಮಿನ್ ಬಿ 5, ಕ್ಯಾಲ್ಸಿಯಂ, ಸೋಡಿಯಂ, ಫೋಲೇಟ್, ತಾಮ್ರ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಅಂಶಗಳಿವೆ.
3 / 10
ಸ್ಟಾರ್ ಫ್ರೂಟ್ ತೂಕ ಇಳಿಕೆಗೆ ಸಹಕಾರಿಯಾಗಿದೆ. ಹಾಗೇ, ಹೃದಯದ ಆರೊಗ್ಯ ಕಾಪಾಡುತ್ತದೆ. ನಮ್ಮ ಉಸಿರಾಟವನ್ನು ಸುಗಮಗೊಳಿಸುತ್ತದೆ.
4 / 10
ಗಂಟಲು ನೋವು ಕಡಿಮೆ ಮಾಡಿ, ಉಸಿರಾಟ ವ್ಯವಸ್ಥೆಯನ್ನು ಸುಗಮಗೊಳಿಸಲು ಸ್ಟಾರ್ ಫ್ರೂಟ್ ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಕೂಡ ಸುಧಾರಿಸುತ್ತದೆ. ಮಲಬದ್ಧತೆಯ ಸಮಸ್ಯೆಯನ್ನು ಪರಿಹರಿಸಲು ಇದು ಸಹಕಾರಿಯಾಗಿದೆ.
5 / 10
ಸ್ಟಾರ್ ಹಣ್ಣು ವಿವಿಧ ಆರೋಗ್ಯ ಪ್ರಯೋಜನಗಳನ್ನು ನೀಡಬಹುದಾದರೂ, ಅದರ ಸೇವನೆಗೆ ಸಂಬಂಧಿಸಿದ ಕೆಲವು ಮುನ್ನೆಚ್ಚರಿಕೆಗಳನ್ನು ಪರಿಗಣಿಸುವುದು ಮುಖ್ಯವಾಗಿದೆ. ಈ ಹಣ್ಣಿನಿಂದ ಕೆಲವರಿಗೆ ಅಡ್ಡ ಪರಿಣಾಮಗಳು ಕೂಡ ಆಗಬಹುದು.
6 / 10
ಸ್ಟಾರ್ ಫ್ರೂಟ್ ಆಕ್ಸಲೇಟ್ ಎಂಬ ನೈಸರ್ಗಿಕ ಸಂಯುಕ್ತಗಳನ್ನು ಹೊಂದಿರುತ್ತದೆ. ಇದು ಮೂತ್ರಪಿಂಡದ ಸಮಸ್ಯೆಗಳಿರುವ ವ್ಯಕ್ತಿಗಳಿಗೆ ಹಾನಿಕಾರಕವಾಗಿದೆ.
7 / 10
ಆಕ್ಸಲೇಟ್‌ಗಳು ದೇಹದಲ್ಲಿ ಸಂಗ್ರಹವಾಗಬಹುದು. ಇದರಿಂದ ಕಿಡ್ನಿಯಲ್ಲಿ ಕಲ್ಲು ಉಂಟಾಗಬಹುದು. ನೀವು ಮೂತ್ರಪಿಂಡದ ಕಾಯಿಲೆ ಹೊಂದಿದ್ದರೆ, ಸ್ಟಾರ್ ಹಣ್ಣುಗಳನ್ನು ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಸೂಕ್ತವಾಗಿದೆ.
8 / 10
ಸ್ಟಾರ್ ಫ್ರೂಟ್ನ ಅತಿಯಾದ ಸೇವನೆಯು ವಾಂತಿ, ಬಿಕ್ಕಳಿಕೆ, ಮಾನಸಿಕ ಗೊಂದಲಕ್ಕೆ ಕಾರಣವಾಗಬಹುದು.
9 / 10
ಸ್ಟಾರ್ ಹಣ್ಣಿನ ಅತಿಯಾದ ಸೇವನೆಯು ನ್ಯೂರೋಟಾಕ್ಸಿಸಿಟಿಗೆ ಕಾರಣವಾಗಬಹುದು. ಇದು ಫಿಟ್ಸ್‌ಗೆ ಕಾರಣವಾಗುತ್ತದೆ.
10 / 10
ಹೀಗಾಗಿ, ಸ್ಟಾರ್ ಫ್ರೂಟ್ ಅನ್ನು ಆಗಾಗ ಅಪರೂಪಕ್ಕೊಮ್ಮೆ ತಿಂದರೆ ಏನೂ ತೊಂದರೆಯಿಲ್ಲ. ಆದರೆ, ನಿರಂತರವಾಗಿ ತಿನ್ನುವ ಮೊದಲು ವೈದ್ಯರ ಸಲಹೆ ಪಡೆಯಿರಿ.