Tech Tips: ನಿಮ್ಮ ಸ್ಮಾರ್ಟ್ಫೋನ್ ಬ್ಯಾಟರಿಯನ್ನು ಇನ್ನಷ್ಟು ಪವರ್ಫುಲ್ ಮಾಡಬೇಕೆ?: ಇಲ್ಲಿದೆ ಟಿಪ್ಸ್
TV9 Web | Updated By: Vinay Bhat
Updated on:
Jul 14, 2022 | 12:39 PM
ಇಂದಿನ ದಿನಗಳಲ್ಲಿ ಬಿಡುಗಡೆ ಆಗುತ್ತಿರುವ ಸ್ಮಾರ್ಟ್ ಫೋನ್ ಗಳು ಸಾಮಾನ್ಯವಾಗಿ 4000mAh ನಿಂದ ಹಿಡಿದು 7000mAh ವರೆಗೆ ಇರುತ್ತದೆ. ಆದರೂ ಫೋನು ಬಳಸುವವರ ಗೋಳು ಒಂದೆ ಚಾರ್ಜ್ ಸಾಕಾಗಲ್ಲ ಎಂಬುದು. ಹಾಗಾದರೆ ನಿಮ್ಮ ಮೊಬೈಲ್ನ ಬ್ಯಾಟರಿ ಪವರ್ ಹೆಚ್ಚಿಸುವುದು ಹೇಗೆ?, ಇಲ್ಲಿದೆ ನೋಡಿ ಟ್ರಿಕ್ಸ್
1 / 5
ಇಂದಿನ ದಿನಗಳಲ್ಲಿ ಬಿಡುಗಡೆ ಆಗುತ್ತಿರುವ ಸ್ಮಾರ್ಟ್ ಫೋನ್ ಗಳ ಬ್ಯಾಟರಿ ಹೆಚ್ಚಾಗಿ 4000mAh ಯಿಂದ ಹಿಡಿದು 7000mAh ವರೆಗೆ ಇರುತ್ತದೆ. ಆದರೂ ಫೋನು ಬಳಸುವವರ ಗೋಳು ಒಂದೆ ಚಾರ್ಜ್ ಸಾಕಾಗಲ್ಲ ಎಂಬುದು. ಇದಕ್ಕೆ ಕಾರಣ ಬ್ಯಾಟರಿ ಶಕ್ತಿ ಕುಗ್ಗುವುದು. ನಿಮ್ಮ ಮೊಬೈಲ್ ದೀರ್ಘ ಕಾಲದವರೆಗೆ ಬಾಳಿಕೆ ಬರಬೇಕು ಅಂದರೆ ಹಲವಾರು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಅದು ಏನು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
2 / 5
ಫುಲ್ ಚಾರ್ಜ್ ಮಾಡಬೇಡಿ: ಕೆಲವರ ಮೊಬೈಲಲ್ಲಿ ಶೇಕಡಾ ನೂರರಷ್ಟು ಚಾರ್ಜ್ ಮಾಡಿದ್ರೆ ತೃಪ್ತಿ ಎನ್ನುವ ಭಾವನೆ ಇರುತ್ತದೆ. ಹೀಗಾಗಿಯೇ ಬ್ಯಾಟರಿ 100 ಆಗುವವರೆಗೂ ತೆಗೆಯುವುದೇ ಇಲ್ಲ. ಆದ್ರೆ ಇದು ಬ್ಯಾಟರಿ ಲೈಫ್ ದೃಷ್ಟಿಯಿಂದ ಉತ್ತಮವಲ್ಲಿ. ಫುಲ್ 100% ಚಾರ್ಜ್ ಮಾಡಲೇಬೇಡಿ. 90ರ ಗಡಿ ಮುಟ್ಟಿದ್ದರೇ ಸಾಕು. ಈ ಕ್ರಮ ಫೋನಿನ ಬ್ಯಾಟರಿ ಬಾಳಿಕೆಯನ್ನು ಹೆಚ್ಚಿಸುತ್ತವೆ.
3 / 5
ಕೆಲವರಿಗೆ ಮೊಬೈಲ್ ನಲ್ಲಿ ಚಾರ್ಜ್ ಸಂಪೂರ್ಣ ಖಾಲಿ ಆಗುವವರೆಗೂ ಚಾರ್ಜ್ ಹಾಕುವ ಅಭ್ಯಾಸವೇ ಇರುವುದಿಲ್ಲ. ನಿಮ್ಮ ಫೋನ್ ಉತ್ತಮ ಸ್ಥಿತಿಯಲ್ಲಿ ಕಾರ್ಯನಿರ್ವಹಣೆ ಮಾಡಬೇಕು ಎಂದರೆ ಫೋನ್ ಬ್ಯಾಟರಿ ಸಂಪೂರ್ಣ ಕಾಲಿ ಆಗಲು ಬಿಡಬೇಡಿ. ಹೀಗಾಗಿ ಫೋನ್ ಬ್ಯಾಟರಿ ಯಾವತ್ತು ಡ್ರೈ ಆಗಲು ಬಿಡಲೇಬೇಡಿ. ಶೇ.30% ಸನಿಹ ಬಂದಾಗ ಚಾರ್ಜ್ ಮಾಡುವುದು ಉತ್ತಮವಂತೆ.
4 / 5
ಬಹುತೇಕ ಬಳಕೆದಾರರಿಗೆ ರಾತ್ರಿಯಿಡಿ ಫೋನ್ ಚಾರ್ಜ್ ಹಾಕಿ ಮಲಗುವ ಅಭ್ಯಾಸ ಇರುತ್ತದೆ. ಆದರೆ ಖಂಡಿತಾ ಇದು ಉತ್ತಮ ಆಯ್ಕೆ ಅಲ್ಲವೇ ಅಲ್ಲ. ಆ ರೀತಿ ಓವರ್ ಚಾರ್ಜ್ ಮಾಡುವುದರಿಂದ ಫೋನ್ ಬ್ಯಾಟರಿ ಬಾಳಿಕೆ ಕುಗ್ಗುವುದರಲ್ಲಿ ಅನುಮಾನವೇ ಬೇಡ. ಹೀಗಾಗಿ ರಾತ್ರಿಯಿಡಿ ಚಾರ್ಜ್ ಮಾಡಬೇಡಿ.
5 / 5
ಅನೇಕರು ಮಾಡುವ ತಪ್ಪು ಕೆಲಸಗಳಲ್ಲಿ ಒಂದು ಅಂದರೆ ಫೋನ್ ಚಾರ್ಜ್ ಮಾಡುವಾಗ ಬಳಸುವುದು. ಫೋನ್ ಚಾರ್ಜ್ ಮಾಡುತ್ತಾ ಬಳಕೆಯ ಮಾಡಿರುವುದರಿಂದ ಅನೇಕ ಅಪಾಯಗಳು ಸಂಭವಿಸಿರುವ ಅರಿವಿದ್ದರೂ ಕೆಲವರು ಫೋನ್ ಚಾರ್ಜ್ ಮಾಡುತ್ತಲೇ ಫೋನ್ ಬಳಕೆ ಮಾಡುತ್ತಿರುತ್ತಾರೆ. ಈ ದುರಭ್ಯಾಸ ಇದ್ದರೆ ಈಗಲೇ ಬಿಟ್ಟು ಬಿಡಿ.
Published On - 12:39 pm, Thu, 14 July 22