Updated on: Mar 04, 2023 | 9:04 AM
ನಟಿ ಕಿಯಾರಾ ಅಡ್ವಾಣಿ ಅವರು ಇತ್ತೀಚೆಗೆ ಸಿದ್ದಾರ್ಥ್ ಮಲ್ಹೋತ್ರಾ ಜೊತೆ ಮದುವೆ ಆದರು. ಈ ಜೋಡಿ ಮತ್ತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದೆ. ಈಗ ಕಿಯಾರಾ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ.
ನಟಿಯರು ಫೋಟೋಶೂಟ್ ಮಾಡಿಸೋದು ಕಾಮನ್. ಆದರೆ, ಕಿಯಾರಾ ಫೋಟೋಶೂಟ್ ಭಿನ್ನವಾಗಿದೆ. ಮ್ಯಾಂಗೋ ಬಣ್ಣದ ಡ್ರೆಸ್ನಲ್ಲಿ ಕಿಯಾರಾ ಗಮನ ಸೆಳೆದಿದ್ದಾರೆ. ಫೋಟೋ ಬ್ಯಾಕ್ಗ್ರೌಂಡ್ಕೂಡ ಮ್ಯಾಂಗೋ ಬಣ್ಣದಲ್ಲೇ ಇದೆ. ಜ್ಯೂಸ್ ಕಂಪನಿಯೊಂದರ ಜಾಹೀರಾತಿಗೆ ಅವರು ಈ ರೀತಿಯ ಡ್ರೆಸ್ ಧರಿಸಿದ್ದಾರೆ.
ಈ ಫೋಟೋಗಳನ್ನು ಕಿಯಾರಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರ ಬೋಲ್ಡ್ ಫೋಟೋ ಫ್ಯಾನ್ಸ್ಗೆ ಇಷ್ಟವಾಗಿದೆ.
ಕಿಯಾರಾ ಅವರು ‘ಶೇರ್ಷಾ’ ಬಳಿಕ ಬ್ಯಾಕ್ ಟು ಬ್ಯಾಕ್ ಗೆಲುವು ಕಾಣುತ್ತಿದ್ದಾರೆ. ಸದ್ಯ ರಾಮ್ ಚರಣ್ ನಟನೆಯ 15ನೇ ಚಿತ್ರದ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ.
ಕಿಯಾರಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರನ್ನು ಸುಮಾರು 3 ಕೋಟಿ ಮಂದಿ ಹಿಂಬಾಲಿಸುತ್ತಿದ್ದಾರೆ.