ಸಾಹಸ ಪ್ರಿಯರಿಗಾಗಿ ಹೊಸ ತಾಣ, ಕಣಿವೆ ರಾಜ್ಯದಲ್ಲಿ ಸಾಹಸ ಕ್ರೀಡೆ ಪ್ರಾರಂಭ
ಕಾಶ್ಮೀರದ ಕಿಶ್ತ್ವಾರ್‌ನ ಜಿಲ್ಲಾಡಳಿತವು ಇತ್ತೀಚೆಗೆ ಸಾಹಸ ಕ್ರೀಡೆ ಜೋರ್ಬಿಂಗ್ ಬಾಲ್ ಅನ್ನು ಪ್ರಾರಂಭಿಸಿದೆ. ಇದು ಪ್ರವಾಸೋದ್ಯಮವನ್ನು ಮತ್ತಷ್ಟು ಉತ್ತೇಜಿಸುವ ಪ್ರಯತ್ನವಾಗಿದೆ. ಕಿಶ್ತ್ವಾರ್ ಅಭಿವೃದ್ಧಿ ಪ್ರಾಧಿಕಾರ (ಕೆಡಿಎ) ಆಯೋಜಿಸಿದ ಚಟುವಟಿಕೆಗಳನ್ನು ಕಿಶ್ತ್ವಾರ್‌ನ ಜಿಲ್ಲಾ ಅಭಿವೃದ್ಧಿ ಆಯುಕ್ತ ಅಶೋಕ್ ಶರ್ಮಾ ಉದ್ಘಾಟಿಸಿದರು.