ಎಲೆಕ್ಟ್ರಿಕ್ ಬೈಕ್ ತಯಾರಿಕಾ ಸಂಸ್ಥೆ ಸ್ವಿಚ್ ಮೋಟೋಕಾರ್ಪ್ ಕೊನೆಗೂ ಭಾರತೀಯ ವಾಹನ ಮಾರುಕಟ್ಟೆಗೆ ಪ್ರವೇಶಿಸಿದೆ. ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ CSR 762 ಅನ್ನು ಬಿಡುಗಡೆ ಮಾಡಿದೆ. ಅಲ್ಲದೆ ಕಂಪನಿಯು 2022 ರಲ್ಲಿ ಸಿಎಸ್ಆರ್ 762 ಯೋಜನೆಯಲ್ಲಿ 100 ಕೋಟಿ ರೂ. ಹೂಡಿಕೆ ಮಾಡಲಿದೆ.
ಸ್ವಿಚ್ CSR 762 ಬೈಕ್ನಲ್ಲಿ 3.7 kW-hr ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ನೀಡಲಾಗಿದ್ದು, ಇದು 10 kW ಪವರ್ ಮತ್ತು 56 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅಲ್ಲದೆ ಈ ಬ್ಯಾಟರಿಯನ್ನು ಸಹ ಬದಲಾಯಿಸಬಹುದಾಗಿದೆ. ಹಾಗೆಯೇ ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ಕಂಬೈನ್ಡ್ ಚಾರ್ಜಿಂಗ್ ಸಿಸ್ಟಮ್ ಅಂದರೆ CCS ಬ್ಯಾಟರಿ ಚಾರ್ಜರ್ ಸಹಾಯದಿಂದ ಚಾರ್ಜ್ ಮಾಡಬಹುದು.
CSR 762 ಇ-ಬೈಕ್ನಲ್ಲಿ ಕಂಪನಿಯು 3 ರೈಡಿಂಗ್ ಮೋಡ್‌ಗಳನ್ನು ನೀಡಿದೆ. ಅವುಗಳೆಂದರೆ ಸ್ಪೋರ್ಟ್, ರಿವರ್ಸ್ ಮತ್ತು ಪಾರ್ಕಿಂಗ್. ಈ ಮೋಟಾರ್‌ಸೈಕಲ್‌ಗೆ ಪರ್ಮನೆಂಟ್ ಮ್ಯಾಗ್ನೆಟ್ ಸಿಂಕ್ರೊನಸ್ ಮೋಟರ್ ಅನ್ನು ನೀಡಲಾಗಿದೆ. ಜೊತೆಗೆ ಸೆಂಟ್ರಲ್ ಡ್ರೈವ್ ಸಿಸ್ಟಮ್‌ನೊಂದಿಗೆ ಶಕ್ತಿಯುತ 3 kW ಸಾಮರ್ಥ್ಯ ಹೊಂದಿದೆ. ಇದಲ್ಲದೇ 5 ಇಂಚಿನ TFT ಕಲರ್ ಡಿಸ್ಪ್ಲೇ ಜೊತೆಗೆ ಥರ್ಮೋಸಿಫೊನ್ ಕೂಲಿಂಗ್ ಸಿಸ್ಟಂ ನೀಡಲಾಗಿದೆ.
ಇನ್ನು CSR 762 ಬೈಕ್ ಅನ್ನು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ CSR 762 ಮಾಡಿದರೆ 110 ಕಿ.ಮೀ ವರೆಗೆ ಚಲಿಸಬಹುದು. ಇಲ್ಲಿ ಬ್ಯಾಟರಿ ಬದಲಿಸುವ ಅವಕಾಶ ಇರುವುದರಿಂದ ಎರಡು ಬ್ಯಾಟರಿಗಳೊಂದಿಗೆ ದೂರ ಪ್ರಯಾಣವನ್ನು ಕೂಡ ಮಾಡಬಹುದು. ಹಾಗೆಯೇ ಈ ಬೈಕ್ನ ಗರಿಷ್ಠ ವೇಗ ಗಂಟೆಗೆ 120 ಕಿ.ಮೀ.
ಅಂದಹಾಗೆ CSR 762 ಎಲೆಕ್ಟ್ರಿಕ್ ಬೈಕ್ನ ಎಕ್ಸ್ ಶೋ ರೂಂ ಬೆಲೆ 1.65 ಲಕ್ಷ ರೂ. ಇದಾಗ್ಯೂ ಈ ಬೈಕ್ ಮೇಲೆ 40 ಸಾವಿರ ರೂಪಾಯಿ ಸಬ್ಸಿಡಿಯೂ ಸಿಗಲಿದೆ ಎಂದು ಸ್ವಿಚ್ ಮೋಟೋಕಾರ್ಪ್ ಕಂಪೆನಿ ತಿಳಿಸಿದೆ.