Updated on: Jun 05, 2022 | 7:00 AM
ಟೋನರ್: ನೀವು ತೆಂಗಿನ ನೀರನ್ನು ಟೋನರ್ ಆಗಿ ಚರ್ಮದ ಆರೈಕೆಯ ಭಾಗವಾಗಿ ಮಾಡಬಹುದು. ಸ್ಪ್ರೇ ಬಾಟಲಿಯನ್ನು ತೆಗೆದುಕೊಂಡು ಅದರಲ್ಲಿ ತೆಂಗಿನ ನೀರನ್ನು ಸುರಿಯಿರಿ. ಇದಕ್ಕೆ ಸ್ವಲ್ಪ ರೋಸ್ ವಾಟರ್ ಕೂಡ ಸೇರಿಸಿ. ರಾತ್ರಿ ಮಲಗುವ ಮುನ್ನ ಈ ಟೋನರ್ನ್ನು ಮುಖಕ್ಕೆ ಸ್ಪ್ರೇ ಮಾಡಲು ಮರೆಯಬೇಡಿ.
ಮುಖ ತೊಳೆಯಿರಿ: ಮುಖ ತೊಳೆಯಲು ಸಾಮಾನ್ಯ ನೀರನ್ನು ಬಳಸುವಂತೆಯೇ ತೆಂಗಿನ ನೀರಿನಿಂದ ಕೂಡ ಮುಖ ತೊಳೆಯಬಹುದು. ಪಾತ್ರೆಯಲ್ಲಿ ತೆಂಗಿನ ನೀರನ್ನು ತೆಗೆದುಕೊಂಡು ಅದನ್ನು ಚರ್ಮದ ಮೇಲೆ ಸಿಂಪಡಿಸಿ ಮತ್ತು ಸ್ವಲ್ಪ ಸಮಯದ ನಂತರ ಸಾಮಾನ್ಯ ನೀರಿನಿಂದ ಮುಖವನ್ನು ತೊಳೆಯಿರಿ.
ಮೇಕಪ್ ತೆಗೆಯಿರಿ: ಹೆಚ್ಚಿನ ಜನರು ಮುಖದಿಂದ ಮೇಕಪ್ ತೆಗೆಯಲು ವೈಪ್‌ಗಳ ಸಹಾಯವನ್ನು ತೆಗೆದುಕೊಳ್ಳುತ್ತಾರೆ, ಆದರೆ ನೀವು ಅದನ್ನು ತೆಂಗಿನ ನೀರಿನಿಂದ ಕೂಡ ತೆಗೆದುಹಾಕಬಹುದು. ನೀವು ಅದನ್ನು ಹತ್ತಿಯ ತುಂಡಿನಲ್ಲಿ ನೆನೆಸಿ ಮುಖದ ಮೇಲೆ ಉಜ್ಜಬಹುದು. ಇದರಿಂದ ತ್ವಚೆಯೂ ಹೊಳೆಯುತ್ತದೆ.