- Kannada News Photo gallery Tech Tips How to prevent virus attack on smartphone?: Here is the information
Tech Tips: ಸ್ಮಾರ್ಟ್ಫೋನ್ಗೆ ವೈರಸ್ ಅಟ್ಯಾಕ್ ಆಗದಂತೆ ಎಚ್ಚರ ವಹಿಸುವುದು ಹೇಗೆ?: ಇಲ್ಲಿದೆ ಮಾಹಿತಿ
Virus Attack: ಕೆಲವು ಬಾರಿ ನಮ್ಮದೇ ಆದ ಕೆಲವು ತಪ್ಪುಗಳಿಂದಾಗಿ ತೊಂದರೆ ಉಂಟಾಗುತ್ತದೆ. ಇದರಲ್ಲಿ ವೈರಸ್ ಅಟ್ಯಾಕ್ ಕೂಡ ಒಂದು. ನಾವು ಮಾಡುವ ಕೆಲವು ಸಣ್ಣ ತಪ್ಪುಗಳಿಂದ ನಮ್ಮ ಸ್ಮಾರ್ಟ್ಫೋನ್ಗಳಿಗೆ ವೈರಸ್ ಪ್ರವೇಶಿಸುತ್ತವೆ. ಇದು ಯಾವಯಾವ ರೀತಿಯಲ್ಲಿ ಮೊಬೈಲ್ ಅನ್ನು ಪ್ರವೇಶಿಸಬಹುದು ಎಂದು ನೀವು ಯೋಚಿಸಿದ್ದೀರಾ?.
Updated on: Feb 01, 2024 | 6:55 AM

ನಾವು ಮಾಡುವ ಕೆಲವು ಸಣ್ಣ ತಪ್ಪುಗಳಿಂದ ನಮ್ಮ ಸ್ಮಾರ್ಟ್ಫೋನ್ಗಳಿಗೆ ವೈರಸ್ ಪ್ರವೇಶಿಸುತ್ತವೆ. ನಿಮ್ಮ ಮೊಬೈಲ್‌ನಲ್ಲಿ ವೈರಸ್ ಇದ್ದರೆ, ನೀವು ಆ್ಯಂಟಿ ವೈರಸ್ ಸಹಾಯದಿಂದ ಆ ವೈರಸ್ ಅನ್ನು ತೆಗೆದುಹಾಕಬಹುದು. ಆದರೆ ಅದಕ್ಕೂ ಮುನ್ನ ಈ ಕೆಳಗೆ ತಿಳಿಸಲಾದ ಐದು ತಪ್ಪುಗಳಿಂದ ದೂರವಿದ್ದರೆ ನಿಮ್ಮ ಫೋನ್ ಅನ್ನು ವೈರಸ್‌ಗಳಿಂದ ಕಾಪಾಡಿಕೊಳ್ಳಬಹುದು.

ಹೆಚ್ಚಿನವರು ಕೆಲವೊಮ್ಮೆ ಅಪರಿಚಿತ ಲಿಂಕ್ ಅನ್ನು ಕ್ಲಿಕ್ ಮಾಡುತ್ತಾರೆ. ಈ ತಪ್ಪು ದೊಡ್ಡ ತೊಂದರೆಗೆ ಕಾರಣವಾಗಬಹುದು. ಇಂತಹ ಕೆಲವು ಲಿಂಕ್ ಅಪಾಯಕಾರಿಯಾಗಿರುತ್ತದೆ. ಈ ಲಿಂಕ್‌ಗಳು ನಿಮ್ಮ ಸ್ಮಾರ್ಟ್ಫೋನ್ಗಳ ಒಳಗೆ ವೈರಸ್‌ಗಳನ್ನು ಸ್ಥಾಪಿಸಬಹುದು. ಆದ್ದರಿಂದ ಮುಂದಿನ ಬಾರಿ ತಪ್ಪಿಯೂ ಅಪರಿಚಿತ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ.

ಅಂತೆಯೆ ನೀವು ಯಾವುದೇ ಅಪರಿಚಿತ ಇಮೇಲ್, ಮೆಸೇಜ್ ಸ್ವೀಕರಿಸಿದರೆ ಅಥವಾ ಯಾವುದೇ ವ್ಯಕ್ತಿಯು ವಾಟ್ಸ್ಆ್ಯಪ್ನಲ್ಲಿ ಲಿಂಕ್ ಅನ್ನು ಹಂಚಿಕೊಂಡರೆ, ಇದೇನು ಎಂದು ನೋಡುವ ಕುತೂಹಲದಲ್ಲಿ ಆ ಲಿಂಕ್ ಮೇಲೆ ಕ್ಲಿಕ್ ಮಾಡಿ ತೆರೆಯದಿರಿ. ಈಗೀಗ ಈರೀತಿಯ ಫೇಕ್ ಲಿಂಕ್‌ಗಳ ಹಾವಳಿ ಹೆಚ್ಚಾಗಿದೆ.

ಯಾವುದೇ ಅನುಮಾನಾಸ್ಪದ ವೆಬ್ಸೈಟ್ಗೆ ಭೇಟಿ ನೀಡಬೇಡಿ. ಹಾಗೆ ಮಾಡುವುದರಿಂದ ನಿಮ್ಮ ಫೋನಿಗೆ ವೈರಸ್ ಅಟ್ಯಾಕ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಅಂತಹ ಸೈಟ್‌ಗೆ ಭೇಟಿ ನೀಡಿದ ನಂತರ, ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡುವುದರಿಂದ ನಿಮ್ಮ ಮೊಬೈಲ್ಗೆ ವೈರಸ್ ಬರಬಹುದು.

ಆಂಡ್ರಾಯ್ಡ್ ಸ್ಮಾರ್ಟ್ಫೋನ್ನಲ್ಲಿ ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಐಫೋನ್ನಲ್ಲಿ ಆ್ಯಪ್ ಸ್ಟೋರ್ ಇದೆ. ಇವುಗಳಲ್ಲಿ ಕೆಲವು ಫೇಕ್ ಆ್ಯಪ್ಗಳು ಇರುತ್ತವೆ. ನೀವು ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಷನ್ ಅನ್ನು ಇನ್ಸ್ಟಾಲ್ ಮಾಡುವ ಮೊದಲು ಎರಡು ಬಾರಿ ಪರಿಶೀಲಿಸಿ. ಆ ಆ್ಯಪ್ನ ಹಿನ್ನಲೆ ಬಗ್ಗೆ ತಿಳಿದುಕೊಂಡು ಮುಂದುವರೆಯಿರಿ.

ಇಂದು ಹೋಟೆಲ್ ಅಥವಾ ರೆಸ್ಟೋರೆಂಟ್ ಸೇರಿದಂತೆ ಅನೇಕ ಕಡೆಗಳಲ್ಲಿ ಉಚಿತ ವೈ-ಫೈ ಲಭ್ಯವಿರುತ್ತದೆ. ಹಾಗಂತ ಇದನ್ನು ಬಳಸಿದರೆ ನಿಮಗೆ ದುಬಾರಿಯಾಗಬಹುದು. ನಿಮ್ಮ ಸ್ಮಾರ್ಟ್ಫೋನ್ ಉಚಿತ ವೈ-ಫೈಗೆ ಸಂಪರ್ಕಿಸಿದ ತಕ್ಷಣ, ವೈರಸ್‌ಗಳು ಪ್ರವೇಶಿಸುವ ಅಪಾಯವು ಹೆಚ್ಚಿರುತ್ತದೆ. ಇವುಗಳ ಬಗ್ಗೆ ಎಚ್ಚರ ವಹಿಸಿ.









