ಬೀದರ್ ಜಿಲ್ಲಾ ಕ್ರೀಡಾಂಗಣದಲ್ಲಿ ಡಿ.5ರಿಂದ ನಡೆಯುತ್ತಿರುವ ಅಗ್ನಿಪಥ್ ನೇಮಕಾತಿ ರ್‍ಯಾಲಿ 7ನೇ ದಿನಕ್ಕೆ ಕಾಲಿಟ್ಟಿದೆ.
ಪ್ರತಿ ದಿನ ಸಾವಿರಕ್ಕೂ ಹೆಚ್ಚು ಯುವಕರು ನೇಮಕಾತಿ ರ್‍ಯಾಲಿಯಲ್ಲಿ ಭಾಗಿಯಾಗುತ್ತಿದ್ದು, ರಾತ್ರಿಯಿಡೀ ಚಳಿ ನಡುವೆ ಸರತಿ ಸಾಲಿನಲ್ಲಿ ಯುವಕರ ದಂಡು ನಿಂತಿತ್ತು.
ರಾಜ್ಯದ ಬೆಳಗಾವಿ, ರಾಯಚೂರು, ಕೊಪ್ಪಳ, ವಿಜಯಪುರ, ಕಲಬುರಗಿ, ಯಾದಗಿರಿ ಜಿಲ್ಲೆಯ ಯುವಕರಿಗೆ ಅಗ್ನಿಪಥ್ ನೇಮಕಾತಿಯಲ್ಲಿ ಅವಕಾಶ ಕಲ್ಪಿಸಲಾಗಿತ್ತು.
ದಾಖಲೆ ಚಳಿಯ ನಡುವೆಯೂ ಸರತಿ ಸಾಲಿನಲ್ಲಿ ನಿಂತುಕೊಂಡು ಯುವಕರು, ಸೇನೆಗೆ ಸೇರಬೇಕೆಂಬ ಉತ್ಸಾಹದಲ್ಲಿ ರಾತ್ರಿಯಿಡಿ ಕೊರೆಯುವ ಚಳಿಯ ಮಧ್ಯೆ ಸರತಿ ಸಾಲಿನಲ್ಲಿ ನಿಂತುಕೊಂಡಿದ್ದರು.
ಇನ್ನು ಪ್ರತಿ ದಿನ ಸಾವಿರಾರು ಯುವಕರು ಅಗ್ನಿಪಥ್ ನೇಮಕಾತಿಯಲ್ಲಿ ಭಾಗವಹಿಸುತ್ತಿದ್ದರು. ಮುನ್ನೂರರ ಆಸುಪಾಸಿನಲ್ಲಿನ ಯುವಕರು ಅಂತಿಮ ಹಂತದ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ.
ರಾತ್ರಿಯಿಡೀ ಚಳಿಯಲ್ಲಿ ಸೇನೆಗೆ ಸೇರಬೇಕೆಂಬ ಹಾತೊರೆತ ಆ ಯುವಕರಲ್ಲಿ ಕಾಣುತ್ತಿತ್ತು, ಎದ್ದು ಬಿದ್ದು ಗುರಿಯ ಕಡೆಗೆ ಓಡುತ್ತಿದ್ದರು.
Published On - 7:15 am, Mon, 12 December 22