ಚರ್ಮದ ಅಲರ್ಜಿ ಸಮಸ್ಯೆಗಳಿಗೆ ಈ ಆಹಾರಗಳನ್ನು ಸೇವಿಸಿ; ಫೋಟೋದೊಂದಿಗೆ ಇಲ್ಲಿದೆ ಮಾಹಿತಿ
TV9 Web | Updated By: Pavitra Bhat Jigalemane
Updated on:
Jan 23, 2022 | 12:01 PM
ಚರ್ಮ ಕಾಂತಿಯುತವಾಗಿ ಕಾಣಬೇಕು ಎನ್ನುವುದು ಎಲ್ಲರ ಆಸೆ. ಆದರೆ ಅದಕ್ಕೆ ಬದುಕಿನ ಶೈಲಿ ಕೆಲವೊಮ್ಮೆ ಅಡ್ಡಿಯಾಗುತ್ತದೆ. ಹೀಗಾಗಿ ವೇಗದ ಬದುಕಿಗೂ ಅಡ್ಡಿಯಾಗದ ಈ ಆಹಾರಗಳನ್ನು ನಿಯಮಿತವಾಗಿ ಸೇವಿಸಿ ಚರ್ಮಕ್ಕೆ ಕಾಡುವ ಅಲರ್ಜಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ.
1 / 8
ವೆಬ್‌ಎಮ್‌ಡಿಯಲ್ಲಿ ಪ್ರಕಟವಾದ ವೈದ್ಯಕೀಯವಾಗಿ ಪರಿಶೀಲಿಸಿದ ಲೇಖನದ ಪ್ರಕಾರ, ಎಲ್ಲಾ ಆಹಾರಗಳು ಅಲರ್ಜಿಯನ್ನು ಗುಣಪಡಿಸುವುದಿಲ್ಲ ಆದರೆ ವಿಟಮಿನ್‌ಗಳು, ಖನಿಜಗಳು ಮತ್ತು ಇತರ ಪೋಷಕಾಂಶಗಳು ನಮ್ಮ ಆರೋಗ್ಯಕ್ಕೆ ಉತ್ತಮವಾಗಿವೆ. ಅಂತಹ ಆಹಾರಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
2 / 8
ಚರ್ಮವು ಬಾಹ್ಯ ಸೌಂದರ್ಯವಾಗಿದ್ದರೂ ದೇಹದ ಆಂತರಿಕ ಸಮಸ್ಯೆಗಳನ್ನು ತೋರಿಸುತ್ತದೆ. ಆದ್ದರಿಂದ ಕೆಲವು ಆರೋಗ್ಯ ಸಮಸ್ಯೆಗಳಿಂದ ಚರ್ಮದ ಮೇಲೆ ಅಲರ್ಜಿ ಉಂಟಾಗುತ್ತದೆ ಎನ್ನುತ್ತಾರೆ ವೈದ್ಯರು. ಅದರ ತಡೆಗೆ ಈ ಕೆಳಗಿನ ಆಹಾರಗಳು ಸಹಾಯ ಮಾಡುತ್ತದೆ.
3 / 8
ಮೊಸರು ಉರಿಯೂತದ ಮತ್ತು ಅಲರ್ಜಿ-ವಿರೋಧಿ ಪರಿಣಾಮಗಳನ್ನು ಹೊಂದಿವೆ. ಹೀಗಾಗಿ ಚರ್ಮದ ಅಲರ್ಜಿ ಸಮಸ್ಯೆಗೆ ಮೊಸರು ಸಹಕಾರಿಯಾಗಿದೆ.
4 / 8
ವಿಟಮಿನ್ ಸಿ ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರಹಿಸುತ್ತದೆ. ಸ್ಟ್ರಾಬೆರಿ, ಸೇಬುವಿನಂತಹ ಹಣ್ಣುಗಳು ಚರ್ಮವನ್ನು ಆಳದಿಂದ ಆರೋಗ್ಯಯುತವಾಗಿಡುತ್ತದೆ.
5 / 8
ವಿಟಮಿನ್ ಇ ಅಂಶಗಳಿರು ಕಡಲೆಕಾಯಿ, ಸೂರ್ಯಕಾಂತಿ ಬೀಜಗಳು ಚರ್ಮದ ಸಮಸ್ಯೆಗೆ ಉತ್ತಮ ಪರಿಹಾರವನ್ನು ನೀಡುತ್ತದೆ ಎನ್ನುತ್ತಾರೆ ವೈದ್ಯರು.
6 / 8
ಕ್ವಸರ್ಟಿನ್ ಆಹಾರಗಳಾದ ಸೇಬು, ಟೀ, ಈರುಳ್ಳಿಯಂತಹ ಆಹಾರಗಳು ಚರ್ಮದ ಅಲರ್ಜಿಯನ್ನು ನಿವಾರಿಸುತ್ತವೆ.
7 / 8
ಸಮೃದ್ಧವಾದ ಮ್ಯಾಗ್ನಿಷಿಯಂ ಅಂಶಗಳಿರುವ ಆಹಾರಗಳಾದ ಬಾದಾಮಿ, ಗೋಡಂಬಿಗಳು ಅಲರ್ಜಿ ಸಮಸ್ಯೆಗಳನ್ನು ನಿವಾರಿಸುತ್ತವೆ.
8 / 8
ಒಟ್ಟಿನಲ್ಲಿ ಆರೋಗ್ಯಯುತ ಚರ್ಮವನ್ನು ಪಡೆಯಲು ಆಂತರಿಕವಾಗಿ ಆರೋಗ್ಯವನ್ನು ಉತ್ತಮಗೊಳಿಸಬೇಕು. ಅದಕ್ಕೆ ಈ ಮೇಲಿನ ಆಹಾರಗಳು ಹೆಚ್ಚು ಸಹಾಯಕವಾಗಿದೆ.