Kannada News Photo gallery Sukanya Samriddhi Yojana not only earn great returns you also be assured daughters education marriage
Sukanya Samriddhi Yojana: ಮದುವೆಗೋಸ್ಕರ ಬರೋಬ್ಬರಿ 65 ಲಕ್ಷ ರೂ. ನೀಡುತ್ತೆ ಈ ಯೋಜನೆ: ಪೋಷಕರೇ ಗಮನಿಸಿ
TV9 Web | Updated By: Digi Tech Desk
Updated on:
Dec 28, 2021 | 1:20 PM
What is Sukanya Samriddhi Yojana (SSY): ಹೆಣ್ಣು ಮಗುವಿಗೆ 21 ವರ್ಷ ತುಂಬುವವರೆಗೆ ಅಥವಾ 18 ವರ್ಷ ವಯಸ್ಸಿನ ನಂತರ ಅವಳು ಮದುವೆಯಾಗುವವರೆಗೆ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಮುಂದುವರಿಸಬಹುದು. ಮದುವೆ ಈ ಸಂದರ್ಭಕ್ಕೆ ಈ ಹಣ ತುಂಬಾನೇ ಉಪಯೋಗವಾಗಲಿದೆ.
1 / 10
ನಿಮ್ಮ ಮಗಳ ಭವಿಷ್ಯವು ಆರ್ಥಿಕವಾಗಿ ಸಮೃದ್ಧವಾಗಿರಬೇಕೆಂದು ಬಯಸಿದರೆ ಇದಕ್ಕಾಗಿ ಸರ್ಕಾರದ ಅನೇಕ ಅದ್ಭುತ ಹೂಡಿಕೆ ಯೋಜನೆಗಳಿವೆ. ಅದರಲ್ಲಿ ಮುಖ್ಯ ಹಾಗೂ ಹೆಚ್ಚು ಲಾಭದಾಯಕವಾಗಿರುವುದು ಸುಕನ್ಯಾ ಸಮೃದ್ಧಿ ಯೋಜನೆ (Sukanaya Samridhi Yojna – SSY). ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆಯು ನಿಮಗೆ ಉತ್ತಮ ಆದಾಯವನ್ನ ಗಳಿಸುವ ಅವಕಾಶ ನೀಡುವುದಲ್ಲದೆ, ನಿಮ್ಮ ಮಗಳ ಉನ್ನತ ಶಿಕ್ಷಣ, ವೃತ್ತಿ ಮತ್ತು ಮದುವೆಯ ಬಗ್ಗೆ ನಿಮಗೆ ಭರವಸೆ ನೀಡುತ್ತದೆ.
2 / 10
ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗಳಿಗೆ ಖಾತೆಯನ್ನ ತೆರೆಯಬಹುದು. ದಿನಕ್ಕೆ 100 ರೂಪಾಯಿಗಳನ್ನು ಉಳಿಸುವ ಮೂಲಕ ನೀವು 15 ಲಕ್ಷ ರೂಪಾಯಿಗಳನ್ನು ಪಡೆಯಬಹುದು. 416 ರೂಪಾಯಿಗಳನ್ನು ಉಳಿಸುವ ಮೂಲಕ 65 ಲಕ್ಷ ರೂಪಾಯಿವರೆಗೆ ಲಾಭ ಪಡೆಯಬಹುದು.
3 / 10
ಹಾಗಾದ್ರೆ ಈ ಸುಕನ್ಯಾ ಸಮೃದ್ಧಿ ಯೋಜನೆ ಎಂದರೇನು?, ಖಾತೆ ಹೇಗೆ ತೆರೆಯುವುದು?, ಇದರಿಂದ ಯಾವರೀತಿ ಪ್ರಯೋಜನ ಎಂಬುದನ್ನು ತಿಳಿಯೋಣ.
4 / 10
ಸುಕನ್ಯಾ ಸಮೃದ್ಧಿ ಯೋಜನೆ (SSY) ಹೆಣ್ಣು ಮಕ್ಕಳಿಗಾಗಿ ಕೇಂದ್ರ ಸರ್ಕಾರ ರೂಪಿಸಿದರು ಸಣ್ಣ ಉಳಿತಾಯ ಯೋಜನೆಯಾಗಿದೆ. ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ಇದನ್ನು ಪ್ರಾರಂಭಿಸಲಾಗಿದೆ. ಸಣ್ಣ ಉಳಿತಾಯ ಯೋಜನೆಗಳಲ್ಲಿಯೇ ಸುಕನ್ಯಾ ಯೋಜನೆಗೆ ಉತ್ತಮ ಬಡ್ಡಿ ದರ ಇದೆ.
5 / 10
ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ತೆರೆಯುವುದು ಹೇಗೆ?: ಹೆಣ್ಣು ಮಗುವಿನ ಜನನದ ನಂತರ 10 ವರ್ಷಕ್ಕಿಂತ ಮೊದಲು ಕನಿಷ್ಠ 250 ರೂ. ಠೇವಣಿಯೊಂದಿಗೆ ತೆರೆಯಬಹುದು. ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ, ನೀವು ವಾರ್ಷಿಕವಾಗಿ ಗರಿಷ್ಠ 1.5 ಲಕ್ಷ ರೂಪಾಯಿಗಳವರೆಗೆ ಠೇವಣಿ ಮಾಡಬಹುದು.
