‘ಅರಳು ಕಣ್ಗಳ’ ಶಿರಸಿ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ : ಫೋಟೋಗಳಲ್ಲಿ ನೋಡಿ
TV9 Web | Updated By: Pavitra Bhat Jigalemane
Updated on:
Mar 16, 2022 | 6:25 PM
ಶಿರಸಿ ಅಧಿದೇವತೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆ ಆರಂಭವಾಗಿದೆ. ಬಿಡಕಿ ಬೈಲಿನಲ್ಲಿರುವ ಗದ್ದುಗೆಗೆ ಒಂದು ದೇವಿ ಆಗಮಿಸಿ ವಿರಾಜಮಾನಳಾಗಿದ್ದಾಳೆ. ಜಾತ್ರೆಯ ಇಂದಿನ ಕೆಲ ಫೋಟೋಗಳು ಇಲ್ಲಿವೆ.
1 / 11
ಶಿರಸಿ ಶಕ್ತಿಪೀಠ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಆರಂಭವಾಗಿದೆ. ಇಂದು ಮಧ್ಯಾಹ್ನ ದೇವಿ ಗದ್ದುಗೆಗೆ ಬಂದು ಕುಳಿತಿದ್ದಾಳೆ. ಇಂದಿನ ಕೆಲವು ಫೋಟೋಗಳು ಇಲ್ಲಿವೆ ನೋಡಿ
2 / 11
ಮಾರಿಕಾಂಬಾ ದೇವಾಲಯದಿಂದ 7 ಅಡಿ ದೇವಿಯ ವಿಗ್ರಹವನ್ನು ರಥದಲ್ಲಿ ತರಲಾಯಿತು.
3 / 11
ಸರ್ವಾಲಂಕಾರ ಭೂಷಿತಳಾದ ದೇವಿಯನ್ನು ರಥದಲ್ಲಿ ಮೆರವಣಿಗೆ ಮಾಡಲಾಯಿತು.
4 / 11
ಒಟ್ಟು 9 ದಿನಗಳ ಕಾಲ ಬಿಡಕಿ ಬೈಲಿನಲ್ಲಿರುವ ಗದ್ದುಗೆಯಲ್ಲಿ ಕುಳಿತು ದರ್ಶನ ನೀಡುತ್ತಾಳೆ.
5 / 11
ದೇವಿಯನ್ನು ಗದ್ದುಗೆಗೆ ಕರೆತರುವ ವೇಳೆ ಸಾವಿರಾರು ಭಕ್ತರು ನೆರೆದಿದ್ದರು.
6 / 11
ರಾತ್ರಿ ಕಲ್ಯಾಣೋತ್ಸವವನ್ನು ಮಾಡಿ ತೇರಿನಲ್ಲಿ ಕೂರಿಸಿಕೊಂಡು ತೇರನ್ನು ಎಳೆಯುವ ಮೂಲಕ ದೇವಿಯನ್ನು ಕರೆತರಲಾಯಿತು.
7 / 11
ಮಾರಿಕಾಂಬಾ ದೇವಿಯ ರಥೋತ್ಸವದ ವೇಳೆ ನೆರೆದ ಜನಸಮೂಹ.
8 / 11
ಮೆರವಣಿಗೆಯ ಬಳಿಕ ಗದ್ದುಗೆಗೆ ಮಾರಿಕಾಂಬ ದೇವಿ ಬರುತ್ತಿರುವ ದೃಶ್ಯ.
9 / 11
ಗದ್ದುಗೆಯನ್ನು ಏರುವ ವೇಳೆ ಮಾರಿಕಾಂಬಾ ದೇವಿ ಕಾಣಿಸಿಕೊಂಡಿದ್ದು ಹೀಗೆ
10 / 11
ಸರ್ವಾಲಂಕಾರ ಭೂಷಿತೆಯಾಗಿ, ರತ್ನ ಖಚಿತ ಆಭರಣಗಳನ್ನು ಧರಿಸಿ ಗದ್ದುಗೆಯರಿದ ಶಿರಸಿ ಮಾರಿಕಾಂಬಾ ದೇವಿ.
11 / 11
ಬಿಡಕಿ ಬೈಲಿನ ಗದ್ದುಗೆಯಲ್ಲಿ ಸ್ಥಾನವನ್ನು ಅಲಂಕರಿಸಿದ ಮಾರಿಕಾಂಬಾ ದೇವಿ. ಇನ್ನು ಮಾರ್ಚ್ 23ರವರೆಗೆ ದೇವಿ ಗದ್ದುಗೆಯಲ್ಲಿ ವಿರಾಜಮಾನಳಾಗಿದ್ದು ಭಕ್ತರಿಗೆ ದರ್ಶನ ನೀಡುತ್ತಾಳೆ.
ಫೋಟೋಗಳು- ರವೀಶ್ ಹೆಗಡೆ
Published On - 6:25 pm, Wed, 16 March 22