- Kannada News Photo gallery Tech Tips Here is the Tricks to know Who Viewed WhatsApp Profile in last 24 hours
WhatsApp Tricks: ನಿಮ್ಮ ವಾಟ್ಸ್ಆ್ಯಪ್ ಡಿಪಿಯನ್ನು ಯಾರೆಲ್ಲ ನೋಡಿದ್ದಾರೆ ತಿಳಿಯಬೇಕೆ?: ಇಲ್ಲಿದೆ ಟ್ರಿಕ್
Tech Tips: ವಾಟ್ಸ್ಆ್ಯಪ್ ಡಿಪಿಗೆ ಪ್ರೈವೆಸಿಯಲ್ಲಿ ಓನ್ಲಿ ಫಾರ್ ಮೈ ಕಾಂಟ್ಯಾಕ್ಟ್ ಅಂತ ಕೊಟ್ಟರೂ ಬೇರೆ ಅವರ ಡಿಪಿ ನೋಡಲು ನಮಗೆ ಸಾಧ್ಯವಾಗುತ್ತದೆ. ಆದರೇ, ಇದಕ್ಕೆ ಥರ್ಡ್ ಪಾರ್ಟಿ ಅಪ್ಲಿಕೇಶನ್ ಒಂದು ಬೇಕಾಗುತ್ತದೆ.
Updated on: Jul 24, 2023 | 6:55 AM

ಇಂದಿನ ದಿನಗಳಲ್ಲಿ ವಾಟ್ಸ್ಆ್ಯಪ್ ನಮ್ಮ ದೈನಂದಿನ ಚಟುವಟಿಕೆಗಳಷ್ಟೇ ಮುಖ್ಯವಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಈ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಬಳಸುತ್ತಾರೆ. ಭಾರತದಲ್ಲೇ ಸುಮಾರು 550 ಮಿಲಿಯನ್ ಜನರು ಉಪಯೋಗಿಸುತ್ತಿದ್ದಾರೆ.

ವಾಟ್ಸ್ಆ್ಯಪ್ ಟ್ರಿಕ್ಸ್ಗಳಿಗೆಂದೆ ಇಂದು ಅದೆಷ್ಟೋ ಥರ್ಡ್ ಪಾರ್ಟಿ ಆ್ಯಪ್ಗಳು ಹುಟ್ಟುಕೊಂಡಿವೆ. ಇದರಲ್ಲಿ ನಾವು ಹಾಕಿದ ಡಿಪಿಯನ್ನು ಯಾರು ನೋಡಿದ್ದಾರೆ ಎಂದುಕೂಡ ತಿಳಿಯಬಹುದು. ಅದು ಹೇಗೆ, ಆ ಆ್ಯಪ್ ಯಾವುದು, ಅದನ್ನು ಹೇಗೆ ಡೌನ್ಲೋಡ್ ಮಾಡೋದು? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ವಾಟ್ಸ್ಆ್ಯಪ್ ಡಿಪಿಗೆ ಪ್ರೈವೆಸಿಯಲ್ಲಿ ಓನ್ಲಿ ಫಾರ್ ಮೈ ಕಾಂಟ್ಯಾಕ್ಟ್ ಅಂತ ಕೊಟ್ಟರೂ ಬೇರೆ ಅವರ ಡಿಪಿ ನೋಡಲು ನಮಗೆ ಸಾಧ್ಯವಾಗುತ್ತದೆ. ಆದರೇ, ಇದಕ್ಕೆ ಥರ್ಡ್ ಪಾರ್ಟಿ ಅಪ್ಲಿಕೇಶನ್ ಒಂದು ಬೇಕಾಗುತ್ತದೆ.

ಥರ್ಡ್ ಪಾರ್ಟಿ ಆ್ಯಪ್ ಮೂಲಕ ವಾಟ್ಸ್ಆ್ಯಪ್ನಲ್ಲಿ ನಿಮ್ಮ ಡಿಪಿಯನ್ನು ಯಾರು ನೋಡುತ್ತಾರೆ ಎಂಬುದನ್ನು ತಿಳಿಯಬಹುದು. ಅಚ್ಚರಿ ಎಂದರೆ ಈ ವಿಧಾನದಿಂದ ನಿಮಗೆ ಗೊತ್ತಿಲ್ಲದಂತೆ ನಿಮ್ಮ ಡಿಪಿ ನೋಡುವವರ ಹೆಸರು ಮತ್ತು ನಂಬರ್ ಕೂಡ ಪಡೆದುಕೊಳ್ಳಬಹುದಾಗಿದೆ.

