ನಿಮ್ಮ ಮಗಳ ಭವಿಷ್ಯವು ಆರ್ಥಿಕವಾಗಿ ಸಮೃದ್ಧವಾಗಿರಬೇಕೆಂದು ಬಯಸಿದರೆ ಇದಕ್ಕಾಗಿ ಸರ್ಕಾರದ ಅನೇಕ ಅದ್ಭುತ ಹೂಡಿಕೆ ಯೋಜನೆಗಳಿವೆ. ಅದರಲ್ಲಿ ಮುಖ್ಯ ಹಾಗೂ ಹೆಚ್ಚು ಲಾಭದಾಯಕವಾಗಿರುವುದು ಸುಕನ್ಯಾ ಸಮೃದ್ಧಿ ಯೋಜನೆ (Sukanaya Samridhi Yojna – SSY). ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆಯು ನಿಮಗೆ ಉತ್ತಮ ಆದಾಯವನ್ನ ಗಳಿಸುವ ಅವಕಾಶ ನೀಡುವುದಲ್ಲದೆ, ನಿಮ್ಮ ಮಗಳ ಉನ್ನತ ಶಿಕ್ಷಣ, ವೃತ್ತಿ ಮತ್ತು ಮದುವೆಯ ಬಗ್ಗೆ ನಿಮಗೆ ಭರವಸೆ ನೀಡುತ್ತದೆ.
ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗಳಿಗೆ ಖಾತೆಯನ್ನ ತೆರೆಯಬಹುದು. ದಿನಕ್ಕೆ 100 ರೂಪಾಯಿಗಳನ್ನು ಉಳಿಸುವ ಮೂಲಕ ನೀವು 15 ಲಕ್ಷ ರೂಪಾಯಿಗಳನ್ನು ಪಡೆಯಬಹುದು. 416 ರೂಪಾಯಿಗಳನ್ನು ಉಳಿಸುವ ಮೂಲಕ 65 ಲಕ್ಷ ರೂಪಾಯಿವರೆಗೆ ಲಾಭ ಪಡೆಯಬಹುದು.
ಹಾಗಾದ್ರೆ ಈ ಸುಕನ್ಯಾ ಸಮೃದ್ಧಿ ಯೋಜನೆ ಎಂದರೇನು?, ಖಾತೆ ಹೇಗೆ ತೆರೆಯುವುದು?, ಇದರಿಂದ ಯಾವರೀತಿ ಪ್ರಯೋಜನ ಎಂಬುದನ್ನು ತಿಳಿಯೋಣ.
ಸುಕನ್ಯಾ ಸಮೃದ್ಧಿ ಯೋಜನೆ (SSY) ಹೆಣ್ಣು ಮಕ್ಕಳಿಗಾಗಿ ಕೇಂದ್ರ ಸರ್ಕಾರ ರೂಪಿಸಿದರು ಸಣ್ಣ ಉಳಿತಾಯ ಯೋಜನೆಯಾಗಿದೆ. ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ಇದನ್ನು ಪ್ರಾರಂಭಿಸಲಾಗಿದೆ. ಸಣ್ಣ ಉಳಿತಾಯ ಯೋಜನೆಗಳಲ್ಲಿಯೇ ಸುಕನ್ಯಾ ಯೋಜನೆಗೆ ಉತ್ತಮ ಬಡ್ಡಿ ದರ ಇದೆ.
ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ತೆರೆಯುವುದು ಹೇಗೆ?: ಹೆಣ್ಣು ಮಗುವಿನ ಜನನದ ನಂತರ 10 ವರ್ಷಕ್ಕಿಂತ ಮೊದಲು ಕನಿಷ್ಠ 250 ರೂ. ಠೇವಣಿಯೊಂದಿಗೆ ತೆರೆಯಬಹುದು. ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ, ನೀವು ವಾರ್ಷಿಕವಾಗಿ ಗರಿಷ್ಠ 1.5 ಲಕ್ಷ ರೂಪಾಯಿಗಳವರೆಗೆ ಠೇವಣಿ ಮಾಡಬಹುದು.
