Updated on:Feb 25, 2024 | 10:18 PM
ಟಿವಿ9 ನೆಟ್ವರ್ಕ್ ‘ವಾಟ್ ಇಂಡಿಯಾ ಥಿಂಕ್ ಟುಡೆ’ ಕಾರ್ಯಕ್ರಮದಲ್ಲಿ ನಟಿ ರವೀನಾ ಟಂಡನ್ ನಕ್ಷತ್ರ ಅವಾರ್ಡ್ಗೆ ಭಾಜನರಾದರು.
ಚಿತ್ರರಂಗದಲ್ಲಿ ರವೀನಾ ಟಂಡನ್ ಮಾಡಿರುವ ಸಾಧನೆ, ಸಲ್ಲಿಸಿರುವ ಸೇವೆಯನ್ನು ಗುರುತಿಸಿ ರವೀನಾ ಟಂಡನ್ ಅವರಿಗೆ ‘ನಕ್ಷತ್ರ ಅವಾರ್ಡ್’ ಪ್ರಶಸ್ತಿ ನೀಡಲಾಗಿದೆ.
ಪ್ರಶಸ್ತಿ ಸ್ವೀಕರಿಸಿದ ಬಳಿಕ ರವೀನಾ ಟಂಡನ್ ‘ವಾಟ್ ಇಂಡಿಯಾ ಥಿಂಕ್ ಟುಡೆ’ ಚರ್ಚೆಯಲ್ಲಿ ಭಾಗಿಯಾಗಿ ಚಿತ್ರರಂಗದ ಬಗ್ಗೆ ತಮ್ಮ ಅನುಭವ ಜನ್ಯ ಅಭಿಪ್ರಾಯಗಳನ್ನು ಹಂಚಿಕೊಂಡರು.
ತಾವು ನಟನೆ ಪ್ರಾರಂಭ ಮಾಡಿದಾಗ ಚಿತ್ರರಂಗದಲ್ಲಿ ಎಂಥಹಾ ಪರಿಸ್ಥಿತಿಗಳಿದ್ದುವೆಂದು, ಆಗ ಚಿತ್ರರಂಗದಲ್ಲಿ ಮಹಿಳೆಯರ ಪರಿಸ್ಥಿತಿ, ಸಿನಿಮಾಗಳ ವಸ್ತುವಿನಲ್ಲಿ ಮಹಿಳೆಯರ ಪರಿಸ್ಥಿತಿ ಹೇಗಿತ್ತೆಂದು ವಿವರಿಸಿದರು.
ರವೀನಾ ಟಂಡನ್ ತಾವು ಬೆಳೆದ ರೀತಿ, ಕುಟುಂಬದ ಹಿನ್ನೆಲೆಯ ಬಗ್ಗೆಯೂ ಮಾತನಾಡಿದರು. ತಮ್ಮ ತಂದೆಯವರು ತಮ್ಮನ್ನು ಮಗನಂತೆ ಬೆಳೆಸಿದ್ದಾಗಿ ಹೆಮ್ಮೆಯಿಂದ ಹೇಳಿಕೊಂಡರು.
ಚಿತ್ರರಂಗದಲ್ಲಿ ನಟಿಯರೆಲ್ಲರೂ ಒಂದೇ ಮಾದರಿಯ ಸಿನಿಮಾಗಳನ್ನು ಮಾಡುತ್ತಿದ್ದಾಗ ತಾವು ಭಿನ್ನ ಹಾದಿ ಹಿಡಿದು ಕಲಾತ್ಮಕ ಸಿನಿಮಾಗಳ ಕಡೆಗೆ ವಾಲಿದ ಬಗೆ ಹೇಗೆಂದು ಮಾತನಾಡಿದರು.
ಒಟಿಟಿ, ಇಂಟರ್ನೆಟ್ ಯುಗದ ಪರಿಣಾಮದಿಂದ ಈಗ ಚಿತ್ರರಂಗ ಬದಲಾಗಿರುವ ರೀತಿಯ ಬಗ್ಗೆ ಮಾತನಾಡಿ, ‘ನಟಿಯರು ಸಹ ಇಂದು ಸಿನಿಮಾದ ‘ನಾಯಕ’ರಾಗಬಹುದು ಎಂದರು.
Published On - 7:38 pm, Sun, 25 February 24