- Kannada News Photo gallery Tata Tiago EV Price Hiked by Up to Rs 20000 Introductory Prices End, check out all details
ಆಫರ್ ಕ್ಲೋಸ್: ಟಾಟಾ ಟಿಯಾಗೋ ಎಲೆಕ್ಟ್ರಿಕ್ ಇದೀಗ ಮತ್ತಷ್ಟು ದುಬಾರಿ!
ಇವಿ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್ ಕಂಪನಿಯು ಟಿಯಾಗೋ ಇವಿ ಕಾರು ಬಿಡುಗಡೆಯ ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿದೆ. ಹೊಸ ಇವಿ ಕಾರು ಬಿಡುಗಡೆಯ ಆರಂಭದಲ್ಲಿ ಆಕರ್ಷಕ ಆಫರ್ ನೀಡಿದ್ದ ಟಾಟಾ ಕಂಪನಿ ಭರ್ಜರಿ ಬೇಡಿಕೆ ಪಡೆದುಕೊಂಡಿದೆ. ಸೀಮಿತ ಅವಧಿಗೆ ನೀಡಿದ್ದ ಆಫರ್ ಇದೀಗ ಮುಕ್ತಾಯವಾಗಿದ್ದು, ಟಿಯಾಗೋ ಇವಿ ಕಾರು ಖರೀದಿ ಇನ್ಮುಂದೆ ಮತ್ತಷ್ಟು ದುಬಾರಿಯಾಗಿರಲಿದೆ.
Updated on:Feb 12, 2023 | 8:20 PM

ದುಬಾರಿ ಇಂಧನಗಳ ಪರಿಣಾಮ ಎಲೆಕ್ಟ್ರಿಕ್ ಕಾರು ಮಾರಾಟವು ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಇವಿ ಕಾರುಗಳ ಮಾರಾಟದಲ್ಲಿ ಟಾಟಾ ಮೋಟಾರ್ಸ್ ಮುಂಚೂಣಿದಲ್ಲಿದೆ. ವಿವಿಧ ಎಲೆಕ್ಟ್ರಿಕ್ ಕಾರುಗಳ ಮಾರಾಟದೊಂದಿಗೆ ಸದ್ಯ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ ಟಿಯಾಗೋ ಇವಿ ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಹೊಸ ಟಿಯಾಗೋ ಇವಿ ಕಾರು ಬಿಡುಗಡೆಯೊಂದಿಗೆ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿರುವ ಟಾಟಾ ಮೋಟಾರ್ಸ್ ಕಂಪನಿ ಕೆಲವೇ ದಿನಗಳಲ್ಲಿ ದಾಖಲೆ ಪ್ರಮಾಣದ ಬುಕಿಂಗ್ ಪಡೆದುಕೊಂಡಿದೆ. ಹೊಸ ಕಾರು ಬಿಡುಗಡೆಯಾದ ಕೆಲವೇ ನಾಲ್ಕೇ ತಿಂಗಳಿನಲ್ಲಿ 20 ಸಾವಿರಕ್ಕೂ ಹೆಚ್ಚು ಬುಕಿಂಗ್ ಪಡೆದುಕೊಂಡಿದ್ದು, ಹೊಸ ಕಾರು ಖರೀದಿನ ಮೇಲಿನ ಆಫರ್ ಅನ್ನ ಇದೀಗ ಬಂದ್ ಮಾಡಲಾಗಿದೆ.

ಹೊಸ ಕಾರು ಬಿಡುಗಡೆ ವೇಳೆ ಆರಂಭಿಕ ಬೆಲೆಯನ್ನ ಕೇವಲ 20 ಸಾವಿರ ಯುನಿಟ್ ಗಳಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ಹೀಗಾಗಿ ಕಂಪನಿಯು ಮೊದಲ 20 ಸಾವಿರ ಯುನಿಟ್ ಬುಕಿಂಗ್ ಮಾಡಿದ ಗ್ರಾಹಕರಿಗೆ ಮಾತ್ರ ಕಡಿಮೆ ಬೆಲೆಯ ಆಫರ್ ನೀಡಿದ್ದು, ಇನ್ಮುಂದೆ ಹೊಸ ಕಾರು ಖರೀದಿಸುವ ಗ್ರಾಹಕರಿಗೆ ದುಬಾರಿ ಬೆಲೆ ಅನ್ವಯಿಸಲಿದೆ.

