
ನಟಿ ತಮನ್ನಾ ಭಾಟಿಯಾ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರ ನಟನೆಯ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗುತ್ತಿವೆ. ತಮನ್ನಾ ನಟನೆಯ ಎರಡು ಸಿನಿಮಾಗಳು ಒಂದೇ ದಿನ ರಿಲೀಸ್ ಆಗಿವೆ.

‘ಜೈಲರ್’ ಚಿತ್ರದಲ್ಲಿ ತಮನ್ನಾ ನಟಿಸಿದ್ದಾರೆ. ಅವರು ಮಾಡಿರುವ ಪಾತ್ರ ಗಮನ ಸೆಳೆದಿದೆ. ವಿಶೇಷ ಹಾಡಿಗೂ ಕೂಡ ಹೆಜ್ಜೆ ಹಾಕಿದ್ದಾರೆ. ಅವರ ಪಾತ್ರ ಗಮನ ಸೆಳೆದಿದೆ. ಆಗಸ್ಟ್ 10ರಂದು ಸಿನಿಮಾ ರಿಲೀಸ್ ಆಗಿದೆ.

ಅದೇ ರೀತಿ ತೆಲುಗಿನ ‘ಭೋಲಾ ಶಂಕರ್’ ಚಿತ್ರದಲ್ಲೂ ತಮನ್ನಾ ನಟಿಸಿದ್ದಾರೆ. ಚಿರಂಜೀವಿಗೆ ಜೊತೆಯಾಗಿ ತಮನ್ನಾ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗೆ ನೆಗೆಟಿವ್ ವಿಮರ್ಶೆ ಸಿಕ್ಕಿದೆ. ಆಗಸ್ಟ್ 11ರಂದು ಚಿತ್ರ ಬಿಡುಗಡೆ ಆಗಿದೆ.

ಈ ಕಾರಣದಿಂದ ತಮನ್ನಾ ಅವರಿಗೆ ಒಂದು ಗೆಲುವು ಹಾಗೂ ಒಂದು ಗೆಲುವು ಸಿಕ್ಕಂತೆ ಆಗಿದೆ. ಅದು ಒಂದೇ ವಾರದಲ್ಲಿ ಅನ್ನೋದು ವಿಶೇಷ.

ತಮನ್ನಾ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಇತ್ತೀಚೆಗೆ ಅವರ ನಟನೆಯ ‘ಲಸ್ಟ್ ಸ್ಟೋರಿಸ್ 2’ ಸಿನಿಮಾ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಸಖತ್ ಬೋಲ್ಡ್ ಪಾತ್ರ ಮಾಡಿದ್ದರು.

ತಮನ್ನಾ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ವಿಜಯ್ ವರ್ಮಾ ಜೊತೆಗಿನ ಪ್ರೀತಿ ವಿಚಾರಕ್ಕೂ ಅವರು ಸುದ್ದಿಯಲ್ಲಿದ್ದಾರೆ.

ತಮನ್ನಾ ಅವರು ವೆಬ್ ಸೀರಿಸ್ ಲೋಕದಲ್ಲೂ ಮಿಂಚುತ್ತಿದ್ದಾರೆ. ಭಿನ್ನ ಪಾತ್ರಗಳನ್ನು ಒಪ್ಪಿ ಅವರು ನಟಿಸುತ್ತಿದ್ದಾರೆ.