Summer Teas: ಬೇಸಿಗೆಯಲ್ಲಿ ಈ ಐದು ವಿಧದ ಟೀ ಕುಡಿಯುವುದರಿಂದಾಗುವ ಆರೋಗ್ಯ ಪ್ರಯೋಜನಗಳು ತಿಳಿಯಿರಿ..!

Updated on: Apr 05, 2022 | 3:14 PM

Summer Teas: ಬೇಸಿಗೆಯ ಶಾಖವನ್ನು ನಿವಾರಿಸಲು ಲೆಮನ್ ಟೀ ಒಳ್ಳೆಯದು. ನಿಂಬೆಯಿಂದ ಮಾಡಿದ ಚಹಾವು ದೇಹವನ್ನು ಒಳಗಿನಿಂದ ತಂಪಾಗಿರಿಸುತ್ತದೆ.

1 / 5
ಲೆಮನ್ ಟೀ: ಬೇಸಿಗೆಯ ಶಾಖವನ್ನು ನಿವಾರಿಸಲು ಲೆಮನ್ ಟೀ ಒಳ್ಳೆಯದು. ನಿಂಬೆಯಿಂದ ಮಾಡಿದ ಚಹಾವು ದೇಹವನ್ನು ಒಳಗಿನಿಂದ ತಂಪಾಗಿರಿಸುತ್ತದೆ. ಬೆಳಗ್ಗೆ ಲೆಮನ್ ಟೀ ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಲೆಮನ್ ಟೀ: ಬೇಸಿಗೆಯ ಶಾಖವನ್ನು ನಿವಾರಿಸಲು ಲೆಮನ್ ಟೀ ಒಳ್ಳೆಯದು. ನಿಂಬೆಯಿಂದ ಮಾಡಿದ ಚಹಾವು ದೇಹವನ್ನು ಒಳಗಿನಿಂದ ತಂಪಾಗಿರಿಸುತ್ತದೆ. ಬೆಳಗ್ಗೆ ಲೆಮನ್ ಟೀ ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

2 / 5

ರೋಸ್ ಲೀಫ್ ಟೀ: ರೋಸ್ ಲೀಫ್ ಟೀ ದೇಹವನ್ನು ಒಳಗಿನಿಂದ ತಂಪಾಗಿರಿಸುವುದು ಮಾತ್ರವಲ್ಲದೆ ತ್ವಚೆಗೂ ತುಂಬಾ ಒಳ್ಳೆಯದು. ನೀರು ಮತ್ತು ಚಹಾ ಎಲೆಗಳನ್ನು ಕುದಿಸಿ ನಂತರ ಗುಲಾಬಿ ಎಲೆಗಳನ್ನು ಸೇರಿಸಿ. ತಣ್ಣಗಾದ ನಂತರ ಕುಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

3 / 5

ಗ್ರೀನ್ ಟೀ: ಗ್ರೀನ್ ಟೀ ದೇಹಕ್ಕೆ ಅಗತ್ಯವಿರುವ ಅನೇಕ ಆಂಟಿಆಕ್ಸಿಡೆಂಟ್‌ಗಳನ್ನು ಒಳಗೊಂಡಿದೆ. ಬೇಸಿಗೆಯಲ್ಲಿ ತಂಪು ನೀಡುವ ಗ್ರೀನ್ ಟೀ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ತೂಕವನ್ನು ಕಡಿಮೆ ಮಾಡಲು ತುಂಬಾ ಉಪಯುಕ್ತವಾಗಿದೆ. ಹೃದಯಾಘಾತವನ್ನು ತಡೆಯುತ್ತದೆ.

4 / 5

ಪುದೀನ ಚಹಾ: ಪುದೀನಾ ಶಾಖವನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿಯಾಗಿದೆ. ಬೇಸಿಗೆಯಲ್ಲಿ ಪ್ರತಿನಿತ್ಯ ಪುದೀನಾ ಟೀ ಕುಡಿಯುವುದರಿಂದ ದೇಹದ ಉಷ್ಣತೆ ಉಂಟಾಗುವುದಿಲ್ಲ. ಇದನ್ನು ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆಯೂ ಕಡಿಮೆಯಾಗುತ್ತದೆ ಎಂಬುದು ವಿಶೇಷ.

5 / 5

ತುಳಸಿ ಟೀ: ಬೇಸಿಗೆಯಲ್ಲಿ ಎಲ್ಲಾ ಸಮಸ್ಯೆಗಳಿಗೂ ತುಳಸಿ ಟೀ ಉತ್ತಮ ಪರಿಹಾರವಾಗಿದೆ. ತುಳಸಿ ಎಲೆಗಳೊಂದಿಗೆ ಕಪ್ಪು ಚಹಾವನ್ನು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದೇಹವು ದಿನವಿಡೀ ಶಕ್ತಿಯುತವಾಗಿರುತ್ತದೆ.

Published On - 2:57 pm, Tue, 5 April 22

ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Loading...
Unable to load recommendations.
Follow Us