Updated on: Aug 17, 2021 | 8:21 AM
ಎಲ್ಲಿಯಾದರೂ ಸುಲಭವಾಗಿ ಬೆಳೆಯುವ ಸಸ್ಯವೆಂದರೆ ಅದು ಮನಿ ಪ್ಲಾಂಟ್. ಈ ಸಸ್ಯವನ್ನು ಮಲಗುವ ಕೋಣೆ, ಬಾಲ್ಕನಿ, ಸ್ನಾನಗೃಹ, ಡ್ರಾಯಿಂಗ್ ರೂಮ್ ಅಥವಾ ತೋಟದಲ್ಲಿ ಸುಲಭವಾಗಿ ಬೆಳೆಸಬಹುದು. ಕೆಲವರು ಈ ಸಸ್ಯಗಳನ್ನು ಅಡುಗೆಮನೆಯಲ್ಲಿ ಬೆಳೆಯುತ್ತಾರೆ. ಇದು ಅಡಿಗೆ ತುಂಬಾ ರುಚಿಯಾಗುವಂತೆ ಮಾಡುತ್ತದೆ ಎಂಬ ನಂಬಿಕೆ ಇದೆ. ಈ ಗಿಡ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಉತ್ಪಾದಿಸುತ್ತವೆ. ಈ ಗಿಡಕ್ಕೆ ಹೆಚ್ಚಿನ ಕಾಳಜಿ ಬೇಕು.
ಲ್ಯಾವೆಂಡರ್ ಹೆಚ್ಚು ಪರಿಮಳವನ್ನು ಹೊಂದಿದೆ. ಲ್ಯಾವೆಂಡರ್ ಹೂವಿನ ಗಿಡವನ್ನು ಒತ್ತಡ, ಆತಂಕ ಮತ್ತು ಖಿನ್ನತೆಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಈ ಸಸ್ಯಕ್ಕೆ ಸಾಕಷ್ಟು ಸೂರ್ಯನ ಬೆಳಕು ಮತ್ತು ಕಡಿಮೆ ನೀರಿನ ಅಗತ್ಯವಿರುತ್ತದೆ.
ಆರ್ಕಿಡ್ ಹೂವು ಒತ್ತಡವನ್ನು ನಿವಾರಿಸುತ್ತದೆ ಮತ್ತು ನಿಮಗೆ ವಿಶ್ರಾಂತಿಗೆ ಸಹಾಯ ಮಾಡುತ್ತದೆ. ಇದನ್ನು ಹೊರತುಪಡಿಸಿದರೆ ಆರ್ಕಿಡ್ ಗಿಡ ನೋಡಲು ತುಂಬಾ ಸುಂದರವಾಗಿರುತ್ತದೆ. ಸರಿಯಾದ ಸೂರ್ಯನ ಬೆಳಕನ್ನು ಪಡೆಯುವ ಮತ್ತು ಬೆಳಕಿರುವ ಯಾವುದೇ ಕೋಣೆಯಲ್ಲಿ ನೀವು ಈ ಗಿಡವನ್ನು ಇರಿಸಬಹುದು.
ಅಲೋವೆರಾ ಅತ್ಯಂತ ಮುಖ್ಯವಾದ ಗಿಡ. ಹೆಚ್ಚಿನ ಜನರು ತಮ್ಮ ಮುಖ, ಕೂದಲು ಮತ್ತು ತುರಿಕೆಯಂತಹ ಕಾಯಿಲೆಗಳಿಗೆ ಬಳಸುತ್ತಾರೆ. ಆದರೆ ಈ ಸಸ್ಯವು ಗಾಳಿಯನ್ನು ಶುದ್ಧಗೊಳಿಸುತ್ತದೆ. ಅಲೋವೆರಾ ಸಸ್ಯವನ್ನು ಎಲ್ಲಾ ಕೋಣೆಗಳಲ್ಲಿ ಇರಿಸಬಹುದು, ಆದರೆ ವಿಶೇಷವಾಗಿ ಮಲಗುವ ಕೋಣೆಯಲ್ಲಿ ಇಡುವುದು ಉತ್ತಮ. ಮನೆಯಲ್ಲಿ ನೆಮ್ಮದಿ ಹೆಚ್ಚಳಕ್ಕೆ ಇದು ಕಾರಣವಾಗುತ್ತದೆ.
ಮಲ್ಲಿಗೆ ಹೂವುಗಳ ಪರಿಮಳ ಬಹಳ ಆಕರ್ಷಕವಾಗಿದೆ. ಮಲ್ಲಿಗೆ ಗಿಡವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ವಿಶ್ವದ ಅನೇಕ ದೇಶಗಳಲ್ಲಿ ಈ ಗಿಡವನ್ನು ಪೂಜಿಸಲಾಗುತ್ತದೆ. ಮಲ್ಲಿಗೆ ಹೂವನ್ನು ವಿಶ್ವಾಸ, ಪ್ರೀತಿ ಮತ್ತು ಸಂಬಂಧವನ್ನು ಬಲಪಡಿಸುವ ಸಂಕೇತವಾಗಿ ಪರಿಗಣಿಸಲಾಗಿದೆ. ಈ ಸಸ್ಯಗಳನ್ನು ನೆಡುವುದರಿಂದ ರಾತ್ರಿಯಲ್ಲಿ ಉತ್ತಮ ಕನಸುಗಳು ಬರುತ್ತವೆ ಮತ್ತು ಒತ್ತಡ ದೂರವಾಗುತ್ತದೆ.
ಭಾರತೀಯ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ವಿಶೇಷ ಸ್ಥಾನವಿದೆ. ತುಳಸಿಯನ್ನು ದೇವತೆಯಾಗಿ ಪೂಜಿಸಲಾಗುತ್ತದೆ. ತುಳಸಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ. ತುಳಸಿ ಗಿಡವನ್ನು ಮನೆಯಲ್ಲಿ ಇಡುವುದರಿಂದ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುವುದಲ್ಲದೆ ಒತ್ತಡ ಕಡಿಮೆಯಾಗುತ್ತದೆ. ಈ ಗಿಡವನ್ನು ಬೆಳಿಗ್ಗೆ ನೋಡುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಪುಟ್ಟ ಪಾಟ್ನಲ್ಲಿ ಈ ಗಿಡ ಹಾಕಬಹುದು.