Whitening Teeth Tips: ಮುತ್ತಿನಂತಹ ಬಿಳಿ ಹಲ್ಲುಗಳಿಗೆ ನೈಸರ್ಗಿಕ ವಿಧಾನ: ಇಲ್ಲಿದೆ ಮಾಹಿತಿ
ತಮ್ಮ ಹಳದಿ ಹಲ್ಲುಗಳನ್ನು ಬಿಳುಪುಗೊಳಿಸಲು ಸಾವಿರಾರು ಹಣ ಖರ್ಚು ಮಾಡುತ್ತಾರೆ. ಆದರೆ ಅಡುಗೆಮನೆಯ ಈ ಪದಾರ್ಥಗಳು ಹಲ್ಲುಗಳನ್ನು ಶುಭ್ರ ಮುತ್ತುಗಳಂತೆ ಹೊಳೆಯುವಂತೆ ಮಾಡುತ್ತವೆ ಎಂದರೆ ನೀವು ನಂಬಲೇಬೇಕು.
1 / 6
ಹಳದಿ ಹಲ್ಲು ಎಲ್ಲರ ಎದುರು ಸಾಕಷ್ಟು ಮುಜುಗರ ತರಬಲ್ಲದ್ದು. ಮಿತ್ರರೊಡನೆ,
ಬಂಧುಬಳಗದವರೊಂದಿಗೆ ಮಾತನಾಡಿವಾಗ ಮುಜುಗರ ಉಂಟಾಗಬಹುದು. ಅನೇಕರು
ತಮ್ಮ ಹಳದಿ ಹಲ್ಲುಗಳನ್ನು ಬಿಳುಪುಗೊಳಿಸಲು ಸಾವಿರಾರು ಹಣ
ಖರ್ಚು ಮಾಡುತ್ತಾರೆ. ಆದರೆ ಅಡುಗೆಮನೆಯ ಈ ಪದಾರ್ಥಗಳು ಹಲ್ಲುಗಳನ್ನು
ಶುಭ್ರ ಮುತ್ತುಗಳಂತೆ ಹೊಳೆಯುವಂತೆ ಮಾಡುತ್ತವೆ ಎಂದರೆ ನೀವು ನಂಬಲೇಬೇಕು.
2 / 6
ಬಾಳೆಹಣ್ಣಿನ ಸಿಪ್ಪೆ: ಸಾಮಾನ್ಯವಾಗಿ ನಾವುಗಳು ಬಾಳೆಹಣ್ಣನ್ನು ತಿಂದು, ಅದರ ಸಿಪ್ಪೆಯನ್ನು
ಬಿಸಾಡುತ್ತೇವೆ. ಆದರೆ ಈ ಸಿಪ್ಪೆಯೇ ನಮ್ಮ ಹಳದಿ ಹಲ್ಲುಗಳಿಗೆ ಬಿಳಿ ಹೊಳಪು ನೀಡುವುದು.
ಬಾಳೆಹಣ್ಣಿನ ಸಿಪ್ಪೆಯಿಂದ ಹಲ್ಲು ಉಜ್ಜುವುದರಿಂದ
ಹಲ್ಲುಗಳ ಹಳದಿ ಬಣ್ಣ ಮಾಯವಾಗಿ ಹೊಳೆಯುತ್ತದೆ.
ಹಲ್ಲುಗಳು ಮತ್ತು ಒಸಡುಗಳು ಬಲಗೊಳ್ಳುತ್ತದೆ. ಮತ್ತು ದುರ್ವಾಸನೆ ತಡೆಯುತ್ತದೆ.
3 / 6
ನಿಂಬೆ: ಹಲ್ಲುಗಳ ಮೇಲೆ ರೂಪುಗೊಂಡ ಹಳದಿ ಪದರನ್ನು ತೆಗೆದುಹಾಕಲು ನಿಂಬೆ ಸಹಕಾರಿಯಾಗಿದೆ.
ನೀರಿನಲ್ಲಿ ನಿಂಬೆರಸ ಹಾಕಿ ಬಾಯಿ ಮುಕ್ಕಳಿಸುವುದರಿಂದ ಹಲ್ಲಿನ ಹಳದಿ ಬಣ್ಣ
ದೂರವಾಗುತ್ತದೆ.
4 / 6
ಎಣ್ಣೆ: ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಹಲ್ಲುಗಳು ಹೊಳೆಯಲು
ಬಳಸಬಹುದು. ಬಾಯಿಗೆ ಸ್ವಲ್ಪ ಎಣ್ಣೆ ಹಾಕಿ ಹತ್ತು ನಿಮಿಷಗಳ ಕಾಲ ಗಾರ್ಗಲ್ ಮಾಡಿ.
ಹೀಗೆ ಮಾಡುವುದರಿಂದ ಹಲ್ಲುಗಳು ಬಿಳಿಯಾಗುತ್ತವೆ.
5 / 6
ಉಪ್ಪು: ಉಪ್ಪು ಕೂಡ ಹಲ್ಲುಗಳನ್ನು ಬಿಳುಪುಗೊಳಿಸುತ್ತದೆ.
ಉಪ್ಪಿನೊಂದಿಗೆ ಹಲ್ಲುಜ್ಜುವುದರಿಂದ ಅವು ಬಿಳಿಯಾಗುತ್ತವೆ ಜೊತೆಗೆ ಬಲಶಾಲಿಯಾಗುತ್ತವೆ.
6 / 6
ಬೇಕಿಂಗ್ ಸೋಡಾ: ಅಡುಗೆಗೆ ಬಳಸುವ ಬೇಕಿಂಗ್ ಸೋಡಾ ಹಲ್ಲುಗಳ ಹಳದಿ
ಬಣ್ಣವನ್ನು ಹೋಗಲಾಡಿಸುತ್ತದೆ. ವಾರಕ್ಕೊಮ್ಮೆ ಅಥವಾ ಎರಡು ಬಾರಿ
ಪೇಸ್ಟ್ನೊಂದಿಗೆ ಬ್ರಷ್ನಲ್ಲಿ ಒಂದು ಚಿಟಿಕೆ ಅಡಿಗೆ ಸೋಡಾದೊಂದಿಗೆ ಹಲ್ಲುಜ್ಜಿ.
ಹೀಗೆ ಮಾಡುವುದರಿಂದ ಹಲ್ಲುಗಳು ಸ್ವಚ್ಛವಾಗುತ್ತವೆ.
Published On - 10:04 pm, Sun, 7 May 23