IPL 2023: ಮೊದಲು ಜಗಳ..ಆಮೇಲೆ ಅಪ್ಪುಗೆ..!

IPL 2023 Kannada: ಮೊಹಮ್ಮದ್ ಸಿರಾಜ್ ಎಸೆದ 5ನೇ ಓವರ್​ನ ಮೊದಲೆರಡು ಎಸೆತಗಳಲ್ಲಿ ಸಾಲ್ಟ್ ಭರ್ಜರಿ ಸಿಕ್ಸ್ ಸಿಡಿಸಿದರು. ಇನ್ನು 3ನೇ ಎಸೆತದಲ್ಲಿ ಫೋರ್ ಬಾರಿಸಿದರು.

TV9 Web
| Updated By: ಝಾಹಿರ್ ಯೂಸುಫ್

Updated on: May 07, 2023 | 7:23 PM

IPL 2023: ಐಪಿಎಲ್​ನ 50ನೇ ಪಂದ್ಯದಲ್ಲಿ ಆರ್​ಸಿಬಿ ಆಟಗಾರ ಮೊಹಮ್ಮದ್ ಸಿರಾಜ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಆಟಗಾರ ಫಿಲ್ ಸಾಲ್ಟ್ ನಡುವೆ ವಾಕ್ಸಮರ ಏರ್ಪಟ್ಟಿತ್ತು.

1 / 8
ಮೊಹಮ್ಮದ್ ಸಿರಾಜ್ ಎಸೆದ 5ನೇ ಓವರ್​ನ ಮೊದಲೆರಡು ಎಸೆತಗಳಲ್ಲಿ ಸಾಲ್ಟ್ ಭರ್ಜರಿ ಸಿಕ್ಸ್ ಸಿಡಿಸಿದರು. ಇನ್ನು 3ನೇ ಎಸೆತದಲ್ಲಿ ಫೋರ್ ಬಾರಿಸಿದರು. ಆದರೆ ಸಿರಾಜ್ 4ನೇ ಎಸೆತವನ್ನು ಬೌನ್ಸರ್ ಎಸೆದರು.

2 / 8
ಅತ್ತ ಮಾರಕ ಬೌನ್ಸರ್​ಗೆ ಉತ್ತರಿಸಲಾಗದೇ ಫಿಲ್ ಸಾಲ್ಟ್ ಅದೇನೋ ಗೊಣಗಿದ್ದಾರೆ. ಇತ್ತ ಮೊದಲೇ ಸಿಕ್ಸ್-ಫೋರ್ ಹೊಡೆಸಿಕೊಂಡು ಕುಪಿತಗೊಂಡಿದ್ದ ಮೊಹಮ್ಮದ್ ಸಿರಾಜ್ ಅವರ ಸಹನೆಯ ಕಟ್ಟೆ ಒಡೆದಿದೆ.

3 / 8

4 / 8
ಆದರೆ ಮೊದಲೇ ಸಿಡಿಮಿಡಿಗೊಂಡಿದ್ದ ಸಿರಾಜ್ ವಾರ್ನರ್ ಜೊತೆಗೂ ವಾಗ್ವಾದಕ್ಕೆ ಇಳಿದರು. ಅಷ್ಟರಲ್ಲಿ ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ಅಂಪೈರ್ ಮಧ್ಯಪ್ರವೇಶಿಸಿ ಜಗಳವನ್ನು ಕೊನೆಗೊಳಿಸಿದರು.

5 / 8
ಇನ್ನು ಈ ಪಂದ್ಯದಲ್ಲಿ ಆರ್​ಸಿಬಿ ನೀಡಿದ 182 ರನ್​ಗಳ ಟಾರ್ಗೆಟ್​ ಅನ್ನು 16.4 ಓವರ್​ಗಳಲ್ಲಿ ಚೇಸ್ ಮಾಡುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವು 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

6 / 8
ಈ ಗೆಲುವಿನ ಬಳಿಕ ಹಸ್ತಲಾಘವ ಮಾಡುವ ವೇಳೆ ಮೊಹಮ್ಮದ್ ಸಿರಾಜ್ ಹಾಗೂ ಫಿಲ್ ಸಾಲ್ಟ್ ಮುಖಾಮುಖಿಯಾಗಿದ್ದಾರೆ. ಆದರೆ ಸಿರಾಜ್ ಕೇವಲ ಕೈಕುಲುಕಿರಲಿಲ್ಲ. ಬದಲಾಗಿ ಸಾಲ್ಟ್ ಅವರನ್ನು ತಬ್ಬಿಕೊಳ್ಳುವ ಮೂಲಕ ಕ್ರೀಡಾಸ್ಪೂರ್ತಿ ಮರೆದಿದ್ದಾರೆ.

7 / 8
ಇದೀಗ ಸಿರಾಜ್ ಹಾಗೂ ಸಾಲ್ಟ್ ಅವರ ಅಪ್ಪುಗೆಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆರ್​ಸಿಬಿ ಆಟಗಾರನ ನಡೆಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

8 / 8
Follow us