Vastu Tips: ಹಾಸಿಗೆಯ ಬಳಿ ಈ 5 ವಸ್ತುಗಳನ್ನು ಇಡಬಾರದು, ಅದರಿಂದ ಮನೆಯಲ್ಲಿ ಆರ್ಥಿಕ-ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ!

| Updated By: ಸಾಧು ಶ್ರೀನಾಥ್​

Updated on: Apr 06, 2023 | 6:06 AM

ವಾಸ್ತು ಪ್ರಕಾರ ಕೆಲವು ವಸ್ತುಗಳನ್ನು ಮಲಗುವ ಜಾಗದಲ್ಲಿ ಹಾಸಿಗೆಯ ಬಳಿ ಇಡಬಾರದು. ಅವುಗಳನ್ನು ಮಲಗುವ ಸ್ಥಳದಲ್ಲಿ ಇಡುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯವು ದುರ್ಬಲಗೊಳ್ಳುತ್ತದೆ ಎಂದು ವಾಸ್ತು ತಜ್ಞರು ಸೂಚಿಸುತ್ತಾರೆ. ಹಣಕಾಸಿನ ತೊಂದರೆಗೂ ಕಾರಣವಾಗುತ್ತದೆ ಎಂದು ಎಚ್ಚರಿಸುತ್ತಾರೆ. ಹೌದು, ವಾಸ್ತು ಶಾಸ್ತ್ರದ ಪ್ರಕಾರವಾಗಿ ಕೆಲಸ ಮಾಡಿದರೆ ಅನೇಕ ಕೆಲಸಗಳು ಸುಲಭವಾಗಿ ನೆರವೇರುತ್ತವೆ. ಈಗ ನಾವು ಹಾಸಿಗೆ ಅಥವಾ ಮಲಗುವ ಜಾಗದಲ್ಲಿ ಯಾವ ವಸ್ತುಗಳನ್ನು ಇಡಬಾರದು ಎಂದು ತಿಳಿಯೋಣ.

1 / 5
ಗ್ಯಾಜೆಟ್‌ಗಳು (Gadgets): ವಾಸ್ತು ಶಾಸ್ತ್ರದ ಪ್ರಕಾರ ಹಾಸಿಗೆಯ ಕೆಳಗೆ ಗ್ಯಾಜೆಟ್‌ಗಳನ್ನು ಇಡಬಾರದು. ಇದರಿಂದ ಮಾನಸಿಕ ಆರೋಗ್ಯ ಹಾಳಾಗಿ ನಿದ್ರಾಹೀನತೆ ಸಮಸ್ಯೆಗಳು ಎದುರಾಗುತ್ತವೆ.

2 / 5
ಕಬ್ಬಿಣ, ಪ್ಲಾಸ್ಟಿಕ್ (Iron-Plastic): ನೀವು ಮಲಗುವ ಜಾಗದಲ್ಲಿ ಕಬ್ಬಿಣದ ವಸ್ತುಗಳು, ಪ್ಲಾಸ್ಟಿಕ್ ವಸ್ತುಗಳನ್ನು ಕೂಡ ಇಡಬೇಡಿ. ಇದರಿಂದ ಮನೆಯಲ್ಲಿ ಭಯಾನಕ ವಾಸ್ತು ದೋಷ ಉಂಟಾಗಿ ಆರ್ಥಿಕ ಬಿಕ್ಕಟ್ಟು ಉಂಟಾಗುತ್ತದೆ.

3 / 5
ಪೊರಕೆ (Broom): ಹಾಸಿಗೆ ಅಥವಾ ಮಲಗುವ ಜಾಗದಲ್ಲಿ ಪೊರಕೆ ಇಡುವುದು ತುಂಬಾ ಅಶುಭ. ಮನಸ್ಸು ಮತ್ತು ಮೆದುಳಿನ ಮೇಲೆ  ಪೊರಕೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದಲ್ಲದೇ ಮನೆಯಲ್ಲಿ ಆರ್ಥಿಕ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಅದೇ ಸಮಯದಲ್ಲಿ ಕುಟುಂಬದ ಸದಸ್ಯರೂ ಅನಾರೋಗ್ಯಕ್ಕೆ ಒಳಗಾಗುತ್ತಾರೆ.

4 / 5
ಪಾದರಕ್ಷೆಗಳು (Slippers): ಹಾಸಿಗೆಯ ಕೆಳಗೆ ಚಿನ್ನ, ಬೆಳ್ಳಿ ಅಥವಾ ಇತರ ಲೋಹದ ಆಭರಣಗಳು, ಕನ್ನಡಿ, ಶೂಗಳು, ಚಪ್ಪಲಿಗಳನ್ನು ಇಡಬೇಡಿ. ಇವು ಮನೆಯೊಳಗೆ ನಕಾರಾತ್ಮಕ ಶಕ್ತಿಯನ್ನು ತರುತ್ತವೆ. ಹಾಗೆಯೇ ಹಾಸಿಗೆಯ ಕೆಳಗೆ ತಪ್ಪಾಗಿಯೂ ಗಾಜು ಅಥವಾ ಎಣ್ಣೆಯನ್ನು ಹಾಕಬೇಡಿ. ಏಕೆಂದರೆ ಇವು ವಾಸ್ತು ಶಾಸ್ತ್ರದ ಪ್ರಕಾರ ಆ ಸ್ಥಳದಲ್ಲಿ ನೆಲೆಸಿದರೆ ಕುಟುಂಬಕ್ಕೆ ಅನಿಷ್ಟ ಕಟ್ಟಿಟ್ಟಬುತ್ತಿ.

5 / 5
ತೊಳೆಯದ ಪಾತ್ರೆಗಳು (Utensils): ಅನೇಕ ಜನರು ಕೆಲವು ಸಂದರ್ಭಗಳಲ್ಲಿ ತಮ್ಮ ಹಾಸಿಗೆಯ ಬಳಿ ಚಹಾ, ಕಾಫಿ ಕಪ್​ ಅಥವಾ ಊಟ ಮಾಡಿದ ತಟ್ಟೆಗಳನ್ನು ಇಡುತ್ತಾರೆ. ಆದರೆ ಅದು ಕುಟುಂಬಕ್ಕೆ ಒಳ್ಳೆಯದಲ್ಲ. ಇದು ಮನೆಯ ಪ್ರಗತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ನಿದ್ರೆಯ ಸಮಯದಲ್ಲಿ ದುಃಸ್ವಪ್ನಗಳನ್ನು ಸಹ ಬೀಳುತ್ತವೆ.