ಇದಕ್ಕಾಗಿ ನೀವು ಮೊದಲು ಗೂಗಲ್ ಪ್ಲೇ ಸ್ಟೋರ್ನಿಂದ WhatsApp- Who Viewed Me ಅಥವಾ Whats Tracker ಎಂಬ ಥರ್ಡ್ ಪಾರ್ಟಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬೇಕಗುತ್ತದೆ. ಇದರೊಂದಿಗೆ, 1mobile market ಡೌನ್ಲೋಡ್ ಕೂಡ ಮಾಡಬೇಕಾಗುತ್ತದೆ. 1mobile market ಆ್ಯಪ್ ಇಲ್ಲದೆ WhatsApp- Who Viewed Me ಡೌನ್ಲೋಡ್ ಆಗುವುದಿಲ್ಲ ಎನ್ನುವುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು.

ಇದು ನಿಮಗೆ ಗೊತ್ತಿಲ್ಲದಂತೆ ಯಾರೆಲ್ಲಾ ನಿಮ್ಮ ವಾಟ್ಸ್ಆ್ಯಪ್ ಪ್ರೊಫೈಲ್ ಫೋಟೋವನ್ನು ನೋಡುತ್ತಿದ್ದಾರೆ ಎನ್ನುವ ಮಾಹಿತಿಯನ್ನು ನೀಡುತ್ತದೆ. ಈ ಅಪ್ಲಿಕೇಶನ್ ಮೂಲಕ ಕಳೆದ 24 ಗಂಟೆಗಳಲ್ಲಿ ನಿಮ್ಮ ಪ್ರೊಫೈಲ್ ಫೋಟೋವನ್ನು ಅಥವಾ ಡಿಪಿಯನ್ನು ಯಾರು ನೋಡುತ್ತಿದ್ದಾರೆ ಎನ್ನುವ ಲಿಸ್ಟ್ ಅನ್ನು ನಿಮಗೆ ನೀಡುತ್ತದೆ.

ಎಚ್ಚರ: ನೀವು ಯಾವುದೇ ಒಂದು ಥರ್ಡ್ ಪಾರ್ಟಿ ಆ್ಯಪ್ ಅನ್ನು ಇನ್ಸ್ಟಾಲ್ ಮಾಡುವ ಮುನ್ನ ಎಚ್ಚರಬಹಿಸಬೇಕು. ಯಾಕಂದ್ರೆ ಈ ಥರ್ಡ್ ಪಾರ್ಟಿ ಆ್ಯಪ್ಗಳು ನಿಮ್ಮ ಫೋನ್ಗೆ ಎಷ್ಟು ಸುರಕ್ಷಿತ ಎನ್ನುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇರುವುದಿಲ್ಲ.

ಈ ಥರ್ಡ್ ಪಾರ್ಟಿ ಆ್ಯಪ್ಗಳು ನಿಮ್ಮ ಸ್ಮಾರ್ಟ್ಫೋನ್ನಲ್ಲಿರುವ ಡೇಟಾವನ್ನು ತನ್ನ ವಶಕ್ಕೆ ಪಡೆಯಬಹುದು. ಹೀಗಾಗಿ ಈ ಥರ್ಡ್ ಪಾರ್ಟಿ ಆ್ಯಪ್ ಡೌನ್ಲೋಡ್ ಮಾಡುವ ಮುನ್ನ ಎಚ್ಚರವಹಿಸಿ. ನಂಬಿಕೆಗೆ ಅರ್ಹವಾದ ಆ್ಯಪ್ ಸ್ಟೋರ್ ಗಳಿಂದ ಮಾತ್ರ ಇದನ್ನ ಡೌನ್ಲೋಡ್ ಮಾಡಿ.



