ಹೊಸ ಟಿಯಾಗೋ ಇವಿ ಕಾರು ಬಿಡುಗಡೆಯ ಸಂದರ್ಭದಲ್ಲಿ ಟಾಟಾ ಕಂಪನಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.49 ಲಕ್ಷದಿಂದ ರೂ. 11.79 ಲಕ್ಷ ಬೆಲೆ ನಿಗದಿಪಡಿಸಿತ್ತು. ಇದೀಗ 20 ಸಾವಿರ ಯುನಿಟ್ ಬುಕಿಂಗ್ ದಾಖಲಾಗಿರುವುದರಿಂದ ಹೊಸ ಕಾರಿನ ಬೆಲೆಯಲ್ಲಿ ಹೆಚ್ಚಳ ಮಾಡಿದೆ.

ಹೊಸ ದರ ಪಟ್ಟಿಯಲ್ಲಿ ಟಿಯಾಗೋ ಇವಿ ಕಾರು ವಿವಿಧ ವೆರಿಯೆಂಟ್ ಗಳಿಗೆ ಅನುಗುಣವಾಗಿ ರೂ. 20 ಸಾವಿರದಷ್ಟು ದುಬಾರಿಯಾಗಿದೆ. ಬೆಲೆ ಹೆಚ್ಚಳ ನಂತರ ಹೊಸ ಕಾರು ದೆಹಲಿ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.69 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 11.99 ಲಕ್ಷ ಬೆಲೆ ಹೊಂದಿದೆ.

ಹೊಸ ಟಿಯಾಗೋ ಇವಿ ಕಾರು ಬಜೆಟ್ ಬೆಲೆಯೊಂದಿಗೆ ದಾಖಲೆ ಮಟ್ಟದ ಬೇಡಿಕೆ ಪಡೆದುಕೊಳ್ಳುತ್ತಿದೆ. ಹೊಸ ಕಾರಿನಲ್ಲಿ ವಿವಿಧ ವೆರಿಯೆಂಟ್ ಗಳಿಗೆ ಅನುಗುಣವಾಗಿ 19.2 ಕೆವಿಹೆಚ್ ಮತ್ತು 24 ಕೆವಿಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆ ಜೋಡಿಸಿದ್ದು, ಇದರಲ್ಲಿ ಆರಂಭಿಕ ಮಾದರಿಗಳು ಪ್ರತಿ ಚಾರ್ಜ್ ಗೆ 250 ಕಿ.ಮೀ ಮೈಲೇಜ್ ನೀಡಿದಲ್ಲಿ ಹೈ ಎಂಡ್ ವೆರಿಯೆಂಟ್ ಗಳು ಪ್ರತಿ ಚಾರ್ಜ್ ಗೆ 315 ಕಿ.ಮೀ ಮೈಲೇಜ್ ನೀಡುತ್ತದೆ.

ಇದರೊಂದಿಗೆ ಹೊಸ ಕಾರಿನಲ್ಲಿರುವ ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟಾರ್ ಗಳು ಧೂಳು ಮತ್ತು ತುಕ್ಕು ನಿರೋಧಕ ವೈಶಿಷ್ಟ್ಯತೆ ಹೊಂದಿವೆ. ಹೀಗಾಗಿ ಟಾಟಾ ಕಂಪನಿಯು ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟಾರ್ ಗಳ ಮೇಲೆ ಗರಿಷ್ಠ ವಾರಂಟಿ ನೀಡುತ್ತದೆ. ಹೊಸ ಕಾರಿನ ಬ್ಯಾಟರಿ ಮತ್ತು ಇವಿ ಮೋಟಾರ್ ಮೇಲೆ ಕಂಪನಿಯು 1.60 ಲಕ್ಷ ಕಿಲೋ ಮೀಟರ್ ಇಲ್ಲವೇ 8 ವರ್ಷಗಳ ತನಕ ವಾರಂಟಿ ನೀಡಲಿದ್ದು, ಹೊಸ ಕಾರಿನಲ್ಲಿ ಗರಿಷ್ಠ ಸುರಕ್ಷಾ ಸೌಲಭ್ಯಗಳನ್ನ ಸಹ ಜೋಡಣೆ ಮಾಡಲಾಗಿದೆ.
Published On - 8:20 pm, Sun, 12 February 23




