Updated on: Feb 17, 2022 | 7:30 AM
‘ಕಾದಂಬರಿ’ ಧಾರಾವಾಹಿ ಮೂಲಕ ಮನೆ ಮಾತಾದವರು ನಟಿ ಶ್ವೇತಾ ಚೆಂಗಪ್ಪ. ಅದೇ ರೀತಿ ‘ಮಜಾ ಟಾಕೀಸ್’ ಶೋ ಕೂಡ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿತು. ನಿರೂಪಕಿ ಆಗಿಯೂ ಅವರು ಮಿಂಚಿದ್ದಾರೆ.
ಶ್ವೇತಾ ಚಂಗಪ್ಪ ಅವರು ಕಿರಣ್ ಜೊತೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಈ ಜೋಡಿಗೆ ಜಿಯಾನ್ ಅಯ್ಯಪ್ಪ ಎಂಬ ಮುದ್ದು ಮಗ ಇದ್ದಾನೆ. ಕುಟುಂಬದ ಫೋಟೋಗಳನ್ನು ಶ್ವೇತಾ ಆಗಾಗ ಹಂಚಿಕೊಳ್ಳುತ್ತಾರೆ.
ಮುದ್ದ ಮಗ ಜಿಯಾನ್ ಅಯ್ಯಪ್ಪ ಜೊತೆ ಶ್ವೇತಾ ಚೆಂಗಪ್ಪ ಅವರು ಅನೇಕ ಫೋಟೋಶೂಟ್ ಮಾಡಿಸಿದ್ದಾರೆ. ಆ ಫೋಟೋಗಳಿಗೆ ಫ್ಯಾನ್ಸ್ ಫಿದಾ ಆಗಿದ್ದು, ಭರಪೂರ ಲೈಕ್ಸ್ ನೀಡುತ್ತಿದ್ದಾರೆ. ಪುತ್ರನ ಬಗ್ಗೆ ಶ್ವೇತಾ ಅವರು ಆಗಾಗ ಅಪ್ಡೇಟ್ ನೀಡುತ್ತಾರೆ.
ಮಗ ಜಿಯಾನ್ ಅಯ್ಯಪ್ಪ ಹೆಸರಿನಲ್ಲೂ ಶ್ವೇತಾ ಚೆಂಗಪ್ಪ ಮತ್ತು ಕಿರಣ್ ದಂಪತಿ ಸೋಶಿಯಲ್ ಮೀಡಿಯಾ ಖಾತೆ ತೆರೆದಿದ್ದಾರೆ. ಜಿಯಾನ್ ಅಯ್ಯಪ್ಪ ಇನ್ಸ್ಟಾಗ್ರಾಮ್ ಖಾತೆಯನ್ನು 27 ಸಾವಿರಕ್ಕೂ ಅಧಿಕ ಮಂದಿ ಫಾಲೋ ಮಾಡುತ್ತಾರೆ. ಆ ಮೂಲಕ ಜಿಯಾನ್ ಫೇಮಸ್ ಆಗಿದ್ದಾನೆ.
ಕಿರುತೆರೆಯಲ್ಲಿ ಶ್ವೇತಾ ಚೆಂಗಪ್ಪ ಅವರಿಗೆ ಸಖತ್ ಬೇಡಿಕೆ ಇದೆ. ಅವರ ವೃತ್ತಿಜೀವನಕ್ಕೆ ಕುಟುಂಬದವರು ಬೆಂಬಲವಾಗಿ ನಿಂತಿದ್ದಾರೆ. ಮಗನ ಆರೈಕೆಯಲ್ಲಿ ಶ್ವೇತಾ ತೊಡಗಿಕೊಂಡು ವೃತ್ತಿಜೀವನ ಮತ್ತು ಕುಟುಂಬ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿದ್ದಾರೆ.