Viral News: ಪ್ರಪಂಚದಲ್ಲಿ ಎಲ್ಲೇ ಹುಡುಕಿದರೂ ಇಂತಹ ಕೋಳಿ ಸಿಗುವುದಿಲ್ಲ, ಜಾಲತಾಣದಲ್ಲಿ ವೈರಲ್ ಆಗಿರುವ ಈ ಕೋಳಿಯ ರೆಕಾರ್ಡ್​​, ಸ್ಪೆಷಾಲಿಟಿ ತಿಳಿದುಕೊಳ್ಳಿ

| Updated By: ಸಾಧು ಶ್ರೀನಾಥ್​

Updated on: Mar 03, 2023 | 6:38 PM

peanut hen: ಕಡಲೆಕಾಯಿ ಹೆಸರಿನ ಈ ಕೋಳಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಏಕೆಂದರೆ ಈ ಕೋಳಿಯು ಇಡೀ ಪ್ರಪಂಚದಲ್ಲಿಯೇ ಬಹಳ ವಿಶೇಷವಾಗಿದೆ. ಈ ರೀತಿಯ ಕೋಳಿ ಎಲ್ಲಿಯೂ ಕಾಣಿಸುವುದಿಲ್ಲ. ಇದರ ವಿಶೇಷತೆ ಏನು ಅಂತ ನೋಡಿ.

1 / 8
ಭೂಮಿಯ ಮೇಲೆ ಮನುಷ್ಯರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೋಳಿಗಳು ಇವೆ. ಭೂಮಿಯ ಮೇಲೆ 25 ಬಿಲಿಯನ್ ಕೋಳಿಗಳಿವೆ ಎಂದು ಅಂದಾಜಿಸಲಾಗಿದೆ. ಅಂದರೆ ಕೋಳಿಗಳು ಇತರ ಪಕ್ಷಿ ಪ್ರಭೇದಗಳಿಗಿಂತ ಹೆಚ್ಚು ಸಂಖ್ಯೆಯಲ್ಲಿವೆ. ಆದಾಗ್ಯೂ, ಕೋಳಿಗಳ ವಯಸ್ಸು ತುಂಬಾ ಕಡಿಮೆಯಾದ್ದಾಗಿದೆ. ಈಗೊಂದು ಕೋಳಿ ವೈರಲ್ ಆಗಿದೆ. ಅದು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ಅನ್ನು ಸಹ ಪ್ರವೇಶಿಸಿದೆ.

2 / 8
ಕಡಲೆಕಾಯಿ ಹೆಸರಿನ ಈ ಕೋಳಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಏಕೆಂದರೆ ಈ ಕೋಳಿಯು ಇಡೀ ಪ್ರಪಂಚದಲ್ಲಿಯೇ ಬಹಳ ವಿಶೇಷವಾಗಿದೆ. ಈ ರೀತಿಯ ಕೋಳಿ ಎಲ್ಲಿಯೂ ಕಾಣಿಸುವುದಿಲ್ಲ. ಇದರ ವಿಶೇಷತೆ ಏನು ಅಂತ ನೋಡಿ.

3 / 8
ಮೊಟ್ಟೆ ಇಟ್ಟ ನಂತರ.. ಕಡಲೆಕಾಯಿ ಕೋಳಿಯ ತಾಯಿ ಮೊಟ್ಟೆಯಿಟ್ಟನಂತರ ಅದೆಲ್ಲವುಗಳನ್ನು ಬಿಟ್ಟುಹೊರಟುಹೋಯಿತು. ಆದರೆ ಮರ್ಸಿ ಡಾರ್ವಿನ್ ಎಂಬ ಮಹಿಳೆ ಈ ಮೊಟ್ಟೆಗಳನ್ನು ಜೋಪಾನವಾಗಿ ನೋಡಿಕೊಂಡರು.

