
ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದ ಖಾಸಗಿ ರೆಸಾರ್ಟ್‌ನಲ್ಲಿ ಡಿ.11 ರಂದು ಮೈಸೂರು ಫ್ಯಾಷನ್ ವೀಕ್ ವತಿಯಿಂದ ಫ್ಯಾಷನ್ ಶೋ ಆಯೋಜಿಸಲಾಗಿತ್ತು.

ಮೈಸೂರಿನ ಫ್ಯಾಷನ್ ಡಿಸೈನರ್ ಜಯಂತಿ ಬಲ್ಲಾಳ್ ನೇತೃತ್ವದಲ್ಲಿ ಈ ಫ್ಯಾಷನ್ ಶೋ ನಡೆದಿದ್ದು, ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಮುಂಬೈ ದೆಹಲಿ ಬೆಂಗಳೂರು ಸೇರಿದಂತೆ ವಿವಿಧ ರಾಜ್ಯದ ಮಾಡೆಲ್‌ಗಳು ಫ್ಯಾಷನ್ ಶೋನಲ್ಲಿ ಭಾಗವಹಿಸಿದ್ದರು. ಹಲವು ಫ್ಯಾಷನ್ ಡಿಸೈನರ್‌ಗಳು ತಮ್ಮ ಹೊಸ ಹೊಸ ವಿನ್ಯಾಸವನ್ನು ಪ್ರದರ್ಶಿಸಿ ಗಮನ ಸೆಳೆದರು.

ಕೊರೊನಾ ನಂತರ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಫ್ಯಾಷನ್ ಕಲರವಕ್ಕೆ ಬ್ರೇಕ್ ಬಿದ್ದಿತ್ತು. ಇದರಿಂದ ಮಾಡಿಲ್‌ಗಳು ಫ್ಯಾ,ಷನ್ ಡಿಸೈನರ್‌ಗಳಿಗೆ ಸಾಕಷ್ಟು ನಿರಾಶೆಯಾಗಿತ್ತು. ಆದರೆ ಇದೀಗ ಆ ಅಜ್ಞಾತವಾಸಕ್ಕೆ ಬ್ರೇಕ್ ಬಿದ್ದಿದ್ದು, ಫ್ಯಾಷನ್ ವೀಕ್ ಮೂಲಕ ಫ್ಯಾಷನ್ ಲೋಕ ಮತ್ತೆ ಅನಾವರಣಗೊಂಡಿದೆ.

ಕಲರ್ ಪುಲ್ ಬಟ್ಟೆ ತೊಟ್ಟು ವಾವ್ ಎನ್ನುವಂತೆ ಮಾಡಿದ ಯುವಕರು. ರಾಂಪ್ ಮೇಲೆ ಮೈ ಚಳಿ ಬಿಟ್ಟು ಯುವಕರು ಮಿಂಚು ಹರಿಸಿದರು.

ಸದ್ಯ ಆರಂಭವಾಗಿರುವ ಫ್ಯಾಷನ್ ಕಲರವ ಮತ್ತಷ್ಟು ಸದ್ದು ಮಾಡಲಿ. ಯುವಕ ಯುವತಿಯರ ಭವಿಷ್ಯಕ್ಕೆ ರಹದಾರಿಯಾಗಲಿ ಮತ್ತಷ್ಟು ಜನರು ಸಾಂಸ್ಕೃತಿಕ ನಗರಿಯತ್ತ ಮುಖ ಮಾಡುವಂತಾಗಲಿ ಎನ್ನುವುದೇ ಎಲ್ಲರ ಆಶಯ.