Kannada News Photo gallery Year end 2021 cricket Roundup funny incidents in various playgrounds all over the world
ಇದು ಯಾವ ಸಿಗ್ನಲ್ಲೋ ಮಾರಾಯಾ!? 2021ರಲ್ಲಿ ಕ್ರಿಕೆಟ್ ಮೈದಾನ ದಲ್ಲಿ ನಡೆದ ವಿಚಿತ್ರ ಘಟನೆಗಳ ರಿವೈಂಡ್ ಮಾಡೋಣಾ ಬನ್ನೀ
ಈ ವರ್ಷ ಕ್ರಿಕೆಟ್ ದುನಿಯಾ ಹತ್ತು ಹಲವು ಅವಿಸ್ಮರೀಣಿಯ ಕ್ಷಣಗಳಿಗೆ ಸಾಕ್ಷಿಯಾಗಿದೆ. ಐತಿಹಾಸಿಕ ಸಾಧನೆಗೆ ವೇದಿಕೆಯಾಗಿದೆ. ಹಾಗೇ ಸಾಕಷ್ಟು ವಿವಾದಗಳನ್ನು ಕೂಡ ಕಂಡಿದೆ. ಇದರ ಮಧ್ಯೆ ಕೆಲವೊಂದು ವಿಲಕ್ಷಣ ಸಂಗತಿಗಳು ಅಭಿಮಾನಿಗಳನ್ನ ಮನಸಲ್ಲಿ ಅಚ್ಚಳಿಯದೇ ಹಾಗೇ ಉಳಿದಿವೆ.
Year end 2021 cricket Roundup funny incidents in various playgrounds all over the world
1 / 5
Year end 2021 cricket Roundup funny incidents in various playgrounds all over the world
2 / 5
ಐಸಿಸಿ ಪ್ರಶಸ್ತಿ ಪಡೆದ ನಾಯಿ: ಐರ್ಲೆಂಡ್ನಲ್ಲಿ ನಡೆದ ಮಹಿಳಾ ಟಿಟ್ವೆಂಟಿ ಕಪ್ನಲ್ಲಿ ಸರೆಯಾದ ದೃಶ್ಯವಿದು. ಪಂದ್ಯದ ಮಧ್ಯೆ ನಾಯಿಯೊಂದು ಮಾಲೀಕನ ಕೈ ತಪ್ಪಿಸಿಕೊಂಡು ಮೈದಾನಕ್ಕೆ ನುಗ್ಗಿತ್ತು. ನೇರ ಬಂದಿದ್ದೇ ಬಾಲ್ ಕಚ್ಚಿಕೊಂಡು ಓಡಲು ಶುರುಮಾಡ್ತು. ಫೀಲ್ಡಿಂಗ್ ಮಾಡ್ತಿದ್ದ ಆಟಗಾರರೆಲ್ಲಾ ಈ ನಾಯಿಯನ್ನ ಹಿಡಿಯೋಕೆ ಬೆನ್ನಟ್ಟಿಕೊಂಡು ಹೋದ್ರೂ ಪ್ರಯೋಜನವಾಗ್ಲಿಲ್ಲ. ಕಡೆಗೆ ಪ್ರೀತಿಯಿಂದ ಕರೆದ ಆಟಗಾರ್ತಿ ಬಳಿ ಹೋಗಿ ಬಾಲ್ ನೀಡ್ತು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಐಸಿಸಿ ಕೂಡ ಈ ನಾಯಿಯ ಫೋಟೋ ಪೋಸ್ಟ್ ಮಾಡಿ, ನಾವು ಈ ತಿಂಗಳ ಪ್ರಶಸ್ತಿಯನ್ನ ಈ ಶ್ವಾನಕ್ಕೆ ನೀಡಿದ್ದೇವೆ ಎಂದು ತಮಾಷೆ ಮಾಡಿತ್ತು.
3 / 5
ಅಂಪೈರ್ ವಿಚಿತ್ರ ವೈಡ್ ಸಿಗ್ನಲ್: ಮಹಾರಾಷ್ಟ್ರದ ಪುರಂದರ್ ಪ್ರೀಮಿಯರ್ ಲೀಗ್ನಲ್ಲಿ ನಡೆದ ವಿಲಕ್ಷಣ ದೃಶ್ಯವಿದು. ಬೌಲರ್ ಎಸೆದಿದ್ದು ವೈಡ್ ಬಾಲ್ ಎಂದು ಎರಡು ಕೈ ಅಗಲಿಸಿ ಅಂಪೈರ್ ತೀರ್ಪು ನೀಡ್ತಾರೆ. ಆದ್ರೆ ಈ ಅಂಪೈರ್ ಉಲ್ಟಾ ನಿಂತು, ಎರಡೂ ಕಾಲುಗಳಿಂದಲೇ ವೈಡ್ ಸಿಗ್ನಲ್ ಕೊಟ್ಟಿದ್ದಾರೆ. ಈ ವಿಡಿಯೋ ಈ ವರ್ಷ ಕ್ರಿಕೆಟ್ ಲೋಕದಲ್ಲಿ ಸಿಕ್ಕಾಪಟ್ಟೆ ವೈರಲ್ ಆದ ವಿಡಿಯೋ.
4 / 5
ಔಟ್ ಆಗಿದ್ದು ಯಾರಿಗೂ ಗೊತ್ತಾಗಲಿಲ್ಲ ಆಸ್ಟ್ರೇಲಿಯಾದ ವುಮೆನ್ಸ್ ನ್ಯಾಷನಲ್ ಲೀಗ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಆಟಗಾರ್ತಿ ಔಟಾಗಿದ್ದೇ ಯಾರಿಗೂ ಗೊತ್ತಾಗಲಿಲ್ಲ. ಅಂಪೈರ್ ಕತೆ ಒತ್ತಿಟ್ಟಿಗಿರಲಿ.. ಬೌಲಿಂಗ್ ಮಾಡುತ್ತಿದ್ದ ಬೌಲರ್ ಮತ್ತು ವಿಕೆಟ್ ಕೀಪರ್ಗೂ ಬೆಲ್ಸ್ ಕೆಳಕ್ಕೆ ಬಿದ್ದಿದ್ದನ್ನ ಗಮನಿಸಲು ಸಾಧ್ಯವಾಗ್ಲಿಲ್ಲ. ಪಂದ್ಯ ಮುಗಿದ ಬಳಿಕ ವಿಡಿಯೋ ರಿವ್ಯೂನಲ್ಲಿ ಬೆಲ್ಸ್ ಕೆಳಕ್ಕೆ ಬಿದ್ದಿದ್ದು ಕಾಣಿಸ್ತಿತ್ತು.