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಸದ್ಯ ಶೇ.7.6 ರಷ್ಟು ಬಡ್ಡಿ ಸಿಗುತ್ತಿದೆ. ಈ ಯೋಜನೆಯಲ್ಲಿ, ಯಾವುದೇ ವ್ಯಕ್ತಿಯು ತನ್ನ ಇಬ್ಬರು ಹೆಣ್ಣುಮಕ್ಕಳ ಹೆಸರಲ್ಲಿ ಖಾತೆಯನ್ನ ತೆರೆಯಬಹುದು. ಅವರ 21ನೇ ವಯಸ್ಸಿನಲ್ಲಿ ಈ ಖಾತೆಯಿಂದ ಹಣ ಹಿಂಪಡೆಯಬಹುದು. ಅಂದ್ಹಾಗೆ, ಈ ಯೋಜನೆಯಲ್ಲಿ, ಮೊತ್ತವು 9 ವರ್ಷ 4 ತಿಂಗಳುಗಳಲ್ಲಿ ದ್ವಿಗುಣಗೊಳ್ಳುತ್ತದೆ.
ನೀವು ಈ ಖಾತೆಯನ್ನ ಯಾವುದೇ ಅಂಚೆ ಕಚೇರಿ ಅಥವಾ ವಾಣಿಜ್ಯ ಶಾಖೆಯ ಅಧಿಕೃತ ಶಾಖೆಯಲ್ಲಿ ತೆರೆಯಬಹುದು. ನೀವು 2022 ರಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ, ನಿಮ್ಮ ಮಗಳ ವಯಸ್ಸು 1 ವರ್ಷವಾಗಿದ್ದರೆ, ದಿನಕ್ಕೆ ರೂ.416 ಉಳಿಸುವುದರಿಂದ 65 ಲಕ್ಷಗಳನ್ನ ಗಳಿಸಬೋದು.
ನೀವು ದಿನಕ್ಕೆ ರೂ.416 ಉಳಿಸಿದರೆ, ನೀವು ತಿಂಗಳಿಗೆ ರೂ. 12,500 ಹೂಡಿಕೆ ಮಾಡಬೇಕಾಗುತ್ತದೆ. ಪ್ರತಿ ತಿಂಗಳು 12,500 ರೂಪಾಯಿ ಠೇವಣಿ ಇಟ್ಟರೆ ಒಂದು ವರ್ಷದಲ್ಲಿ 1.5 ಲಕ್ಷ ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. 2043ರಲ್ಲಿ, ಮಗಳಿಗೆ 21 ವರ್ಷ ತುಂಬಿದಾಗ, ಯೋಜನೆಯು ಪಕ್ವವಾಗುತ್ತದೆ, ಆ ಸಮಯದಲ್ಲಿ ಒಟ್ಟು ಮೆಚ್ಯೂರಿಟಿ ಮೊತ್ತವು 6,500,000 ರೂ. ಲಭ್ಯವಾಗುತ್ತೆ.
ನೀವು ಗಮನದಲ್ಲಿಟ್ಟುಕೊಳ್ಳಬೇಕಾದ ಲೆಕ್ಕಾಚಾರ ಇದು. ದಿನಕ್ಕೆ ಕೇವಲ 416 ರೂ.ಗಳನ್ನು ಉಳಿಸುವ ಮೂಲಕ, ನಿಮ್ಮ ಮಗಳ ಭವಿಷ್ಯವನ್ನು ನೀವು ಉಳಿಸಬಹುದು. ಪ್ರತಿ ಹೂಡಿಕೆಯ ಮೂಲ ಮಂತ್ರವು ಬೇಗನೆ ಪ್ರಾರಂಭಿಸುವುದು. ಈ ಯೋಜನೆಯಲ್ಲಿ ನೀವು ಎಷ್ಟು ಬೇಗನೆ ಪ್ರಾರಂಭಿಸುತ್ತೀರೋ ಅಷ್ಟು ಲಾಭವನ್ನು ನೀವು ಪಡೆಯುತ್ತೀರಿ.
ಹೆಣ್ಣು ಮಗುವಿಗೆ 21 ವರ್ಷ ತುಂಬುವವರೆಗೆ ಅಥವಾ 18 ವರ್ಷ ವಯಸ್ಸಿನ ನಂತರ ಅವಳು ಮದುವೆಯಾಗುವವರೆಗೆ ಅದನ್ನು ಮುಂದುವರಿಸಬಹುದು. ಮದುವೆ ಈ ಸಂದರ್ಭಕ್ಕೆ ಈ ಹಣ ತುಂಬಾನೇ ಉಪಯೋಗವಾಗಲಿದೆ. ಇನ್ನೇಕೆ ತಡ ನಿಮ್ಮ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿ.
Published On - 12:59 pm, Tue, 28 December 21