6 / 10
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಸದ್ಯ ಶೇ.7.6 ರಷ್ಟು ಬಡ್ಡಿ ಸಿಗುತ್ತಿದೆ. ಈ ಯೋಜನೆಯಲ್ಲಿ, ಯಾವುದೇ ವ್ಯಕ್ತಿಯು ತನ್ನ ಇಬ್ಬರು ಹೆಣ್ಣುಮಕ್ಕಳ ಹೆಸರಲ್ಲಿ ಖಾತೆಯನ್ನ ತೆರೆಯಬಹುದು. ಅವರ 21ನೇ ವಯಸ್ಸಿನಲ್ಲಿ ಈ ಖಾತೆಯಿಂದ ಹಣ ಹಿಂಪಡೆಯಬಹುದು. ಅಂದ್ಹಾಗೆ, ಈ ಯೋಜನೆಯಲ್ಲಿ, ಮೊತ್ತವು 9 ವರ್ಷ 4 ತಿಂಗಳುಗಳಲ್ಲಿ ದ್ವಿಗುಣಗೊಳ್ಳುತ್ತದೆ.
7 / 10
ನೀವು ಈ ಖಾತೆಯನ್ನ ಯಾವುದೇ ಅಂಚೆ ಕಚೇರಿ ಅಥವಾ ವಾಣಿಜ್ಯ ಶಾಖೆಯ ಅಧಿಕೃತ ಶಾಖೆಯಲ್ಲಿ ತೆರೆಯಬಹುದು. ನೀವು 2022 ರಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ, ನಿಮ್ಮ ಮಗಳ ವಯಸ್ಸು 1 ವರ್ಷವಾಗಿದ್ದರೆ, ದಿನಕ್ಕೆ ರೂ.416 ಉಳಿಸುವುದರಿಂದ 65 ಲಕ್ಷಗಳನ್ನ ಗಳಿಸಬೋದು.
8 / 10
ನೀವು ದಿನಕ್ಕೆ ರೂ.416 ಉಳಿಸಿದರೆ, ನೀವು ತಿಂಗಳಿಗೆ ರೂ. 12,500 ಹೂಡಿಕೆ ಮಾಡಬೇಕಾಗುತ್ತದೆ. ಪ್ರತಿ ತಿಂಗಳು 12,500 ರೂಪಾಯಿ ಠೇವಣಿ ಇಟ್ಟರೆ ಒಂದು ವರ್ಷದಲ್ಲಿ 1.5 ಲಕ್ಷ ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. 2043ರಲ್ಲಿ, ಮಗಳಿಗೆ 21 ವರ್ಷ ತುಂಬಿದಾಗ, ಯೋಜನೆಯು ಪಕ್ವವಾಗುತ್ತದೆ, ಆ ಸಮಯದಲ್ಲಿ ಒಟ್ಟು ಮೆಚ್ಯೂರಿಟಿ ಮೊತ್ತವು 6,500,000 ರೂ. ಲಭ್ಯವಾಗುತ್ತೆ.
9 / 10
ನೀವು ಗಮನದಲ್ಲಿಟ್ಟುಕೊಳ್ಳಬೇಕಾದ ಲೆಕ್ಕಾಚಾರ ಇದು. ದಿನಕ್ಕೆ ಕೇವಲ 416 ರೂ.ಗಳನ್ನು ಉಳಿಸುವ ಮೂಲಕ, ನಿಮ್ಮ ಮಗಳ ಭವಿಷ್ಯವನ್ನು ನೀವು ಉಳಿಸಬಹುದು. ಪ್ರತಿ ಹೂಡಿಕೆಯ ಮೂಲ ಮಂತ್ರವು ಬೇಗನೆ ಪ್ರಾರಂಭಿಸುವುದು. ಈ ಯೋಜನೆಯಲ್ಲಿ ನೀವು ಎಷ್ಟು ಬೇಗನೆ ಪ್ರಾರಂಭಿಸುತ್ತೀರೋ ಅಷ್ಟು ಲಾಭವನ್ನು ನೀವು ಪಡೆಯುತ್ತೀರಿ.
10 / 10
ಹೆಣ್ಣು ಮಗುವಿಗೆ 21 ವರ್ಷ ತುಂಬುವವರೆಗೆ ಅಥವಾ 18 ವರ್ಷ ವಯಸ್ಸಿನ ನಂತರ ಅವಳು ಮದುವೆಯಾಗುವವರೆಗೆ ಅದನ್ನು ಮುಂದುವರಿಸಬಹುದು. ಮದುವೆ ಈ ಸಂದರ್ಭಕ್ಕೆ ಈ ಹಣ ತುಂಬಾನೇ ಉಪಯೋಗವಾಗಲಿದೆ. ಇನ್ನೇಕೆ ತಡ ನಿಮ್ಮ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿ.
Published On - 12:59 pm, Tue, 28 December 21