
2007ರಲ್ಲಿ ತೆರೆಕಂಡ ‘ತಾರೆ ಜಮೀನ್ ಪರ್’ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಿತ್ತು. ಆ ಚಿತ್ರದಲ್ಲಿ ಬಾಲನಟನಾಗಿ ಕಾಣಿಸಿಕೊಂಡು ಅಪಾರ ಮೆಚ್ಚುಗೆ ಗಳಿಸಿದ್ದು ದರ್ಶೀಲ್ ಸಫಾರಿ.

ನಂತರ ದರ್ಶೀಲ್ ‘ಬಮ್ ಬಮ್ ಬೋಲೆ’ ಚಿತ್ರದಲ್ಲಿ ಕಾಣಿಸಿಕೊಂಡರು.

2012ರಲ್ಲಿ ‘ಝಲಕ್ ದಿಖ್ಲಾ ಝಾ’ ಡಾನ್ಸಿಂಗ್ ಶೋನಲ್ಲಿ ಸ್ಪರ್ದಿಯಾಗಿ ದರ್ಶೀಲ್ ಕಾಣಿಸಿಕೊಂಡರು.

ನಂತರದಲ್ಲಿ ದರ್ಶೀಲ್ ಕಿರುತೆರೆಯಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ.

ಇತ್ತೀಚೆಗೆ ಅಂದರೆ 2020ರಲ್ಲಿ ದರ್ಶೀಲ್ ಮ್ಯೂಸಿಕ್ ವಿಡಿಯೋವೊಂದರಲ್ಲಿ ಕಾಣಿಸಿಕೊಂಡಿದ್ದರು.

ದರ್ಶೀಲ್ ಇಂದು 25ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಅವರ ಯಂಗ್ ಲುಕ್ಗೂ ಅಪಾರ ಅಭಿಮಾನಿಗಳಿದ್ದಾರೆ.