ಒಂದೇ ದಿನದಲ್ಲಿ ಮಂಗಿಹಾಳ್ ಗ್ರಾಮದಲ್ಲಿ ನಿರ್ಮಾಣವಾಯ್ತು ಸುಲ್ದೇರಪ್ಪ ದೇಗುಲ! ಈ ದಾಖಲೆಯ ನಿರ್ಮಾಣ ಹೇಗೆ ಸಾಧ್ಯವಾಯ್ತು ಗೊತ್ತಾ?
Sulderappa temple: ಕಾಮಗಾರಿ ವೇಳೆ ಶೌಚಕ್ಕೆ ಹೊದರೂ ಸ್ನಾನ ಮಾಡಿ ಕೆಲಸದಲ್ಲಿ ಭಾಗಿಯಾಗಬೇಕು ಎಂಬ ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ದೊಡ್ಡಬಳ್ಳಾಪುರದ ಸುರೇಶ್ ಎಂಬ ಶಿಲ್ಪಿಯ ಮಾರ್ಗದರ್ಶನದಲ್ಲಿ ನಿರ್ಮಾಣ ನಡೆಯಿತು.
Updated on: Jun 16, 2023 | 9:29 AM

ಯಾದಗಿರಿ: ಗ್ರಾಮವೊಂದರಲ್ಲಿ ಒಂದೇ ದಿನದಲ್ಲಿ ದೇವಸ್ಥಾನ ನಿರ್ಮಿಸಿ, ದಾಖಲೆ ನಿರ್ಮಿಸಲಾಗಿದೆ. ಹೌದು ಯಾದಗಿರಿ (Yadgir) ಜಿಲ್ಲೆಯ ಸುರಪುರ (Surapura) ತಾಲೂಕಿನ ಮಂಗಿಹಾಳ್ ಗ್ರಾಮದಲ್ಲಿ ಸುಲ್ದೇರಪ್ಪ ದೇಗುಲವನ್ನು (Sulderappa temple) ದಾಖಲೆಯ ಅವಧಿಯಲ್ಲಿ ನಿರ್ಮಾಣಮಾಡಲಾಗಿದೆ.

ಈ ದಾಖಲೆಯ ನಿರ್ಮಾಣ ಕಾರ್ಯದಲ್ಲಿ ನೂರಾರು ಟ್ರಾಕ್ಟರ್ ಬಳಕೆ, 40 ಕ್ಕೂ ಅಧಿಕ ಮೇಸ್ತ್ರಿಗಳಿಂದ ನಿರ್ಮಾಣ ಕಾರ್ಯ ನಡೆಯಿತು. 35 ಲಕ್ಷ ರೂ. ಖರ್ಚು ಮಾಡಿ ದೇವಗುಲ ನಿರ್ಮಿಸಲಾಗಿದೆ. 11 ಅಡಿ ಎತ್ತರ, ಅಗಲ ಹಾಗೂ ಉದ್ದದ ದೇವಸ್ಥಾನ ಇದಾಗಿದೆ.

ದೇವಸ್ಥಾನದ ದ್ವಾರ ಚೌಕಟ್ಟಿಗೆ ಸುಂದರವಾದ ಕೆತ್ತನೆ ಮಾಡಲಾಗಿದೆ. ಇಡೀ ದೇವಸ್ಥಾನದ ಕಾಮಗಾರಿಗೆ ಕೃಷ್ಣ ನದಿ ನೀರು ಬಳಕೆ ಮಾಡಲಾಗಿದೆ.

ದೊಡ್ಡಬಳ್ಳಾಪುರದ ಭೈರಾ ಎಂಬ ಹೆಸರಿನ ಕಲ್ಲಿಗಳಿಂದ ನಿರ್ಮಾಣ ನಡೆದಿದ್ದು, 3 ಅಡಿ ಅಗಲ, 12 ಅಡಿ ಉದ್ದದ 32 ಕಲ್ಲುಗಳಿಂದ ಕ್ರೇನ್ ಬಳಸಿ ಈ ನಿರ್ಮಾಣವಾಗಿದೆ. ಹೀಗೆ 24 ಗಂಟೆಯಲ್ಲಿ ದೇವಸ್ಥಾನ ನಿರ್ಮಾಣವಾಗಿದ್ದಕ್ಕೆ ಸುತ್ತಮುತ್ತಲ ಜನರು ಶಾಕ್ ಆಗಿದ್ದಾರೆ.

ದೇವಸ್ಥಾನದ ದ್ವಾರ ಚೌಕಟ್ಟಿಗೆ ಸುಂದರವಾದ ಕೆತ್ತನೆ ಮಾಡಲಾಗಿದೆ. ಇಡೀ ದೇವಸ್ಥಾನದ ಕಾಮಗಾರಿಗೆ ಕೃಷ್ಣ ನದಿ ನೀರು ಬಳಕೆ ಮಾಡಲಾಗಿದೆ.

ದೇವಸ್ಥಾನದ ಕಾಮಗಾರಿಯಲ್ಲಿ ತೊಡಗಿದ ಜನ ಮದ್ಯ ಹಾಗೂ ಮಾಂಸ ಮುಟ್ಟಂಗಿಲ್ಲ. ಕಾಮಗಾರಿ ವೇಳೆ ಶೌಚಕ್ಕೆ ಹೊದರೂ ಸ್ನಾನ ಮಾಡಿ ಕೆಲಸದಲ್ಲಿ ಭಾಗಿಯಾಗಬೇಕು ಎಂಬ ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ದೊಡ್ಡಬಳ್ಳಾಪುರದ ಸುರೇಶ್ ಎಂಬ ಶಿಲ್ಪಿಯ ಮಾರ್ಗದರ್ಶನದಲ್ಲಿ ನಿರ್ಮಾಣ ನಡೆಯಿತು.
