4 / 8
ಅಮೆರಿಕದ ಮಿಚಿಗನ್ ನಲ್ಲಿರುವ ಈ ಕೋಳಿಯ ಹೆಸರು ಕಡಲೆಕಾಯಿ (ಪೀನಟ್). ಇದು 2002 ರಲ್ಲಿ ಜನಿಸಿದೆ. ಇದು ಬಾಂಟಮ್ ಚಿಕನ್. ಇದರ ಗಾತ್ರ ಸಾಮಾನ್ಯ ಕೋಳಿಗಳಿಗಿಂತ ಚಿಕ್ಕದಾಗಿದೆ.

5 / 8
ಕಡಲೆಕಾಯಿ ಇರುವ ಮೊಟ್ಟೆ ತಣ್ಣಗಿದೆ ಎಂದುಕೊಂಡ ಮರ್ಸಿ.. ಅದರಲ್ಲಿ ಮರಿ ಬದುಕಲು ಸಾಧ್ಯವೇ ಇಲ್ಲ.. ಮೊಟ್ಟೆಯನ್ನು ಹೊರಗೆ ಎಸೆಯಬೇಕೆಂದುಕೊಂಡಳು. ಆದರೆ ಇದ್ದಕ್ಕಿದ್ದಂತೆ ಮೊಟ್ಟೆಯಿಂದ ಶಬ್ದ ಬಂದಾಗ ಮರ್ಸಿ ತನ್ನ ನಿರ್ಧಾರವನ್ನು ಬದಲಾಯಿಸಿದಳು. ಮರ್ಸಿ ಡಾರ್ವಿನ್ ಮೊಟ್ಟೆ ಒಡೆದಾಗ... ಕಡಲೆಕಾಯಿ ಹೊರಬಂದಿತು ಎಂದು ಹೇಳಿದರು. ಮೊಟ್ಟೆ ಸದ್ದು ಮಾಡತೊಡಗಿದಂತೆ ಅದರಲ್ಲಿ ಜೀವವಿದೆ ಎಂದು ಬಗೆದ ಮರ್ಸಿ ಡಾರ್ವಿನ್ ಅದನ್ನು ಉಳಿಸಿಕೊಂಡರು... ಗಿಳಿ ಪಂಜರದಲ್ಲಿ ಕಡಲೆಕಾಯಿ ಕೋಳಿಯನ್ನು ಬೆಳೆಸಿದರು ಮರ್ಸಿ. ಅದರ ನಂತರ, ಮರ್ಸಿ ಇತರ ಪ್ರಾಣಿಗಳ ಸ್ನೇಹದೊಂದಿಗೆ  ಅದನ್ನು ಬೆಳೆಸಿದರು.

6 / 8
ಆದರೆ, ಈಗ ಕಡಲೆಕಾಯಿ ವಿಶ್ವ ದಾಖಲೆ ಸೃಷ್ಟಿಸಿದೆ. ಕೋಳಿಗಳು ಸಾಮಾನ್ಯವಾಗಿ 5 ರಿಂದ 10 ವರ್ಷಗಳ ಜೀವಿತಾವಧಿಯನ್ನು ಹೊಂದಿರುತ್ತವೆ. ಆದರೆ ಕಡಲೆಕಾಯಿಗೆ 20 ವರ್ಷ! ಈ ಕೋಳಿ ಇನ್ನೂ ಆರೋಗ್ಯಕರವಾಗಿದೆ.

7 / 8
ಮೊನ್ನೆ ಮಾರ್ಚ್ 1, 2023 ರ ಹೊತ್ತಿಗೆ.. ಕಡಲೆಕಾಯಿ ಕೋಳಿ 20 ವರ್ಷ 304 ದಿನಗಳನ್ನು ಪೂರೈಸಿದೆ. ಇದು ಈಗ ವಿಶ್ವದಲ್ಲೇ ಅತಿ ಹೆಚ್ಚು ಸಮಯ ಬದುಕಿರುವ ಕೋಳಿ ಎಂಬ ದಾಖಲೆ ಸೃಷ್ಟಿಸಿದೆ. ಎರಡು ದಶಕಗಳ ಕಾಲ ಬದುಕಿ ಗಿನ್ನಿಸ್ ಪುಸ್ತಕ ಸೇರಿದೆ.

8 / 8