
ಬಾಹ್ಯಾಕಾಶ ಜಗತ್ತಿಗೆ ಇಂದು ಅತ್ಯಂತ ವಿಶೇಷವಾದ ದಿನ. ಭೂಮಿಯು ಬಾಹ್ಯಾಕಾಶದಿಂದ ಹೇಗಿದೆ ಎಂದು ಜನರು ಮೊದಲು ನೋಡಿದ್ದು ಆಗಸ್ಟ್ 23, 1966 ರಂದು. ನಾಸಾ ಬಾಹ್ಯಾಕಾಶ ನೌಕೆ ಚಂದ್ರನ ಮೇಲ್ಮೈಯಿಂದ ಭೂಮಿಯನ್ನು ಅಂದು ಮೊದಲ ಬಾರಿಗೆ ಚಿತ್ರಿಸಿತು.

ಈ ಚಿತ್ರವು ಚಂದ್ರನ ಆರ್ಬಿಟರ್ 1 ಮೂಲಕ ಭೂಮಿಯನ್ನು ತಲುಪಿತು. ಸ್ಪ್ಯಾನಿಷ್ ರಾಜಧಾನಿ ಮ್ಯಾಡ್ರಿಡ್ ಬಳಿಯ ರೊಬ್ಲೆಡೊ ಡಿ ಚವೇಲಾದಲ್ಲಿ ನಿರ್ಮಿಸಲಾದ ನಾಸಾ ಟ್ರ್ಯಾಕಿಂಗ್ ಸ್ಟೇಷನ್ ಈ ಫೋಟೋವನ್ನು ಜಗತ್ತಿಗೆ ನೀಡಿತು.

ಆ ಸಮಯದಲ್ಲಿ ಯುಎಸ್ ಬಾಹ್ಯಾಕಾಶ ಸಂಸ್ಥೆ ಚಂದ್ರನ ಮೇಲೆ ಇಳಿಯಲು ಯೋಜಿಸಿತ್ತು. ಆದರೆ, ಚಂದ್ರನ ಮೇಲ್ಮೈಯಲ್ಲಿ ಇಳಿಯಲು ಉತ್ತಮ ಸ್ಥಳ ಇನ್ನೂ ಪತ್ತೆಯಾಗಿರಲಿಲ್ಲ. ಆದಾಗ್ಯೂ, ಇದಕ್ಕಾಗಿ ಛಾಯಾಚಿತ್ರಗಳು ಅಗತ್ಯವಿದ್ದರಿಂದ ನಾಸಾ ಅನೇಕ ಹೈಟೆಕ್ ಬಾಹ್ಯಾಕಾಶ ನೌಕೆಗಳನ್ನು ಕಳುಹಿಸಿತು.

ಭೂಮಿಯನ್ನು ಚಿತ್ರೀಕರಿಸುವ ಪ್ರಯತ್ನ 1946 ರಲ್ಲಿ ನಡೆದಿತ್ತು. ಆದರೆ ಉಪಗ್ರಹ ತೆಗೆದ ಆ ಚಿತ್ರಕ್ಕೆ ಹೆಚ್ಚಿನ ಸ್ಪಷ್ಟತೆ ಇರಲಿಲ್ಲ. ಎರಡು ದಶಕಗಳ ನಂತರ ಅಂದರೆ 1966 ರಲ್ಲಿ, ಭೂಮಿಯ ಚಿತ್ರ ಲಭ್ಯವಾಯ್ತು. ಹಾಗಾಗಿ ಬಾಹ್ಯಾಕಾಶದಿಂದ ತೆಗೆದ ಭೂಮಿಯ ಚಿತ್ರವನ್ನು ಜಗತ್ತು ನೋಡಿದ್ದು ಅದೇ ಮೊದಲು.

ಭೂಮಿ ಗೋಳಾಕಾರವಾಗಿಲ್ಲ ಎಂದು ವಾದಿಸುತ್ತಿದ್ದವರಿಗೆ ಈ ಚಿತ್ರ ಅತ್ಯುತ್ತಮ ಉತ್ತರದಂತೆಯೇ ಇದೆ.

ನಂತರದ ವರ್ಷಗಳಲ್ಲಿ ಈ ವಿಧಾನವನ್ನು ಬಳಸಿಕೊಂಡು ನೂರಾರು ಫೋಟೋಗಳನ್ನು ತೆಗೆಯಲಾಗಿದೆ. ಆದರೆ 1970 ರ ದಶಕದಲ್ಲಿ ಬಂದ ಈ ಚಿತ್ರವು ಇಂದಿಗೂ ಅತ್ಯುತ್ತಮ ಚಿತ್ರವಾಗಿದೆ. ಇದನ್ನು 1972 ರಲ್ಲಿ 'ದಿ ಬ್ಲೂ ಮಾರ್ಬಲ್' ಎಂದು ಕರೆಯಲ್ಪಡುವ ಅಪೊಲೊ 17 ಮಿಷನ್‌ನ ಸಿಬ್ಬಂದಿ ಚಿತ್ರೀಕರಿಸಿದರು.