ಕೀರ್ತಿ ಸುರೇಶ್ ಮದುವೆಯಲ್ಲಿ ದಳಪತಿ ವಿಜಯ್; ಅಪರೂಪದ ಫೋಟೋ ಹಂಚಿಕೊಂಡ ನಟಿ
ಕೀರ್ತಿ ಸುರೇಶ್ ಹಾಗೂ ಆ್ಯಂಟೋನಿ ವಿವಾಹಕ್ಕೆ ದಳಪತಿ ವಿಜಯ್ ಕೂಡ ಆಗಮಿಸಿದ್ದರು. ವಿವಾಹಕ್ಕೆ ಬಂದ ಅವರು ನವ ದಂಪತಿಗೆ ಶುಭ ಹಾರೈಸಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ದಳಪತಿ ವಿಜಯ್ ಹಾಗೂ ಕೀರ್ತಿ ಮಧ್ಯೆ ಒಳ್ಳೆಯ ಗೆಳೆತನ ಇದೆ.
1 / 5
ಕೀರ್ತಿ ಸುರೇಶ್ ಅವರು ಇತ್ತೀಚೆಗೆ ವಿವಾಹ ಆಗಿದ್ದಾರೆ. ತಮ್ಮ ಬಾಲ್ಯದ ಗೆಳೆಯ ಆ್ಯಂಟೋನಿ ಜೊತೆ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ದಂಪತಿಯ ಮದುವೆಗೆ ವಿಶೇಷ ವ್ಯಕ್ತಿಯೊಬ್ಬರು ಬಂದಿದ್ದರು.
2 / 5
ಕೀರ್ತಿ ಸುರೇಶ್ ಹಾಗೂ ಆ್ಯಂಟೋನಿ ವಿವಾಹಕ್ಕೆ ದಳಪತಿ ವಿಜಯ್ ಕೂಡ ಆಗಮಿಸಿದ್ದರು. ವಿವಾಹಕ್ಕೆ ಬಂದ ಅವರು ನವ ದಂಪತಿಗೆ ಶುಭ ಹಾರೈಸಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
3 / 5
ದಳಪತಿ ವಿಜಯ್ ಹಾಗೂ ಕೀರ್ತಿ ಮಧ್ಯೆ ಒಳ್ಳೆಯ ಗೆಳೆತನ ಇದೆ. ಈ ಮೊದಲು ರಿಲೀಸ್ ಆದ ‘ಬೈರವ’ ಹಾಗೂ ‘ಸರ್ಕಾರ್’ ಸಿನಿಮಾಗಳಲ್ಲಿ ಇಬ್ಬರೂ ಒಟ್ಟಾಗಿ ತೆರೆ ಹಂಚಿಕೊಂಡಿದ್ದರು. ಈ ಕಾರಣಕ್ಕೆ ಇಬ್ಬರ ಮಧ್ಯೆ ಒಳ್ಳೆಯ ಬಾಂಡಿಂಗ್ ಇದೆ.
4 / 5
ಕೀರ್ತಿ ಸುರೇಶ್ ಅವರು ಹಿಂದೂ ಹಾಗೂ ಕ್ರೈಸ್ತ ಸಮುದಾಯದ ಪ್ರಕಾರ ಮದುವೆ ಆಗಿದ್ದಾರೆ. ಆ್ಯಂಟೋನಿ ಅವರು ಕ್ರೈಸ್ತ ಸಮುದಾಯಕ್ಕೆ ಸೇರಿದವರು. ಈ ಕಾರಣಕ್ಕೆ ಎರಡೂ ಧರ್ಮದ ಪ್ರಕಾರ ವಿವಾಹ ನಡೆದಿದೆ ಎನ್ನಲಾಗಿದೆ.
5 / 5
ಕೀರ್ತಿ ಸುರೇಶ್ ಹಾಗೂ ಆ್ಯಂಟೋನಿ ಇಬ್ಬರೂ ಬಾಲ್ಯದಿಂದ ಗೆಳೆಯರು. ಇವರ ಮಧ್ಯೆ ಇರುವ ಗೆಳೆತನ ಪ್ರೀತಿ ಆಗಿ ಬದಲಾಯಿತು. ಈಗ ಇಬ್ಬರೂ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಎಲ್ಲರೂ ಶುಭ ಹಾರೈಸಿದ್ದಾರೆ.
Published On - 8:24 am, Thu, 19 December 24