Updated on: Dec 28, 2021 | 4:53 PM
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಸದ್ಯ ‘ಪುಷ್ಪ: ದಿ ರೈಸ್’ ಚಿತ್ರದ ಯಶಸ್ಸಿನ ಸಂತಸದಲ್ಲಿದ್ದಾರೆ.
ಇದೇ ಖುಷಿಯಲ್ಲಿ ಅವರು ಹೊಸ ಫೋಟೋಶೂಟ್ ಮಾಡಿಸಿದ್ದು, ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಕಪ್ಪುಬಣ್ಣದ ಸೀರೆಯುಟ್ಟು ರಶ್ಮಿಕಾ ಮಿಂಚಿದ್ದು, ಫ್ಯಾನ್ಸ್ ಫಿದಾ ಆಗಿದ್ದಾರೆ.
ಕೊಡಗಿನ ಕುವರಿ ಸೀರೆಯುಟ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವು ಬಾರಿ ಅವರು ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿದ್ದಿದೆ.
ಪ್ರಸ್ತುತ ಭಾರತದ ಹಲವು ಚಿತ್ರರಂಗಗಳಲ್ಲಿ 25 ವರ್ಷದ ಈ ನಟಿ ಸಖತ್ ಬ್ಯುಸಿ. ಸ್ಟಾರ್ ನಟರ ಚಿತ್ರಗಳಿಗೆ ರಶ್ಮಿಕಾ ಮುಂದಿನ ನಾಯಕಿ ಎಂದು ಆಗಾಗ ಸುದ್ದಿ ಹರಿದಾಡುವುದಿದೆ.
ಪ್ರಸ್ತುತ ರಶ್ಮಿಕಾ ಮೂರು ಚಿತ್ರಗಳನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದು, ಕೆಲಸಗಳು ನಡೆಯುತ್ತಿವೆ. ಇದರ ಹೊರತಾಗಿ ಹಲವು ಚಿತ್ರಗಳಿಗೆ ಮಾತುಕತೆ ನಡೆಯುತ್ತಿದೆ.