ಸಾಲು ಸಾಲು ಸಿನಿಮಾ, ಸೀರಿಸ್ ರಿಲೀಸ್ ಬಳಿಕ ಚಿಲ್ ಮೂಡ್ನಲ್ಲಿ ತಮನ್ನಾ
ತಮನ್ನಾ ಹಾಗೂ ವಿಜಯ್ ವರ್ಮಾ ಡೇಟಿಂಗ್ ಮಾಡುತ್ತಿರುವ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಇಬ್ಬರೂ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ಈಗ ಅವರ ಜೊತೆ ವಿಜಯ್ ಕೂಡ ಇದ್ದಾರೆ ಎನ್ನಲಾಗುತ್ತಿದೆ. ಈ ಫೋಟೋಗೆ ಅನೇಕರು ಕಮೆಂಟ್ ಮಾಡಿದ್ದಾರೆ.
1 / 7
ನಟಿ ತಮನ್ನಾ ಭಾಟಿಯಾ ಅವರು ಸಾಲು ಸಾಲು ಸಿನಿಮಾ ಹಾಗೂ ಸೀರಿಸ್ಗಳನ್ನು ಒಪ್ಪಿಕೊಂಡು ನಟಿಸಿದ್ದಾರೆ. ಒಂದರ ಹಿಂದೆ ಒಂದರಂತೆ ಇವುಗಳು ರಿಲೀಸ್ ಆಗಿವೆ. ಈಗ ತಮನ್ನಾ ಅವರು ಚಿಲ್ ಮೂಡ್ಗೆ ಹೋಗಿದ್ದಾರೆ.
2 / 7
ತಮನ್ನಾ ಅವರು ಸಿನಿಮಾ ಕೆಲಸಗಳಿಂದ ಒಂದು ಬ್ರೇಕ್ ತೆಗೆದುಕೊಂಡಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರು ಸಮುದ್ರ ತೀರದಲ್ಲಿ ಹಾಯಾಗಿ ಸಮಯ ಕಳೆಯುತ್ತಿದ್ದಾರೆ.
3 / 7
ತಮನ್ನಾ ಹಾಗೂ ವಿಜಯ್ ವರ್ಮಾ ಡೇಟಿಂಗ್ ಮಾಡುತ್ತಿರುವ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಇಬ್ಬರೂ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಅನೇಕ ಕಡೆಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ಈಗ ಅವರ ಜೊತೆ ವಿಜಯ್ ಕೂಡ ಇದ್ದಾರೆ ಎನ್ನಲಾಗುತ್ತಿದೆ.
4 / 7
ಈ ಫೋಟೋಗೆ ಅನೇಕರು ಕಮೆಂಟ್ ಮಾಡಿದ್ದಾರೆ. ‘ಫೋಟೋ ಕ್ರೆಡಿಟ್ ವಿಜಯ್ ವರ್ಮಾಗೆ ನೀಡಿ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇದಕ್ಕೆ ತಮನ್ನಾ ಅವರು ಉತ್ತರಿಸುವ ಗೋಜಿಗೆ ಹೋಗಿಲ್ಲ.
5 / 7
ತಮನ್ನಾ ಅವರಿಗೆ 2023 ವಿಶೇಷ ಎನಿಸಿಕೊಂಡಿದೆ. ಅವರ ನಟನೆಯ ‘ಲಸ್ಟ್ ಸ್ಟೋರಿಸ್ 2’ ಚಿತ್ರ ರಿಲೀಸ್ ಆಯಿತು. ‘ಭೋಲಾ ಶಂಕರ್’ ಚಿತ್ರದಲ್ಲೂ ಅವರು ನಟಿಸಿದರು. ಈ ಚಿತ್ರ ಸೋತಿತಾದರೂ ತಮನ್ನಾ ಅವರ ಪಾತ್ರ ಅನೇಕರಿಗೆ ಇಷ್ಟವಾಗಿದೆ.
6 / 7
ಇನ್ನು, ‘ಜೈಲರ್’ ಚಿತ್ರದಲ್ಲಿ ಅವರು ಮಾಡಿರೋ ಕಾಮ್ನಾ ಪಾತ್ರ ಭರ್ಜರಿ ಹಿಟ್ ಆಗಿದೆ. ಈ ಚಿತ್ರದ ‘ಕಾವಾಲಾ..’ ಹಾಡಿನ ಮೂಲಕ ತಮನ್ನಾ ಅವರು ಗಮನ ಸೆಳೆದಿದ್ದಾರೆ. ಈ ಹಾಡು ಕೋಟ್ಯಂತರ ಬಾರಿ ವೀಕ್ಷಣೆ ಕಂಡಿದೆ.
7 / 7
ವೆಬ್ ಸೀರಿಸ್ ಲೋಕದಲ್ಲೂ ತಮನ್ನಾ ಬ್ಯುಸಿ ಇದ್ದಾರೆ. ‘ಜೀ ಕರ್ದಾ’ ಹಾಗೂ ‘ಆಕ್ರಿ ಸಚ್’ ವೆಬ್ ಸೀರಿಸ್ಗಳು ಈ ವರ್ಷ ರಿಲೀಸ್ ಆದವು. ಈ ಸೀರಿಸ್ಗಳಲ್ಲಿ ತಮನ್ನಾ ನಿರ್ವಹಿಸಿರುವ ಪಾತ್ರ ಸಾಕಷ್ಟು ಗಮನ ಸೆಳೆಯುತ್ತಿದೆ.