
ಉಪೇಂದ್ರ ನಟನೆಯ ‘ಉಪ್ಪಿ 2’ ಚಿತ್ರದಲ್ಲಿ ಒಂದು ಸೈಡ್ ಕ್ಯಾರೆಕ್ಟರ್ನಲ್ಲಿ ಕಾಣಿಸಿಕೊಂಡಿದ್ದ ಸುರೇಶ್ ಕುಮಾರ್ ಹೆಸರಿನ ಕೋಲಾರ ಮೂಲದ ವ್ಯಕ್ತಿ ಅಮೆರಿಕದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ವಿಚಾರ ಅವರ ಕುಟುಂಬಕ್ಕೆ ಶಾಕ್ ತಂದಿದೆ.

ಸುರೇಶ್ ಕುಮಾರ್ಗೆ ಈಗ 42 ವರ್ಷ ಆಗಿತ್ತು. ಅವರು ಕೋಲಾರದಲ್ಲೇ ಹುಟ್ಟಿ ಬೆಳೆದಿದ್ದರು. ನಂತರ ಅವರು ಬೆಂಗಳೂರಿಗೆ ಬಂದರು. ಇಲ್ಲಿ ಕೆಲ ಕಾಲ ನೆಲೆಸಿದರು. ಈ ವೇಳೆ ಅವರು ಬಾಡಿ ಬಿಲ್ಡಿಂಗ್ ಆರಂಭಿಸಿದರು. ಅವರು ಉಪೇಂದ್ರ ಮೊದಲಾದ ಕಲಾವಿದರಿಗೆ ಫಿಟ್ನೆಸ್ ಟ್ರೇನಿಂಗ್ ಕೊಟ್ಟಿದ್ದರು.

ಸುರೇಶ್ ಕುಮಾರ್ ಅವರು ನಂತರ ಮಾಡೆಲಿಂಗ್ ಕಡೆ ಹೊರಳಿದರು. ಈ ವೇಳೆ ಕೆಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡರು. ಬಹುಭಾಷಾ ನಟಿ ಪ್ರಿಯಾಮಣಿ, ಕನ್ನಡದ ನಟಿ ಪ್ರೇಮಾ ಸೇರಿದಂತೆ ಅನೇಕರ ಜೊತೆ ಸುರೇಶ್ ಕುಮಾರ್ ಜಾಹೀರಾತುಗಳಲ್ಲಿ ಕಾಣಿಸಿಕೊಂಡರು.

Suresh Babu (3)

ದೆಹಲಿ ಮೂಲದ ಹುಡುಗಿಯನ್ನು ಸುರೇಶ್ ವಿವಾಹ ಆದರು. ಈ ದಂಪತಿಗೆ ಇಬ್ಬರು ಮಕ್ಕಳು. ಆರಂಭದಲ್ಲಿ ಲಂಡನ್ನಲ್ಲಿ ಇದ್ದ ಅವರು ನಂತರ ಅಮೆರಿಕಕ್ಕೆ ಶಿಫ್ಟ್ ಆದರು. ಅಮೆರಿಕಾದಲ್ಲಿ ಪಿಜಿಯೋತೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು.

ಆಗಸ್ಟ್ 1ಕ್ಕೆ ಭಾರತಕ್ಕೆ ಬಂದಿದ್ದ ಅವರು, ನಂತರ ಆಗಸ್ಟ್ 24ರಂದು ಅಮೆರಿಕ ತೆರಳಿದರು. ಅಮೆರಿಕ ತೆರಳಿದ ಕೆಲವೇ ದಿನಗಳಲ್ಲಿ ಈ ಅಪಘಾತ ಸಂಭವಿಸಿದೆ. ಇದು ಕುಟುಂಬದವರಿಗೆ ದುಃಖ ತಂದಿದೆ.