Tech Tips: ಬಿಸಿಲ ಬೇಗೆಗೆ ಬಾಂಬ್ನಂತೆ ಸಿಡಿಯುತ್ತೆ ಮೊಬೈಲ್: ನಿರ್ಲಕ್ಷಿಸದಿರಿ
Mobile Blast: ಕಾರನ್ನು ನಿಲ್ಲಿಸುವಾಗ ಮತ್ತು ಲಾಕ್ ಮಾಡುವಾಗ ಅನೇಕ ಜನರು ತಮ್ಮ ಸ್ಮಾರ್ಟ್‌ಫೋನ್ ಅನ್ನು ಕಾರಿನಲ್ಲಿ ಇಡುತ್ತಾರೆ. ಬೇಸಿಗೆಯಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗುತ್ತದೆ. ಇಂತಹ ಬಿಸಿ ವಾತಾವರಣದಲ್ಲಿ ಸೆಲ್ ಫೋನ್ ಬ್ಯಾಟರಿ ಹಾಳಾಗುವ ಸಾಧ್ಯತೆ ಇರುತ್ತದೆ.
1 / 5
ಭಾರತದಲ್ಲಿ ಬೇಸಿಗೆ ಬಿಸಿಲು ಶುರುವಾಗಿದೆ. ಈ ಬಿಸಿಲ ಬಿಸಿ ಸ್ಮಾರ್ಟ್ಫೋನ್ಗಳಿಗೂ ತಟ್ಟುತ್ತಿವೆ. ಮೊಬೈಲ್ಗಳು ಸಿಕ್ಕಾಪಟ್ಟೆ ಹೀಟ್ ಆಗುತ್ತಿದೆ. ಇದರಿಂದ ಮೊಬೈಲ್ ಹ್ಯಾಂಗ್ ಆಗುವುದು, ಸ್ವಿಚ್ ಆಫ್ ಆಗುವುದು ಕೊನೆಗೆ ಬ್ಲಾಸ್ಟ್ ಆಗುವಂತಹ ತೊಂದರೆಗಳು ಕೂಡ ಎದುರಾಗುತ್ತದೆ. ಈಗಿರುವ ಫಾಸ್ಟ್ ಚಾರ್ಜರ್ಗಳಿಂದ ಬೇಗನೆ ಬಿಸಿ ಆಗುವ ಮೊಬೈಲ್ಗಳು ಬಿಸಿಲಿನಿಂದ ಇನ್ನಷ್ಟು ಹೆಚ್ಚಾಗಿ ಹೀಟ್ ಆಗುತ್ತಿದೆ.
2 / 5
ಮೊಬೈಲ್ ಅತೀಯಾಗಿ ಬಿಸಿಯಾಗಲು ಅಥವಾ ಬ್ಲಾಸ್ಟ್ ಆಗಲು ಮುಖ್ಯ ಕಾರಣದಲ್ಲಿ ಚಾರ್ಜ್ ಆಗುತ್ತಿರುವಾಗಲೇ ಮೊಬೈಲ್ ಬಳಕೆ ಮಾಡುವುದು ಒಂದು ಕಾರಣ. ಚಾರ್ಜ್ಗೆ ಹಾಕಿ ಮೊಬೈಲ್ ಉಪಯೋಗಿಸಿದಾಗ RAM ಸೇರಿದಂತೆ ಪ್ರೊಸೆಸರ್ಗಳು ಎಲ್ಲವೂ ಕಾರ್ಯ ನಿರ್ವಹಿಸುತ್ತಲೇ ಇರುತ್ತದೆ. ಹೀಗಾಗಿ ಮೊಬೈಲ್ ಬೇಗನೇ ಬಿಸಿಯಾಗುತ್ತದೆ.
3 / 5
ಹಾಗೆಯೆ ಕಾರನ್ನು ನಿಲ್ಲಿಸುವಾಗ ಮತ್ತು ಲಾಕ್ ಮಾಡುವಾಗ ಅನೇಕ ಜನರು ತಮ್ಮ ಸ್ಮಾರ್ಟ್‌ಫೋನ್ ಅನ್ನು ಕಾರಿನಲ್ಲಿ ಇಡುತ್ತಾರೆ. ಬೇಸಿಗೆಯಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗುತ್ತದೆ. ಇಂತಹ ಬಿಸಿ ವಾತಾವರಣದಲ್ಲಿ ಸೆಲ್ ಫೋನ್ ಬ್ಯಾಟರಿ ಹಾಳಾಗುವ ಸಾಧ್ಯತೆ ಇರುತ್ತದೆ. ಕೆಲವುಬಾರಿ ತಡೆದುಕೊಳ್ಳುವ ಸಾಮರ್ಥ್ಯಕ್ಕಿಂತ ಹೆಚ್ಚು ಬಿಸಿ ಆದರೆ ಸ್ಮಾರ್ಟ್‌ಫೋನ್‌ಗಳು ಸ್ಪೋಟಗೊಳ್ಳಬಹುದು.
4 / 5
ಸ್ಮಾರ್ಟ್‌ಫೋನ್‌ಗಳು ಇತರೆ ವಸ್ತುವಿನಂತೆ ಸೂರ್ಯನ ಬೆಳಕನ್ನು ಹೀರಿಕೊಳ್ಳುವ ಪ್ರವೃತ್ತಿಯನ್ನು ಹೊಂದಿವೆ. ಸಾಧ್ಯವಾದಷ್ಟು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಸೂರ್ಯನ ಬೆಳಕಿಗೆ ಒಡ್ಡುವುದನ್ನು ತಪ್ಪಿಸಿ. ಸ್ಮಾರ್ಟ್‌ಫೋನ್ ಅನ್ನು ತಂಪಾದ, ಶುಷ್ಕ ಸ್ಥಳದಲ್ಲಿರಿಸಿ ಚಾರ್ಜ್ ಮಾಡಿ. ಅಂತೆಯೆ ನಿಮ್ಮ ಮೊಬೈಲ್ನೊಂದಿಗೆ ನೀಡಿರುವ ಚಾರ್ಜರ್ ನಿಂದಲೇ ಫೋನ್ ಅನ್ನು ಚಾರ್ಜ್ ಮಾಡಿರಿ.
5 / 5
ನಾವು ನಮ್ಮ ಫೋನಿನ ಬ್ಯಾಕ್ ಗ್ರೌಂಡ್ ರನ್ನಿಂಗ್ ಅಪ್ಲಿಕೇಶನ್ಗಳನ್ನು ತೆಗೆಯದೆ ಇದ್ದಾಗ, ಫೋನಿನ ವೇಗ ಕಡಿಮೆಯಗುವುದಲ್ಲದೆ ನಮ್ಮ ಮೊಬೈಲ್ ಬಿಸಿ ಆಗಬಹುದು. ಇದಕ್ಕಾಗಿ ಯಾವುದೇ ಅಪ್ಲಿಕೇಶನ್ ಬಳಸಿದ ಮೇಲೆ ಅದನ್ನು ಪೂರ್ಣವಾಗಿ ಕ್ಲೀನ್ ಮಾಡಿ, ಇಲ್ಲದಿದ್ದಲ್ಲಿ ಅದು ಸ್ವಯಂ ಚಾಲನೆಯಲ್ಲಿ ಇರುತ್ತದೆ.